ಕೋವಿಡ್ 3ನೇ ಅಲೆಯ ಬಗ್ಗೆ ನಿಮಗೇನು ಗೊತ್ತು? ಇಲ್ಲಿದೆ ನೋಡಿ ನಿಬ್ಬೆರಗಾಗುವ ಮಾಹಿತಿ..!ಕೋವಿಡ್ 3 ನೇ ಅಲೆಯೂ ಭೀಕರವಾಗಿರಲಿದೆ ಎಂದು ವೈದ್ಯಕೀಯ ಲೋಕದಲ್ಲಿ ಸುದ್ದಿ ಹರಿದಾಡುತ್ತಿದೆ. ಕೊರೊನಾ 2ನೇ ಅಲೆ 108ದಿನ, 3 ನೇ ಅಲೆ 98ದಿನ ಇರಲಿದೆ ಎಂದು ಎಸ್‌ಬಿಐ ವರದಿಯಲ್ಲಿ ಎಚ್ಚರಿಕೆ ನೀಡಿದೆ.

ನವದೆಹಲಿ:ದೇಶದಲ್ಲಿ ಕೊರೋನಾ 2ನೇ ಅಲೆ ಸ್ವಲ್ಪ ಸ್ವಲ್ಪವಾಗಿ ಇಳಿಕೆಯಾಗುತ್ತಿದೆ. ಆದರೆ, ಮೂರನೇ ಅಲೆ ಕೂಡ 2 ನೇ ಅಲೆಯಷ್ಟೇ ಭೀಕರವಾಗಿರುವ ಸಾಧ್ಯತೆ ಇದೆ ಎನ್ನುವ ಗೊಂದಲ ಎಲ್ಲರನ್ನೂ ಕಾಡುತ್ತಿದೆ. ಈ ರೀತಿ ಆಗಬಹುದೆಂದು ಎಸ್‌ಬಿಐನ ವರದಿಯೊಂದು ತಿಳಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಘಟಿಸಿದ ಕೊರೋನಾ ವಿದ್ಯಮಾನಗಳ ಪ್ರಕಾರ ಹಾಗೂ ಆಧಾರದ ಮೇಲೆ ಈ ವರದಿ ಸಿದ್ದಪಡಿಸಲಾಗಿದೆ. ‘ ಎಸ್‌ಬಿಐನ ಇಕೋವ್ರಾಪ್ ‘ ವರದಿಯ ಪ್ರಕಾರ, ಕೊರೋನಾ 3ನೇ ಅಲೆ ಅಂತ್ಯಗೊಳ್ಳಲು 98 ದಿನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ :  ಈಶ್ವರಪ್ಪ ಮತ್ತೆ ಸಿಡಿಮಿಡಿ

ಪ್ರಮುಖವಾಗಿ ಕೊರೊನಾ ಸೋಂಕು ತೀವ್ರವಾಗಿ ಕಂಡ ದೇಶಗಳಲ್ಲಿ ಕೊರೊನಾ 2ನೇ ಅಲೆ ಕಡಿಮೆಯಾಗಲು 108 ದಿನ ಹಾಗೂ 3ನೇ ಅಲೆ ಮುಕ್ತಾಯಗೊಳ್ಳಲು 98 ದಿನಗಳನ್ನು ತೆಗೆದುಕೊಂಡಿದೆ. ಮೂರನೇ ಅಲೆ ತುತ್ತತುದಿ ತಲುಪಿದಾಗ 2 ನೇ ಅಲೆಯ 1.8 ಪಟ್ಟು ಅಧಿಕ ಕೇಸ್‌ಗಳು ದಾಖಲಾಗಬಹುದು. 2ನೇ ಅಲೆಯ ವೇಳೆ ದೈನಂದಿನ ಏಕದಿನದಲ್ಲಿ 4.14 ಲಕ್ಷಕೇಸ್ ದಾಖಲಾಗಿದ್ದು, ಈ ಪ್ರಕರಣಗಳ ಸಂಖ್ಯೆ ಗರಿಷ್ಠ ಎನಿಸಿಕೊಂಡಿದೆ. 2ನೇ ಅಲೆಯ ವೇಳೆ ದಾಖಲಾದ 1.7 ಲಕ್ಷ ಸಾವಿನ ಪ್ರಕರಣಗಳಿಗೆ ಹೋಲಿಸಿದರೆ, 3 ನೇ ಅಲೆಯವೇಳೆ ಸಾವಿನ ಪ್ರಮಾಣವನ್ನು 40,000 ಕ್ಕೆ ಇಳಿಸಬಹುದಾಗಿದೆ. ಇದು ಸಾಕಾರಗೊಳ್ಳಬೇಕು ಎಂದರೆ ಲಸಿಕೆ ಹಾಗೂ ಆರೋಗ್ಯ ಮೂಲಸೌಕರ್ಯ ಹೆಚ್ಚಿಸಬೇಕು ಎಂದು ಎಸ್‌ಬಿಐ ಹೇಳಿದೆ.