ಕಾರ್ಪೊರೇಟ್ ಕಂಪೆನಿಗಳಿಂದ ಬಿಜೆಪಿಗೆ ಹರಿದು ಬಂತು ಕೋಟಿ ಕೋಟಿ ಹಣ!2018 – 19 ನೇ ಸಾಲಿನಲ್ಲಿ ವಿವಿಧ ಕಾರ್ಪೋರೆಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ದೇಣಿಗೆಗಳನ್ನು ನೀಡಿದ ಪಟ್ಟಿ ಹೊರಬಂದಿದ್ದು ದೇಣಿಗೆಯಲ್ಲೂ ಬಿಜೆಪಿ ಸಿಂಹಪಾಲನ್ನು ಪಡೆದಿದೆ. ದೇಣಿಗೆ ಪಡೆಯುವುದರಲ್ಲಿ ಪ್ರಥಮ ಸ್ಥಾನವನ್ನು ಗಿಟ್ಟಿಸಿರುವ ರಾಷ್ಟ್ರೀಯ ಪಕ್ಷ ಬಿಜೆಪಿ ಒಟ್ಟು 698 ಕೋಟಿ ರೂಪಾಯಿಗಳನ್ನು ತನ್ನ ಖಜಾನೆಯಲ್ಲಿ ತುಂಬಿಸಿಕೊಂಡಿದೆ. ಕಳೆದ 70 ವರ್ಷಗಳಲಿಂದ ಆಡಳಿತ ಮಾಡಿದ್ದ ಕಾಂಗ್ರೆಸ್ ಮಾತ್ರ ಕೇವಲ 122.5 ರೂ. ಪಡೆದುಕೊಳ್ಳುವುದರಲ್ಲೇ ಸುಸ್ತಾಗಿದೆ.
ಪ್ರಜಾ ಪ್ರಭುತ್ವ ಸುಧಾರಣ ಸಂಸ್ಥೆ (ADR) ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಪಕ್ಷವಾರು ದೇಣಿಗೆಯ ವಿವರವನ್ನು ನೀಡಿದೆ. ಟಾಟಾ ಸಮೂಹದ Progressive Electoral Trust ಈ ಸಾಲಿನಲ್ಲಿ ಅತೀಹೆಚ್ಚು ದೇಣಿಗೆಯನ್ನು ನೀಡಿದೆ ಎಂದು ವಾರ್ಷಿಕ ಪಟ್ಟಿಯಲ್ಲಿ ADR ತಿಳಿಸಿದೆ. 2012-2019 ಈ ಏಳು ವರ್ಷಗಳ ಅವಧಿಯಲ್ಲಿ ಭಾರತೀಯ ಜನತಾ ಪಾರ್ಟಿಯು ಶೇ. 82ರಷ್ಟು ಪ್ರಗತಿಯನ್ನು ಕಂಡಿದೆ ಸಿ.ಪಿ.ಎಂ, ಎಐಟಿಸಿ, ಎನ್ ಸಿ ಪಿ, ಕಾಂಗ್ರೆಸ್ ಈ ಮೂರು ಬೃಹತ್ ರಾಷ್ಟ್ರೀಯ ಪಕ್ಷಗಳಿಗೆ ಹೋಲಿಸಿದರೆ ಏಳು ಪಟ್ಟು ಹೆಚ್ಚಿನ ಪ್ರಮಾಣದ ದೇಣಿಗೆಯನ್ನು ಬಿಜೆಪಿ ಪಡೆದುಕೊಂಡಿದೆ ಎಂದು ಈ ಪಟ್ಟಿ ವರದಿ ಮಾಡಿದೆ.

ಸದ್ಯ ಈ ದೇಣಿಗೆಯಲ್ಲಿ ಕೆಲವು ದೇಣಿಗೆಯ ಕುರಿತ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಿಲ್ಲವೆಂದೂ ಏಡಿಆರ್ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ಪಕ್ಷಗಳು ಒಟ್ಟು274 ಕಂಪೆನಿಗಳಿಂದ 13.36 ಕೋಟಿಯನ್ನು ಕಂಪೆನಿಗಳ ಪ್ಯಾನ್ ಮತ್ತು ವಿಳಾಸ ಪಡೆಯದೆ ದೇಣಿಗೆ ಸಂಗ್ರಹಿಸಿದೆ ಎಂದೂ ಇದು ವರದಿ ಮಾಡಿದ್ದು , ಪರಿಪೂರ್ಣ ಮಾಹಿತಯನ್ನು ತೆಗೆದುಕೊಂಡೇ ದೇಣಿಗೆ ಸಂಗ್ರಹಿಸಬೇಕೆಂದೂ, ಆಗ ಗೋಲ್ ಮಾಲನ್ನು ‌ತಡೆಯಬಹುದೆಂದೂ ಎಡಿಆರ್ ಅಭಿಪ್ರಾಯಪಟ್ಟಿದೆ‌. ಮಾಹಿತಿ ನೀಡುವುದುಕಡ್ಡಾಯವಾಗಬೇಕಂತೆ
20, 000 ಕ್ಕಿಂತ ಹೆಚ್ಚಿನ ಮೊತ್ತದ ದೇಣಿಗೆ ನೀಡಬೇಕಾದರೆ ಆ ನಿರ್ದಿಷ್ಟ ಕಂಪೆನಿ ಅಥವಾ ವ್ಯಕ್ತಿ ಹೆಸರು, ವಿಳಾಸ ಮತ್ತು ಪ್ಯಾನ್ ಅನ್ನು ಎ. 1 ರಿಂದ ಮಾ. 31ರ ಒಳಗಾಗಿ ಚುನಾವಣಾ ಆಯೋಗಕ್ಕೆ ಮಾಹಿತಿಯನ್ನು ನೀಡಿ ಪಾರದರ್ಶಕತೆ ಯನ್ನು ಕಾಪಾಡಬೇಕೆಂದು ಎಡಿಆರ್ ಶಿಫಾರಸ್ಸು ಮಾಡಿದೆ.

ಜಾಹಿರಾತು : ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800