ಕೆಎನ್ಎನ್ ಡಿಜಿಟಲ್ ಡೆಸ್ಕ್: ವಿಶ್ವದಾದ್ಯಂತ ಜಿಮೇಲ್, ಯೂಟ್ಯೂಬ್, ಗೂಗಲ್ ಸರ್ಚ್ ಸೇರಿದಂತೆ ಗೂಗಲ್ ಸೇವೆಗಳು ಡೌನ್ ಡೌನ್ ಆಗಿವೆ. ಇದನ್ನು ಡೌನ್ ಡಿಟೆಕ್ಟರ್ ದೃಢಪಡಿಸಿದ್ದು, ಸಮಸ್ಯೆಗಳು ಸುಮಾರು 11:56 GMT ಯಿಂದ ಪ್ರಾರಂಭವಾಗಿ, ವಿಶ್ವದಾದ್ಯಂತ ಬಳಕೆದಾರರು ಗೂಗಲ್ ಸೇವೆಗಳನ್ನು ಬಳಸಲು ಆಗಿಲ್ಲ ಎಂಬುದಾಗಿ ತಿಳಿದು ಬಂದಿದೆ. ಆದ್ರೇ ಗೂಗಲ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದಾಗ್ಯೂ, ಯೂಟ್ಯೂಬ್ ನೊಂದಿಗೆ ಸಮಸ್ಯೆಗಳನ್ನು ವರದಿ ಮಾಡಿದವರಲ್ಲಿ 54% ಮಂದಿ ವೆಬ್ ಸೈಟ್ ಅನ್ನು ಪ್ರವೇಶಿಸಲು ಸಾಧ್ಯವಾಗಿಲ್ಲ.
42% ವೀಡಿಯೊಗಳನ್ನು ವೀಕ್ಷಿಸಲು ಸಾಧ್ಯವಾಗಿಲ್ಲ. 3% ಮಂದಿ ಲಾಗ್ ಇನ್ ಆಗಲು ಒದ್ದಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಜಿಮೇಲ್ ನೊಂದಿಗಿನ ಸಮಸ್ಯೆಗಳನ್ನು ವರದಿ ಮಾಡಿದವರಲ್ಲಿ 75% ಮಂದಿ ಲಾಗ್ ಇನ್ ಆಗಲು ಸಾಧ್ಯವಿಲ್ಲ, 15% ವೆಬ್ ಸೈಟ್ ಪ್ರವೇಶಿಸಲು ಸಾಧ್ಯವಿಲ್ಲ, ಮತ್ತು 8% ಮಂದಿ ಸಂದೇಶಗಳನ್ನು ಸ್ವೀಕರಿಸುತ್ತಿಲ್ಲ ಎಂದು ಹೇಳಿದ್ದಾರೆ. ಡೌನ್ ಡಿಟೆಕ್ಟರ್ 9,000 ಕ್ಕೂ ಹೆಚ್ಚು ಪ್ರಕರಣಗಳು ಯೂಟ್ಯೂಬ್ ಅನ್ನು ಪ್ರವೇಶಿಸುವಲ್ಲಿ ತೊಂದರೆಗಳನ್ನು ಅನುಭವಿಸಿದ್ದಾರೆ. ಈ ಬಗ್ಗೆ ಗೂಗಲ್ ಬಳಕೆದಾರರಿಂದಲೂ ವರದಿಯಾಗಿವೆ. ಜಿಮೇಲ್ ಮತ್ತು ಯೂಟ್ಯೂಬ್ ನಲ್ಲಿ ಇದೇ ರೀತಿಯ ಸಮಸ್ಯೆ ಉಂಟಾಗಿರುವುದಾಗಿ ತಿಳಿಸಿದೆ.
ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/