ಸಿಂಘಂ ಅಣ್ಣಾಮಲೈ ಎಂದೇ ಖ್ಯಾತಿಯಾಗಿ ಕರ್ನಾಟಕದ ಮನೆ ಮಗನಾಗಿದ್ದ ಮಾಜಿ IPS ಅಧಿಕಾರಿ ಅಣ್ಣಾಮಲೈ ಕುಪ್ಪುಸ್ವಾಮಿ ಅವರು ಕೆಲ ದಿನಗಳ ಹಿಂದಷ್ಟೇ ಬಿಜೆಪಿ ಸೇರಿದ್ದರು. ಈಗ ಅವರಿಗೆ ಮಹತ್ವದ ಹುದ್ದೆಯನ್ನು ಕೂಡ ನೀಡಲಾಗಿದೆ.
ಹೌದು, ಬಿಜೆಪಿ ಸೇರಿದ ಒಂದೇ ವಾರದ ಒಳಗೆ ಅಣ್ಣಾಮಲೈ ಅವರನ್ನು ತಮಿಳುನಾಡು ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಮುಖಂಡ ಮುರಳಿಧರ ರಾವ್, ರಾಜ್ಯ ಅಧ್ಯಕ್ಷರಾರ ಮುರುಗನ್ ಅವರ ಸಮ್ಮುಖದಲ್ಲಿ ಈ ಹುದ್ದೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಪಕ್ಷ ಸೇರಿದ ಕೂಡಲೇ ಕರ್ನಾಟಕದ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅಣ್ಣಾಮಲೈ, ನನಗೆ ಯಾವುದೇ ಹುದ್ದೆಯ ಆಸೆ ಇಲ್ಲ ನಾನೋರ್ವ ಸಾಮಾನ್ಯ ಕಾರ್ಯಕರ್ತನಾಗಿ ಸೇರ್ಪಡೆಯಾಗಿದ್ದೇನೆ. ಬಿಜೆಪಿ ಒಂದು ರಾಷ್ಟ್ರೀಯವಾದಿ ಪಕ್ಷ, ದೇಶದ ಭದ್ರತೆಗೆ ಹಾಗೂ ಜನಸಾಮಾನ್ಯರಿಗೆ ಹೆಚ್ಚು ಒತ್ತು ನೀಡುತ್ತದೆ. ನಾನೂ ಓರ್ವ ರಾಷ್ಟ್ರೀಯವಾದಿ ಆದ್ದರಿಂದ ನನಗೂ ಬಿಜೆಪಿಗೂ 100% ಮ್ಯಾಚ್ ಆಗುತ್ತದೆ ಎಂದು ಹೇಳಿದ್ದರು.