ಶಾಕಿಂಗ್ ವೀಡಿಯೋ ನೋಡಿ: ಭಾರತ ಪಾಕ್ ಗಡಿಯಲ್ಲಿ ಸುರಂಗ ಪತ್ತೆಹಚ್ಚಿದ ಯೋಧರು!ಸಾಂಬಾ: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಭಾರತ-ಪಾಕ್‌ ಗಡಿಯಲ್ಲಿ ರಹಸ್ಯ ಸುರಂಗ ಮಾರ್ಗ ಪತ್ತೆಯಾಗಿದೆ. ಭಾರತದೊಳಕ್ಕೆ ಉಗ್ರರನ್ನು ನುಸುಳುವಿಕೆಗೆ ಈ ಸುರಂಗವನ್ನು ಬಳಸಲಾಗುತ್ತಿದೆ ಎಂದು ಶಂಕಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಸೇನಾ ಪಡೆ ಮೂಲಗಳಿಂದ ತಿಳಿದು ಬಂದಿದೆ.

ಸೇನಾಪಡೆ ಯೋಧರ ಪೆಟ್ರೋಲಿಂಗ್‌ ವೇಳೆ ಸುರಂಗ ಮಾರ್ಗ ಪತ್ತೆಯಾಗಿದ್ದು, ಗಡಿ ರಕ್ಷಣಾ ಬೇಲಿಯಿಂದ ಸುಮಾರು 50ಮೀಟರ್‌ ನಷ್ಟು ಒಳಭಾಗದಲ್ಲಿ ಸುರಂಗ ಪತ್ತೆಯಾಗಿದೆ. ಪಾಕಿಸ್ತಾನದ ಗುಲ್ಜರ್‌ ಬಾರ್ಡರ್‌ ಪೋಸ್ಟ್‌ನಿಂದ ಸುಮಾರು 700 ಮೀಟರ್‌ ದೂರದಲ್ಲಿದೆ

ಕೆಲ ದಿನಗಳ ಹಿಂದೆ ಮಳೆಯಾಗಿದ್ದರಿಂದ ಮಣ್ಣು ಮೆತ್ತಗಾಗಿದೆ. ಕೆಲವೆಡೆ ನೆಲ ಕುಸಿದಿರುವಂತೆ, ಒಳಭಾಗದಲ್ಲಿ ಟೊಳ್ಳಾಗಿರುವಂತೆ ಗೋಚರಿಸಿದೆ. ಮಣ್ಣು ಸಡಿಲಗೊಂಡಂತೆ ಸುರಂಗ ಇರುವುದು ತಿಳಿದು ಬಂದಿದೆ ಎಂದು ಹಿರಿಯ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ತಕ್ಷಣ ಕಾರ್ಯಾಚರಣೆ ಕೈಗೊಂಡು ಪರೀಕ್ಷಿಸಲಾಗಿದೆ. ಸುರಂಗ ಸಂಪೂರ್ಣವಾಗಿ ನಿರ್ಮಾಣಗೊಂಡಿರಲಿಲ್ಲ. 20 ಮೀಟರ್‌ನಷ್ಟು ದೂರಕ್ಕೆ ಸುರಂಗ ಇರುವುದು ಬೆಳಕಿಗೆ ಬಂದಿದೆ. 25 ಮೀಟರ್‌ನಷ್ಟು ಆಳದಲ್ಲಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕಾರ್ಯಾಚರಣೆಗೆ ಸೇನಾಪಡೆ ಮುಂದಾಗಿದೆ. ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ