ಕರ್ನಾಟಕದ ದಟ್ಟ ಕಾಡಿನಲ್ಲಿ ಆನೆ ಲದ್ದಿಯ ಟೀ ಪಾರ್ಟಿ ; ಅಕ್ಷಯ್ ಕುಮಾರ್ ಜೊತೆ ಬೇರ್ ಗ್ರಿಲ್ಸ್!ಮುಂಬೈ: ಮ್ಯಾನ್ ವರ್ಸಸ್ ವೈಲ್ಡ್ ಖ್ಯಾತಿಯ ಬೇರ್ ಗ್ರಿಲ್ಸ್ ಅವರು ಪ್ರಧಾನಿ ಮೋದಿ, ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ದಟ್ಟಾರಣ್ಯದಲ್ಲಿ ಸುತ್ತಿಸಿದ್ದರು. ಇದೀಗ ಬಾಲಿವುಡ್ ಆ್ಯಕ್ಷನ್ ಸ್ಟಾರ್ ಅಕ್ಷಯ್ ಕುಮಾರ್ ಅವರನ್ನು ಬಂಡೀಪುರದ ಕಾಡು ಮೇಡುಗಳನ್ನು ಸುತ್ತಿಸಿದ್ದಾರೆ. ಕರ್ನಾಟಕದ ಬಂಡೀಪುರದ ಅಕ್ಷಯ್ ಕುಮಾರ್ ಮತ್ತು ಬೇರ್ ಗ್ರಿಲ್ಸ್ ಸಾಹಸ ಮಾಡಿದ್ದಾರೆ. ಈ ಇಂಟು ದಿ ವೈಲ್ಡ್ ಸಂಚಿಕೆ ಟ್ರೈಲರ್ ಅಕ್ಷಯ್ ಕುಮಾರ್ ಬಿಡುಗಡೆ ಮಾಡಿದ್ದಾರೆ.

ಮತ್ತೊಂದು ಅಚ್ಚರಿಯ ವಿಷಯವೆಂದರೆ ಬೇರ್ ಗ್ರಿಲ್ಸ್ ಅವರು ಆನೆ ಲದ್ದಿ ಟೀ ನೀಡಿ ಅಚ್ಚರಿ ಮೂಡಿಸಿದರು ಎಂದು ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಂಚಿಕೆ ಸೆಪ್ಟೆಂಬರ್ 11 ಮತ್ತು ಸೆಪ್ಟೆಂಬರ್ 14ರಂದು ಡಿಸ್ಕವರಿ ಪ್ಲಸ್ ಮತ್ತು ಡಿಸ್ಕವರಿ ವಾಹಿನಿಗಳಲ್ಲಿ ಪ್ರಸಾರ ಆಗಲಿವೆ.