ಸ್ವಿಸ್ ಬ್ಯಾಂಕ್‍ನಲ್ಲಿ ಹಣ ಇಟ್ಟಿರುವ ಪ್ರಮುಖ ರಾಷ್ಟ್ರಗಳು ಯಾವವು ಗೊತ್ತಾ?ಟಾಪ್ 10 ದೇಶಗಳು:
ವೆಸ್ಟ್ ಇಂಡೀಸ್, ಫ್ರಾನ್ಸ್, ಹಾಂಕಾಂಗ್, ಜರ್ಮನಿ, ಸಿಂಗಾಪುರ, ಲಕ್ಸೆಂಬರ್ಗ್, ಕೇಮನ್ ದ್ವೀಪಗಳು ಮತ್ತು ಬಹಾಮಾಸ್ ಅನುಕ್ರಮವಾಗಿ ಟಾಪ್ 10 ಸ್ಥಾನವನ್ನು ಪಡೆದಿವೆ. ಪಟ್ಟಿಯಲ್ಲಿ ಭಾರತ 51ನೇ ಸ್ಥಾನ ಪಡೆದಿದೆ.

ಕಪ್ಪುಹಣವೇ?
ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್‍ಗಳು ಇಡಲಾಗುತ್ತದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಇಲ್ಲಿ ಠೇವಣಿ ಇರಿಸಿದ್ದ ಹಣಗಳು ಎಲ್ಲವೂ ಕಪ್ಪು ಹಣ ಎಂದೇ ಗುರುತಿಸಲಾಗುತ್ತಿತ್ತು. ಆದರೆ ಈಗ ವ್ಯವಸ್ಥೆ ಬದಲಾಗಿದ್ದು ತನ್ನ ಬ್ಯಾಂಕ್‍ಗಳಲ್ಲಿ ಹಣ ಇಟ್ಟ ವಿವರವನ್ನು ಸರ್ಕಾರಗಳಿಗೆ ನೀಡುತ್ತದೆ.  ಹೀಗಾಗಿ ಇಲ್ಲಿ ಠೇವಣಿ ಇಟ್ಟ ಎಲ್ಲ ಹಣವೂ ಕಪ್ಪು ಹಣ ಎಂದು ಕರೆಯಲು ಬರುವುದಿಲ್ಲ. ಈಗ ‘ಕಪ್ಪು ಕುಳಗಳು’ಸ್ವಿಸ್ ಬ್ಯಾಂಕುಗಳಲ್ಲಿ ಹೆಚ್ಚಿನ ಹಣವನ್ನು ಇಡುತ್ತಿಲ್ಲ.

ಭಾರತೀಯ ವೈಯಕ್ತಿಕ ಹಣ ಇಳಿಕೆ:
2019ರಲ್ಲಿ ಭಾರತೀಯರು ವೈಯಕ್ತಿಕವಾಗಿ 4,500 ಕೋಟಿ ರೂ. ಇಟ್ಟಿದ್ದರು. ಆದರೆ ಈಗ ಇದು 4,000 ಕೋಟಿ ರೂ.ಗೆ ಇಳಿಕೆಯಾಗಿದೆ