ದೇಗುಲ ಒಡೆದು ಕಟ್ಟಿದ ಮಸೀದಿಯನ್ನು ಧ್ವಂ ಸ ಮಾಡಲು ಮೋದಿಗೆ ಪತ್ರ ಬರೆದ ಮುಸ್ಲಿಂ ಮುಖಂಡಲಖನೌ: ಬಾಬ್ರಿ ಮಸೀದಿಯನ್ನು 1992ರಲ್ಲಿ ಧ್ವಂಸ ಮಾಡಿದ್ದು ಇಡೀ ದೇಶದಲ್ಲಿ ಅದೆಷ್ಟು ದೊಡ್ಡ ಸಂಚಲನ, ವಿವಾದ ಮೂಡಿಸಿತ್ತು ಎಂಬುದು ಇತಿಹಾಸ. ಈಗ, ಅದೇ ಜಾಗದಲ್ಲಿ ರಾಮ ಮಂದಿರವೂ ನಿರ್ಮಾಣವಾಗುತ್ತದೆ… ಹಾಗೇ ಬಾಬ್ರಿ ಮಸೀದಿ ಧ್ವಂ ಸಕ್ಕೆ ಸಂಬಂಧಪಟ್ಟಂತೆ ಆರೋಪಿಗಳ ಸ್ಥಾನದಲ್ಲಿದ್ದ ಮುಖಂಡರಿಗೆ ಇಂದು ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಯನ್ನೂ ನೀಡಿದೆ. ಈ ಮಧ್ಯೆ ಶಿಯಾ ವಕ್ಫ್ ಬೋರ್ಡ್ನ ಮಾಜಿ ಅಧ್ಯಕ್ಷ ವಾಸಿಂ ರಿಝ್ವಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರವೊಂದು ಕುತೂಹಲ ಮೂಡಿಸಿದೆ. ಪೂಜಾ ಸ್ಥಳಗಳ ಕಾಯ್ದೆ- 1991ನ್ನು ರದ್ದುಗೊಳಿಸಿ, ಮೊಘಲ್ ಕಾಲದಲ್ಲಿ ದೇವಸ್ಥಾನಗಳನ್ನು ಒಡೆದು ನಿರ್ಮಿಸಲಾದ ಎಲ್ಲ ಮಸೀದಿಗಳನ್ನೂ ಈಗ ಒಡೆದು, ಅಲ್ಲಿ ದೇವಾಲಯಗಳನ್ನು ಕಟ್ಟಿ ಎಂದು ವಾಸಿಂ ರಿಝ್ವಿ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

1991ರಲ್ಲಿ ಕಾಂಗ್ರೆಸ್ ಸರ್ಕಾರ ಮುಸ್ಲಿಮರನ್ನು ಓಲೈಸಲು ಈ ಕಾಯ್ದೆಯನ್ನು ತಂದಿದೆ. ಅದನ್ನೀಗ ರದ್ದು ಮಾಡಿ. ಮೊಘಲ್ ಕಾಲದಲ್ಲಿ ಹಲವು ದೇವಾಲಯಗಳನ್ನು ಒಡೆದು ಮಸೀದಿಗಳನ್ನು ಕಟ್ಟಲಾಗಿದೆ. ಈಗ ಆ ಮಸೀದಿಗಳನ್ನು ಧ್ವಂ ಸ ಮಾಡಿ, ಹಿಂದುಗಳ ದೇವಾಲಯವನ್ನು ಪುನಃ ನಿರ್ಮಾಣ ಮಾಡಿ ಎಂದು ಒತ್ತಾಯಿಸಿದ್ದಾರೆ.
ಪತ್ರ ಬರೆದ ನಂತರ ವಿಡಿಯೋ ಮೆಸೇಜ್ವೊಂದನ್ನು ಬಿಡುಗಡೆ ಮಾಡಿರುವ ರಿಝ್ವಿ, ತಾವು ಪ್ರಧಾನಿಗೆ ಪತ್ರ ಬರೆದಿರುವುದನ್ನು ಒಪ್ಪಿಕೊಂಡಿದ್ದಾರೆ. 1991ರ ಪೂಜಾಸ್ಥಳಗಳ ಕಾಯ್ದೆಯಿಂದ ಹಲವು ಕಾನೂನು ಬಾಹಿರವಾಗಿ ನಿರ್ಮಿಸಲಾದ ಮಸೀದಿಗಳಿಗೆ ರಕ್ಷಣೆ ಸಿಕ್ಕಂತಾಗಿದೆ ಎಂದೂ ಅವರು ಹೇಳಿದ್ದಾರೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800