ಬಿ ಎಸ್ ಎನ್ ಎಲ್ ಗ್ರಾಹಕರಿಗಾಗಿ ಸ್ಪಂದಿಸಿದ ಪ್ರಧಾನಿ ಮೋದಿ!ಈಗಿನ ಜಮಾನ ೪ ಜಿ ದುನಿಯಾದಲ್ಲಿ ಬ್ಯುಸಿಯಾಗಿದ್ದರೆ ಇನ್ನೂ ೩ ಜಿ ಸರ್ವಿಸ್ ಅನ್ನೇ ನೆಟ್ಟಗೆ ನೀಡದೇ ಜನರ ಜೊತೆ ಚೆಲ್ಲಾಟವಾಡುತ್ತಿರುವ ಬಿಎಸ್ ಎನ್ ಎಲ್ ಗೆ ಸರ್ಕಾರ ಗ್ಲೂಕೋಸ್ ನೀಡುವ ಪ್ರಯತ್ನ ಮಾಡಿದೆ.
ಕೇಂದ್ರ ಸರ್ಕಾರದ ಸ್ವಾಮ್ಯದ ಭಾರತ್ ಸಂಚಾರ್ ನಿಗಮವನ್ನೇ ವಿನಿಮಯ ಮಾಧ್ಯಮವಾಗಿ ಎಲ್ಲಾ ಸಚಿವಾಲಯಗಳು ಮತ್ತು ಸಾರ್ವಜನಿಕ ಇಲಾಖೆಗಳು ಉಪಯೋಗಿಸಬೇಕೆಂದು ತಾಕೀತು ಮಾಡಿದೆ. ದೂರ ಸಂಪರ್ಕ ಇಲಾಖೆ ಲಿಖಿತ ರೂಪದ ಆದೇಶ ಹೊರಡಿಸಿದ್ದು ಎಲ್ಲಾ ಸಚಿವಾಲಯಗಳು, ಕೇಂದ್ರ ಸರ್ಕಾರಿ ಸ್ವಾಮ್ಯದ ವಿವಿಧ ಇಲಾಖೆಗಳು ಬಿಎಸ್ ಎನ್ ಎಲ್ ಮತ್ತು ಎಮ್. ಟಿ . ಎನ್. ಎಲ್ ಅನ್ನು ಬಳಸಬೇಕೆಂದು ಇದರಲ್ಲಿ ತಿಳಿಸಲಾಗಿದೆ. ಅಕ್ಟೋಬರ್ ೧೨ ರಂದು ಕೇಂದ್ರ ದೂರಸಂಪರ್ಕ ಸಚಿವಾಲಯ ಮತ್ತು ಹಣಕಾಸು ಸಚಿವಾಲಯಗಳು ಸಮಾಲೋಚನೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ.

ಕಳೆದ ವರ್ಷ ಬಿಎಸ್ ಎನ್ ಎಲ್ 15, 500 ಕೋಟಿ ಹಾಗೂ ಎಮ್ ಟಿ ಎನ್ ಎಲ್ 3,694 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದೆ ಎಂದಿ ದೂರ ಸಂಪರ್ಕ ಇಲಾಖೆ ಮಾಹಿತಿ ನೀಡಿದೆ. 2008 ರಲ್ಲಿವ2.9 ಕೋಟಿ ಇದ್ದ ವೈರ್ ಲೈನ್ ಗ್ರಾಹಕರ ಸಂಖ್ಯೆ ಪ್ರಸಕ್ತ ವರ್ಷ 80 ಲಕ್ಷದಷ್ಟು ಇಳಿಮುಖವಾಗಿದೆ. ಎಮ್ ಟಿ ಎಲ್ ನಲ್ಲಿ 2008 ರಲ್ಲಿ 35.4 ರಷ್ಟಿದ್ದ ಗ್ರಾಹಕರ ಸಂಖ್ಯೆ ಪ್ರಸ್ತುತ 30.7 ಕ್ಕೆ ಇಳಿದಿದೆ. ಈ ಎಲ್ಲಾ ಸಮಸ್ಯೆಗಳಿಂದ ಹೊರಬರಲು ಕೇಂದ್ರ ಸರ್ಕಾರವು ಬಿಎಸ್ ಎನ್ ಎಲ್ ಗೆ ದಾರಿಯೊಂದನ್ನು ತೋರಿಸಿದೆ. ಈ ದಾರಿಯನ್ನು ಬಳಸಿಕೊಂಡಾದರೂ ಬಿ ಎಸ್ ಎನ್ ಎಲ್ ಉಧ್ದಾರವಾಗುತ್ತಾ ಅನ್ನೋದನ್ನ ಕಾದು ನೋಡಬೇಕು. ಇಷ್ಟು ಪ್ರೋತ್ಸಾಹ ನೀಡಿದ ಮೇಲೂ ಬಿಎಸ್ ಎನ್ ಎಲ್ ಎಚ್ಚೆತ್ತುಕೊಳ್ಳದಿದ್ದರೆ ಮೋದಿ ಸರ್ಕಾರ ಇದಕ್ಕೆ ಎಳ್ಳು ನೀರು ಬಿಡುತ್ತಾರಾ ಎಂದು ಕಾದು ನೋಡಬೇಕು

ಜಾಹಿರಾತು : ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800