ಸೋನಿಯಾಗಾಂಧಿಯವರು ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಪಟ್ಟ ಏಕೆ ಬಿಟ್ಟುಕೊಟ್ಟರು’ ?! ; ಇಲ್ಲಿದೆ ಒಬಾಮಾ ಬಿಚ್ಚಿಟ್ಟ ಸೀಕ್ರೆಟ್!ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಬರೆದಿರುವ ಆತ್ಮಕಥನ ‘ಎ ಪ್ರಾಮಿಸ್ಡ್ ಲ್ಯಾಂಡ್’ ಪುಸ್ತಕ ಇದೀಗ ಭಾರಿ ಸುದ್ದಿ ಮಾಡುತ್ತಿದೆ. ಹಲವಾರು ರಾಜಕೀಯ ಧುರೀಣರ ಕುರಿತು ಸಾಕಷ್ಟು ಅಧ್ಯಯನ ನಡೆಸಿ ಅವರ ಬಗ್ಗೆ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ತಾವು ಈ ಧುರೀಣರನ್ನು ಕಂಡ ರೀತಿಯ ಬಗ್ಗೆ ಅದರಲ್ಲಿ ವಿವರವಾಗಿ ತಿಳಿಸಲಾಗಿದೆ. ಒಬಾಮಾ 2009ರಿಂದ 2017ರವರೆಗೆ ಅಮೆರಿಕದ ಅಧ್ಯಕ್ಷರಾಗಿದ್ದರು. 2013-14ರವರೆಗೆ ಭಾರತದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಆಗ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರೊಂದಿಗೆ ಒಬಾಮಾ ಸಂಪರ್ಕದಲ್ಲಿ ಇದ್ದರು. ಆ ಸಂದರ್ಭದಲ್ಲಿ ಇವರೆಲ್ಲರೂ ವ್ಯವಹರಿಸಿದ ರೀತಿಯ ಕುರಿತು ತಮ್ಮ ಅನಿಸಿಕೆಗಳನ್ನು ನೇರವಾಗಿ ಒಬಾಮಾ ಹಂಚಿಕೊಂಡಿದ್ದಾರೆ. 768 ಪುಟಗಳಿರುವ ಈ ಪುಸ್ತಕದಲ್ಲಿರುವ ಅನೇಕ ವಿಷಯಗಳು ಭಾರತದ ರಾಜಕೀಯದಲ್ಲಿ, ಅದರಲ್ಲಿಯೂ ಸೋನಿಯಾಗಾಂಧಿ ಕುಟುಂಬದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ.

ಅದರಲ್ಲಿಯೂ ವಿಶೇಷವಾಗಿ ಸೋನಿಯಾಗಾಂಧಿಯವರು ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಪಟ್ಟ ಏಕೆ ಬಿಟ್ಟುಕೊಟ್ಟರು ಎಂಬ ವಿಚಾರದ ಬಗ್ಗೆ ಉಲ್ಲೇಖಿಸಿದ್ದು, ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕಾರಣ ನೀಡಿರುವ ಒಬಾಮಾ, ರಾಹುಲ್ ಗಾಂಧಿಯ ರಾಜಕೀಯ ಬೆಳವಣಿಗೆಗೆ ಮೃದು ಸ್ವಭಾವದ ಮನಮೋಹನ್ ಸಿಂಗ್ ಯಾವುದೇ ಕಾರಣಕ್ಕೂ ಮುಳುವಾಗಲಾರರು ಎಂಬುದನ್ನು ಅರಿತೇ. ದೇಶದ ಆರ್ಥಿಕ ಸುಧಾರಣೆಯಲ್ಲಿ ಮನಮೋಹನ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಮುಂಬೈ ಮೇಲೆ ದಾಳಿ ನಡೆದ ಬಳಿಕ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮನಮೋಹನ್ ಸಿಂಗ್ ಸಿದ್ಧರಿರಲಿಲ್ಲ. ಇದು ಮನಮೋಹನ್ ಸಿಂಗ್ ರಾಜಕೀಯ ಜೀವನಕ್ಕೆ ಮುಳುವಾಯಿತು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ :  ರಾಮ್ ಪ್ರಸಾದ ಅವರ ಈ ಘಟನೆ ಮೈ ಜುಮ್ಮ ಎನಿಸುತ್ತದೆ. ನೋಡಿ

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/