ಮಾತಿನ ಭರದಲ್ಲಿ ಮಹಿಳೆಯರನ್ನು ಹೊಗಳಲು ಹೋಗಿ ಪ್ರಾಣಿಗಳಿಗೆ ಹೋಲಿಸಿದ ಪ್ರಧಾನಿ!ಇಸ್ರೇಲ್: ಮಾತಿನ ಭರದಲ್ಲಿ ರಾಜಕಾರಣಿಗಳು ಏನೇನೋ ಹೇಳಿ ಪೇಚಿಗೆ ಸಿಲುಕುವುದು ಹೊಸ ವಿಷಯವೇನಲ್ಲ. ಎಲ್ಲವೂ ಸರಿಯಾದರೆ ಆ ಮಾತು ಅಲ್ಲಿಗೇ ಮುಗಿದುಹೋಗುತ್ತದೆ, ಆದರೆ ಒಬ್ಬರು ಅದನ್ನು ಟ್ರೋಲ್ ಮಾಡಿದರೆ ಸಾಕು, ಸಾಮಾಜಿಕ ಜಾಲತಾಣದಲ್ಲಿ ಆ ಮಾತಿಗೆ ಟೀಕೆ ಮಾಡಿ ಮಾಡಿ ರಾಜಕಾರಣಿಗಳೋ ಅಯ್ಯೋ ಬಿಟ್ಬಿಡ್ರಪ್ಪಾ ಎಂದು ವಿನಂತಿ ಮಾಡಿಕೊಳ್ಳುವವರೆಗೂ ಹೋಗುತ್ತದೆ. ಇನ್ನು ಹೆಣ್ಣುಮಕ್ಕಳ ವಿಷಯ ಎಂದರೆ ಸುಮ್ಮನೇನಾ? ಮಾತಿನ ಭರದಲ್ಲಿ ಹೆಣ್ಣುಮಕ್ಕಳಿಗೆ ಅವಮಾನ ಆಗುವ ಹಾಗೆ ಮಾತನಾಡಿದರೆ ಯಾರು ತಾನೇ ಸುಮ್ಮನಿರುತ್ತಾರೆ? ಅಂಥದ್ದೇ ಒಂದು ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದೀಗ ಟ್ರೋಲ್ನಿಂದಾಗಿ ಗೋಳೋ ಎನ್ನುವಂತಾಗಿದೆ. ಅಷ್ಟಕ್ಕೂ ಅವರು ಹೇಳಿದ್ದು ಸಾಮಾನ್ಯ ಮಾತಲ್ಲ. ಮಹಿಳೆಯರನ್ನು ಪ್ರಾಣಿಗಳಿಗೆ ಹೋಲಿಸಿದ್ದಾರೆ. ಮನುಷ್ಯರು ಕೂಡ ಒಂದು ಪ್ರಾಣಿಯೇ ಎನ್ನುವುದು ಎಲ್ಲರಿಗೂ ಗೊತ್ತು. ಹಾಗೆಂದು ಅವರನ್ನು ಪ್ರಾಣಿಗೆ ಹೋಲಿಸಿದರೆ ಹೇಗಿರತ್ತೆ? ಅದರಲ್ಲಿಯೂ ಮಹಿಳೆಯರು ಸುಮ್ಮನೇ ಬಿಟ್ಟಾರೆಯೆ?
ಹಿಳೆಯರನ್ನು ‘ಹಕ್ಕುಗಳಿರುವ ಪ್ರಾಣಿಗಳು’ ಎಂಬ ಅರ್ಥದಲ್ಲಿ ಮಾತನಾಡಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಮಹಿಳೆಯರ ದೌರ್ಜನ್ಯದ ವಿರೋಧಿ ದಿನ ಎಂದು ಸೋಮವಾರ ಆಚರಿಸಲಾಗಿದೆ.

ADVERTISEMENT
Isral Prime minister

ಆ ಸಂದರ್ಭದಲ್ಲಿ ಮಹಿಳೆಯರ ಪರವಾಗಿ ಮಾತನಾಡಲು ಹೋಗಿರುವ ಪ್ರಧಾನಿ, ‘ಮಹಿಳೆಯರು ನಿಮಗೆ ಸೇರಿದವರಲ್ಲ, ದೈಹಿಕ ಹಲ್ಲೆ ಮಾಡಲು ಮಹಿಳೆಯರು ಪ್ರಾಣಿಗಳಲ್ಲ’ ಎಂದಿದ್ದಾರೆ. ಇಷ್ಟೇ ಹೇಳಿದ್ದರೆ ಪರವಾಗಿರಲಿಲ್ಲ. ಇನ್ನೂ ಮುಂದುವರೆದು ಮಾತನಾಡಿದ ಅವರು, ‘ಹೊಡೆಯಲು ಮಹಿಳೆಯರು ಪ್ರಾಣಿಗಳಲ್ಲ. ಪ್ರಾಣಿಗಳಿಗೆ ಹೊಡೆಯಬೇಡಿ ಎಂದು ನಾವು ಇತ್ತೀಚೆಗೆ ಹೇಳುತ್ತೇವೆ. ನಮಗೆ ಪ್ರಾಣಿಗಳ ಮೇಲೆ ದಯೆ ಇದೆ. ಮಹಿಳೆಯರು ಹಾಗೂ ಮಕ್ಕಳೂ ಸಹ ಹಕ್ಕುಗಳಿರುವ ಪ್ರಾಣಿಗಳು’ ಎಂದುಬಿಟ್ಟಿದ್ದಾರೆ! ಮಹಿಳೆಯರ ಮೇಲಿನ ಮಮತೆಯಿಂದ, ಅವರ ಮೇಲಿನ ಒಳ್ಳೆಯ ಉದ್ದೇಶದಿಂದಲೇ ಅವರು ಈ ರೀತಿ ಹೇಳಲಿಕ್ಕೆ ಸಾಕು. ಆದರೆ ಈ ಮಾತು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ವಿಡಿಯೋ ಹಾಕುವ ಮೂಲಕ ಪ್ರಧಾನಿಯವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದ್ದು, ಮಹಿಳಾ ಸಂಘಟನೆಗಳು ಸಿಡಿದೆದ್ದು ನಿಂತಿವೆ. ಪ್ರಧಾನಿಯವರು ಕ್ಷಮೆಯಾಚಿಸಬೇಕು ಎಂದು ಎಲ್ಲೆಡೆ ಕೂಗು ಕೇಳಿಬಂದಿದ್ದರು, ಪ್ರಧಾನಿ ಸದ್ಯಕ್ಕಂತೂ ಸುಸ್ತಾಗಿ ಹೋಗಿದ್ದಾರೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.

http://www.uralsayurveda.in https://www.facebook.com/DrUrals/
[17/11, 1:03 pm] Abnormal Abhinav: https://aravindavk.in/sanka/