ಭಾರತೀಯ ಸೇನೆಯ ಪ್ಯಾರ ಕಮಾಂಡೋಗಳಿಗೆ ಕೊಡುವ ಟ್ರೈನಿಂಗ್ ಹೇಗಿರುತ್ತೆ ಅಂತ ಗೊತ್ತಾದ್ರೆ ಬೆಚ್ಚಿಬೀಳ್ತೀರಾ!

ಪ್ಯಾರಾ ಕಮಾಂಡೋ ಪಡೆಯನ್ನು 1956 ರಲ್ಲಿ ಸ್ಥಾಪಿಸಲಾಯಿತು. ಪ್ಯಾರಾ ಕಮಾಂಡೋ ಭಾರತೀಯ ಸೇನೆಯ ಅತ್ಯುತ್ತಮ ತರಬೇತಿ ಪಡೆದ ಸೇನಾಪಡೆಯಾಗಿದೆ. ವಿಶೇಷ ಕಾರ್ಯಾಚರಣೆಗಳಲ್ಲಿ ಈ ಪಡೆಯನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಅದು ದೇಶದಲ್ಲೇ ಇರಲಿ, ವಿದೇಶದಲ್ಲೇ ಇರಲಿ ಈ ಪಡೆ ಯಾವುದಕ್ಕೂ ರೆಡಿ. ಶತ್ರುಗಳ ಗುಹೆ ಒಳಗೆ ನುಗ್ಗಿ ಬೇಟೆಯಾಡುವುದರಲ್ಲಿ ಈ ವಿಶೇಷ ಪಡೆ ಎತ್ತಿದ ಕೈ. ಪ್ಯಾರಾ ಕಮಾಂಡೋ ತರಬೇತಿ ಮಾತ್ರ ಭೀಕರವಾಗಿರುತ್ತದೆ. ಅದನ್ನು ನಾವು ನೀವು ಉಳಿಸಿಕೊಳ್ಳಲು ಸಹ ಸಾಧ್ಯವಿಲ್ಲ.

ಇವರ ತರಬೇತಿ ಆರಂಭವಾಗೋದು ಸರಿಯಾಗಿ ಮಧ್ಯರಾತ್ರಿ ಎರಡು ಗಂಟೆಗೆ 15 ನಿಮಿಷಕ್ಕೆ. ರಕ್ತವನ್ನು ಹೆಪ್ಪುಗಟ್ಟಿಸುವಂತಹ ಚಳಿಯ ಪ್ರದೇಶ ಅದು. ಇನ್ನು ಕೆಲವರಿಗೆ ಸರಿಯಾಗಿ ನಿದ್ದೆ ಕೂಡ ಹತ್ತಿ ರುವುದಿಲ್ಲ ಆಗ್ಲೇ ಅವರನ್ನು ಎಬ್ಬಿಸಲಾಗುತ್ತದೆ. ಸತತ 6 ಗಂಟೆಗಳ ತರಬೇತಿ ಆರಂಭವಾಗುತ್ತೆ. ಈ ತರಬೇತಿ ಹೇಗಿರುತ್ತೆ ಅಂದರೆ ಅಲ್ಲಿ ಸೋಲುವವರೆಗೂ ಬಿಡುವುದೇ ಇಲ್ಲ. ಆದರೆ ಅಲ್ಲಿನ ಯೋಧರು ಸೋಲುವುದೇ ಇಲ್ಲ.

30 ಕೆಜಿ ಬ್ಯಾಗ್ ಹೊತ್ತುಕೊಂಡು, ಎರಡು ಗಂಟೆಗಳ ಕಾಲ ಪರ್ವತ ಪ್ರದೇಶದಲ್ಲಿ ನಡೆಯಬೇಕು. ಅಲ್ಲಿಂದ ಮತ್ತೆ ಸೂರ್ಯ ಹುಟ್ಟುವವರೆಗೂ ನಡೆಯಬೇಕು. ಎಲ್ಲೂ ನಿಲ್ಲುವ ಹಾಗಿಲ್ಲ. 30 ಕೆಜಿ ಭಾರದ ಜೊತೆಗೆ 7 ಕೆಜಿ ಗನ್ ಅನ್ನು ಕೂಡ ಈ ಸೈನಿಕರು ಹಿಡಿದುಕೊಂಡಿರುತ್ತಾರೆ. ಸೂರ್ಯ ಹುಟ್ಟಿದ ಮೇಲೆ ಭಾರ ಏನೋ ಕೆಳಗೆ ಇಳಿಸಲಾಗುತ್ತದೆ. ಆದರೆ ಅದಕ್ಕಿಂತ ಹೆಚ್ಚಿನ ಭಾರ ಹೆಗಲ ಮೇಲೆ ಇರುತ್ತೆ. ಯಾಕೆಂದರೆ ಒಬ್ಬರನ್ನು ಒಬ್ಬರು ತಮ್ಮ ಭುಜಗಳ ಮೇಲೆ ಎತ್ತುಕೊಂಡು ಹೋಗಬೇಕು. 20 ಲಿಟರ್ ತೂಕದ ಎರಡು ಕ್ಯಾನುಗಳನ್ನು ಎರಡು ಕೈಯಲ್ಲಿ ಹಿಡಿದುಕೊಂಡು ಒಂದುವರೆ ಕಿಲೋಮೀಟರ್ ನಷ್ಟು ನಡೆಯಬೇಕು. ನಂತರ 60ರಿಂದ 80 ಕೆಜಿ ತೂಕದ ದೊಡ್ಡ ಟೈಯರ್ ಅನ್ನು ಹೊತ್ತು ಸಾಗಬೇಕು. ನಂತರ 60 ರಿಂದ 70 ಕೆಜಿ ತೂಕದ ಮರದ ದಿಮ್ಮಿಗಳನ್ನು ಹೊತ್ತು ಸಾಗಬೇಕು. ಈ ಮೂರು ಸುತ್ತುಗಳನ್ನು ಪೂರ್ಣಗೊಳಿಸಲು ಕೇವಲ ಒಂದೊಂದು ಗಂಟೆಗಳನ್ನು ನೀಡಲಾಗುತ್ತದೆ.ಇದು ಅಕ್ಷರಸಹ ನರಕಯಾತನೆ ಆದರೆ ಯಾರೊಬ್ಬರೂ ಸಹ ಸೋಲನ್ನು ಒಪ್ಪುವುದಿಲ್ಲ ಯಾಕೆಂದರೆ ಅವರಲ್ಲಿ ಹರಿಯುತ್ತಿರುವುದು ದೇಶಭಕ್ತಿಯ ರಕ್ತ.

ಅಲ್ಲಿಯವರೆಗೂ ಅವರಿಗೆ ತಿಂಡಿ ಹಾಗೂ ನೀರನ್ನು ಕೊಡುವುದಿಲ್ಲ. ನಂತರ 11 ಫೀಟ್ ಆಳದ ನೀರಿನ ಟ್ಯಾಂಕಿನಲ್ಲಿ ಸೈನಿಕರನ್ನು ಹಾಕಲಾಗುತ್ತೆ. ಅದು ಮಂಜುಗಡ್ಡೆಯ ತಾಪಮಾನದ ನೀರು. ಕೈಕಾಲು ಕಟ್ಟಿ ಸೈನಿಕರನ್ನು ಟ್ಯಾಂಕ್ ಒಳಗಡೆ ಹಾಕಲಾಗುತ್ತದೆ. ಇದು ಮುಗಿದ ನಂತರ ಸೈನಿಕರಿಗೆ ನೀರು ಕೊಡಲಾಗುತ್ತೆ. ನಂತರ ಥಿಯರಿ ಪರೀಕ್ಷೆ ಇರುತ್ತದೆ. ಅದರಲ್ಲಿ ಅವರು ಸಾಗಿಬಂದ ಹಾದಿಯಲ್ಲಿ ಯಾವ ವಸ್ತುಗಳಿವೆ ಎಂಬ ಪ್ರಶ್ನೆಯನ್ನು ಕೇಳಿರುತ್ತಾರೆ. ಅವರು ಎಲ್ಲವನ್ನೂ ನೆನಪಿಟ್ಟುಕೊಳ್ಳಬೇಕು. ಇದಾದ ನಂತರ ಮತ್ತೆ ವೈದ್ಯಕೀಯ ಪರೀಕ್ಷೆ ನಡೆಯುತ್ತದೆ. ಈ ಪರೀಕ್ಷೆಯಲ್ಲಿ ಪಾಸಾದ ನಂತರ ಮತ್ತೆ ಭಾರಹೊತ್ತು ಹತ್ತು ಕಿಲೋಮೀಟರ್ ನಡೆಯಬೇಕು. ಅಲ್ಲಿಗೆ ಸಂಪೂರ್ಣ ಕತ್ತಲಾಗಿರುತ್ತೆ. ಇದಾದ ನಂತರ ಅವರಿಗೆ ಊಟ ಕೊಡುತ್ತಾರೆ. ಅಲ್ಲಿಗೆ 26 ಗಂಟೆಗಳ ಟ್ರೈನಿಂಗ್ ಮುಗಿದಿರುತ್ತದೆ. ಇವರು ಇಷ್ಟೆಲ್ಲಾ ಮಾಡೋದು ಅವರಿಗೋಸ್ಕರ ಅಲ್ಲ ದೇಶಕ್ಕೋಸ್ಕರ. ಇವರ ತ್ಯಾಗಕ್ಕೆ ನಮ್ಮದೊಂದು ದೊಡ್ಡ ಸಲಾಂ.