ವೀಡಿಯೋ ; ಭಾರತೀಯ ಸೇನೆಯ ಮೇಲೆ ಗ್ರನೇಡ್ ದಾಳಿಗೆ ಯತ್ನ, ಸಿಸಿಟಿಯಲ್ಲಿ ಭೀಕರ ದೃಷ್ಯ ಸೆರೆ!ಶ್ರೀನಗರ: ಕೆಟ್ಟರೂ ಬುದ್ಧಿ ಬಂದಿಲ್ಲ ಅನ್ನುವ ಹಾಗೆ, ಜಮ್ಮು ಮತ್ತು ಕಾಶ್ಮೀರದಲ್ಲಿ ನಿತ್ಯವೂ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗುತ್ತಿರುವ ಉಗ್ರರು, ಅಡಗಿ ಕುಳಿತು ದಾಳಿ ಮಾಡುವ ತಮ್ಮ ಹಳೆಯ ಚಾಳಿಯನ್ನು ಮಾತ್ರ ಇನ್ನೂ ಬಿಟ್ಟಿಲ್ಲ. ಇದಕ್ಕೆ ಪುಷ್ಠಿ ಎಂಬಂತೆ ಕಣಿವೆಯ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೇನಾ ವಾಹನದ ಮೇಲೆ ಉಗ್ರರು ಗ್ರೇನೆಡ್ ದಾಳಿ ಮಾಡಲು ಪ್ರಯತ್ನಿಸಿರುವ ದೃಶ್ಯ ಕ್ಯಾಮಾರಾದಲ್ಲಿ ಸೆರೆಯಾಗಿದೆ.

ಬಾರಾಮುಲ್ಲಾದಿಂದ ಶ್ರೀನಗರಕ್ಕೆ ಹೊರಟ್ಟಿದ್ದ ಸೇನಾ ವಾಹನಗಳ ಪೈಕಿ, ಉಗ್ರರು ಕೊನೆಯ ವಾಹನದ ಮೇಲೆ ಗ್ರೇನೆಡ್ ದಾಳಿ ಮಾಡಿದ್ದಾರೆ. ಆದರೆ ಗುರಿ ತಪ್ಪಿದ ಗ್ರೇನೆಡ್ ಸಾರ್ವಜನಿಕ ಸ್ಥಳದಲ್ಲಿ ಬಿದ್ದ ಪರಿಣಾಮವಾಗಿ ಆರು ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೇನಾ ವಾಹನಗಳು ಸೇತುವೆ ಮೇಲೆ ಬರುತ್ತಿದ್ದಂತೇ ಕೊನೆಯ ವಾಹನದ ಮೇಲೆ ಗ್ರೇನೆಡ್ ಎಸೆದು ಉಗ್ರರು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡ ನಾಗರಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸೇನಾ ಮೂಲಗಳು ಖಚಿತಪಡಿಸಿವೆ.

ಇದನ್ನೂ ಓದಿ :  ಕಾಶ್ಮೀರದ ಬಗ್ಗೆ ಮತ್ತೆ ಕ್ಯಾತೆ ತೆಗೆದ ಪಾಕಿಸ್ತಾನ ಈ ಬಾರಿ ಮಾಡಿದ್ದು ಮಾತ್ರ ಅಸಹನೀಯ!

ದಾಳಿ ನಡೆದ ಪ್ರದೇಶವನ್ನು ತಮ್ಮ ಸುಪರ್ದಿಗೆ ಪಡೆದಿರುವ ಯೋಧರು, ಗ್ರೇನೆಡ್ ಎಸೆದು ಪರಾರಿಯಾಗಿರುವ ಉಗ್ರರಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ವೀಡಿಯೋ ನೋಡಿ