ಬೆಲೆ ಏರಿಕೆ ನಡುವೆಯೇ ಕೇಂದ್ರ ಸರ್ಕಾರ ಕೊಟ್ಟಿತು ಮತ್ತೊಂದು ಶಾಕ್!ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳು ಹಾಗೂ ಬೆಲೆ ಏರಿಕೆಯ ಬಿಸಿ ನಡುವೆ ಮತ್ತೆ ಚುನಾವಣಾ ಕಾವು ಶುರುವಾಗಿದೆ. 2021ರ ಮೊದಲ ಚುನಾವಣೆಗೆ ಸಿದ್ಧತೆ ನಡೆದಿದೆ. ಇನ್ನು ಕೆಲವು ತಿಂಗಳಲ್ಲಿ ವಿಧಾನಸಭೆ ಅವಧಿ ಪೂರ್ಣಗೊಳ್ಳಲಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೆರಿಗಳ ವಿಧಾನಸಭೆಗೆ ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕ ಪ್ರಕಟಿಸಿದೆ.

ನಾಲ್ಕು ರಾಜ್ಯಗಳು ಹಾಗೂ ಪುದುಚೆರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗಳಿಗೆ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದರು. ಕೊರೊನಾ ವೈರಸ್ ಸೋಂಕಿನ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಚುನಾವಣೆ ನಡೆಸಲಾಗುವುದು. ಇದರ ಜತೆಗೆ ಐದು ರಾಜ್ಯಗಳಲ್ಲಿನ ಹಬ್ಬ ಆಚರಣೆಗಳು ಮತ್ತು ಪರೀಕ್ಷೆಗಳನ್ನು ಸಹ ಗಮನದಲ್ಲಿರಿಸಲಾಗಿದೆ ಎಂದು ಅವರು ಹೇಳಿದರು.

ಪಶ್ಚಿಮ ಬಂಗಾಳದ 294, ತಮಿಳುನಾಡಿನ 234, ಕೇರಳದ 140, ಅಸ್ಸಾಂನ 16 ಹಾಗೂ ಪುದುಚೆರಿಯ 33 ಸೀಟುಗಳಿಗೆ (30 ಚುನಾಯಿತ ಮತ್ತು 3 ಕೇಂದ್ರದಿಂದ ನಾಮನಿರ್ದೇಶನಗೊಂಡವರು) ಚುನಾವಣೆ ನಡೆಯಲಿದೆ. ಕೋವಿಡ್ ಸಂಕಷ್ಟದ ನಡುವೆಯೇ ಕಳೆದ ನವೆಂಬರ್‌ನಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಸಿದ ಅನುಭವದ ಆಯೋಗಕ್ಕೆ ಇದೆ.