ಕೋವಿಡ ಲಸಿಕೆ ವಿತರಣೆಯಲ್ಲಿ ಅಮೆರಿಕವನ್ನಾ ಹಿಂದಿಕ್ಕಿತಾ ಭಾರತ?ಬೆಂಗಳೂರು :ದೇಶಾದ್ಯಂತ 32.66 ಕೋಟಿ ಜನರಿಗೆ ಕೋವಿಡ್ ಲಸಿಕೆಗಳನ್ನು ನೀಡಲಾಗಿದ್ದು, ಲಸಿಕೆ ಆಂದೋಲದಲ್ಲಿ ಅಮೆರಿಕಾವನ್ನು ಹಿಂದಿಕ್ಕುವ ಮೂಲಕ ಭಾರತ ದೊಡ್ಡ ಸಾಧನೆ ಮಾಡಿದೆ ಎಂದು ಕೇಂದ್ರ ಸಚಿವ ಡಿ.ವಿ.ಎಸ್.ಸದಾನಂದಗೌಡ ಹೊಗಳಿದರು. ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ರಾಜ್ಯ ಮಟ್ಟದ ಇ ಚಿಂತನಾ ಸಭೆಯಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾತನಾಡಿದ ಸಚಿವರು, ಕೋವಿಡ್ ನಿಯಂತ್ರಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಿದೆ ಎಂದರು.

ಹಿಂದೆ ದೇಶದಲ್ಲಿ ಏಳು ರೆಮೆಡಿಸಿವಿ‌ ಉತ್ಪಾದನಾ ಘಟಕಗಳಿದ್ದವು, ಆದರೆ ಪ್ರಧಾನಿಗಳು ವಿಶೇಷ ಮುತುವರ್ಜಿ ವಹಿಸಿ ಔಷಧ ಕಂಪನಿಗಳ ಜತೆ ಮಾತುಕತೆ ನಡೆಸಿದ್ದರಿಂದ ರೆಮೆಡಿಸಿವಿಲ್ ಉತ್ಪಾದನಾ ಘಟಕಗಳ ಸಂಖ್ಯೆ 17 ಕ್ಕೇರಿದೆ. ಹಾಗೆಯೇ ಆಮ್ಲಜನಕ ಉತ್ಪಾದನಾ ಘಟಕಗಳ ಹೆಚ್ಚಳಕ್ಕೂ ಸಹ ಆದ್ಯತೆ ಕೊಡಲಾಗಿದೆ.

ಈ ಮೊದಲು 100 ಆಮ್ಲಜನಕ ಉತ್ಪಾದನಾ ಘಟಕಗಳಿದ್ದವು. ಈಗ ಹೊಸದಾಗಿ 2,200 ಘಟಕಗಳು ಕಾರ್ಯಾರಂಭಿಸಿವೆ. ಕೋವಿಡ್ ಎರಡನೇ ಅಲೆ ನಿಭಾಯಿಸಲಾಗದೆ ಹಲವು ದೇಶಗಳು ಕೈ ಚೆಲ್ಲುವ ಪರಿಸ್ಥಿತಿ ಬಂದಿತ್ತು. ಆದರೆ ಮೋದಿ ನೇತೃತ್ವದಲ್ಲಿ ಸಮರ್ಥವಾಗಿ ನಿಭಾಯಿಸಲಾಗಿದೆ ಎಂದರು.