ಕಂಗಣಾಗೆ ಬೆದರಿಕೆ ಹಾಕಿದ ಶಿವಸೇನೆಗೆ ಹಿಗ್ಗಾಮುಗ್ಗಾ ಉಗಿದ ಅರ್ನಬ್ ಗೋಸ್ವಾಮಿ!ಕಂಗನಾ ರಾನಾವತ್ ಮುಂಬೈಗೆ ಕಾಲಿಟ್ಟರೆ ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ ಶಿವಸೇನೆ ನಾಯಕರ ವಿರುದ್ಧ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಂಗಣಾಗೆ ಬೆದರಿಕೆ ; ಶಿವಸೇನೆ ವಿರುದ್ಧ ಕ್ರಮಕ್ಕೆ ಆಗ್ರಹ

ಬಾಲಿವುಡ್ ನಟಿ ಕಂಗಣಾ ರನೌತ್‌ಗೆ ಬೆದರಿಕೆ ಹಾಕಿರುವ ಶಿವಸೇನಾ ಶಾಸಕ ಪ್ರತಾಪ್ ಸರ್ನಾಯಕ್ ಅವರನ್ನು ಬಂಧಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಆಗ್ರಹಿಸಿದೆ.

ಈ ಬಗ್ಗೆ ಎನ್‌ಸಿಡಬ್ಲ್ಯು ಮಹಾರಾಷ್ಟ್ರ ಡಿಜಿಪಿ ಎಸ್ ಕೆ ಜೈಸ್ವಾಲ್ ಅವರಿಗೆ ಪತ್ರವೊಂದನ್ನು ಬರೆದಿದ್ದು, ಜವಾಬ್ದಾರಿಯುತ ಸ್ಥಾನಗಳನ್ನು ಹೊಂದಿರುವ ವ್ಯಕ್ತಿಗಳು ಮಹಿಳೆಯರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ನೀಡಿರುವ ‘ದ್ವೇಷ ಮತ್ತು ಬೆದರಿಕೆಗಳನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ ಎಂದಿದೆ.

“ದೇಶದ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಕಾಳಜಿಯುಳ್ಳ ಆಯೋಗವು ಕಾನೂನಿನ ನಿಬಂಧನೆಗಳ ಪ್ರಕಾರ ಪ್ರತಾಪ್ ಸರ್ನಾಯಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತದೆ. ಈ ಬಗ್ಗೆ ನಿಗದಿತ ದಿನಾಂಕದಂದು ಆಯೋಗಕ್ಕೆ ಪ್ರತಿಕ್ರಿಯೆಯನ್ನು ತಿಳಿಸಬೇಕು” ಎಂದು ಪತ್ರದಲ್ಲಿ ಅಯೋಗ ಸೂಚಿಸಿದೆ.


ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ರನೌತ್‌ಗೆ ಬೆದರಿಕೆ ಹಾಕಿರುವ ಬಗ್ಗೆ ಬಂದ ವರದಿಗಳನ್ನು ಉಲ್ಲೇಖಿಸಿ ಎನ್‌ಸಿಡಬ್ಲ್ಯು ಅಧ್ಯಕ್ಷೆ ರೇಖಾ ಶರ್ಮಾ ಅವರು ಈ ವಿಷಯದಲ್ಲಿ ಸುಮೋ ಮೋಟು ಕಾಗ್ನಿಜೆನ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆಯೋಗ ಹೇಳಿದೆ. “ಬೆದರಿಕೆ ಹಾಕಿದ ಶಾಸಕನನ್ನು ಪೊಲೀಸರು ತಕ್ಷಣವೇ ಬಂಧಿಸಬೇಕು” ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.