ಉದ್ಧವ್ ಠಾಕ್ರೆಗೆ ಮತ್ತೊಮ್ಮೆ ಅವಾಝ್ ಹಾಕಿದ ಕಂಗಣಾ ರಣಾವತ್!

ಮನೆಯನ್ನು ಅತಿಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಕಾರಣಕ್ಕೆ, ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ತಮ್ಮ ಮನೆಯನ್ನು ಓಡೆದಿದ್ದರ ಬಗ್ಗೆ ಕಂಗನಾ ಬಹಳ ಸಿಟ್ಟಾಗಿದ್ದಾರೆ. ಈ ಕುರಿತು ನೇರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೇ ಕಂಗನಾ ರಣಾವತ್ ಅವಾಜ್ ಹಾಕಿದ್ದಾರೆ. ಈ ಕುರಿತು ವಿಡಿಯೋ ಮಾಡಿರುವ ಅವರು, ‘ಸಿನಿಮಾ ಮಾಫಿಯಾ ಜತೆಗೆ ಸೇರಿಕೊಂಡು ನನ್ನ ಮೇಲೆ ಸೇಡು ತೀರಿಸಿಕಂಡೆ ಎಂದು ನಿಮಗೆ ಖುಷಿಯಾಗಿರಬಹುದು. ಇವತ್ತು ನನ್ನ ಮನೆ ಮುರಿದಿದೆ. ನಾಳೆ ನಿನ್ನ ಅಹಂಕಾರ ಮುರಿಯತ್ತೆ, ಸಮಯ ಖಂಡಿತಾ ಒಂದೇ ತರಹ ಇರುವುದಿಲ್ಲ’ ಎಂದು ಕಂಗನಾ ಹೇಳಿದ್ದಾರೆ.

ಕಾಶ್ಮೀರಿ ಪಂಡಿತರ ಕುರಿತಾಗಿ ಚಿತ್ರ ಮಾಡುವುದಾಗಿ ಹೇಳಿರುವ ಅವರು, ‘ಕಾಶ್ಮೀರಿ ಪಂಡಿತರಿಗೆ ಏನಾಯ್ತು ಎಂಬುದು ನನಗೆ ಗೊತ್ತಿದೆ. ಈಗ ಸ್ವತಃ ಅನುಭವವಾಗಿದೆ. ಈ ಹಿಂದೆ ಅಯೋಧ್ಯೆ ಬಗ್ಗೆ ಚಿತ್ರ ಮಾಡುವುದಾಗಿ ಹೇಳಿದ್ದೆ. ಈಗ ಕಾಶ್ಮೀರ ಕುರಿತಾಗಿಯೂ ಸಿನಿಮಾ ಮಾಡ್ತೀನಿ ಎಂದು ಈ ಸಂದರ್ಭದಲ್ಲಿ ಪ್ರಮಾಣ ಮಾಡುತ್ತೀನಿ’ ಎಂದು ಕಂಗನಾ ಎಚ್ಚರಿಸಿದ್ದಾರೆ. ಇದಕ್ಕೂ ಮುನ್ನ ಮುಂಬೈ ನಗರ ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವಾಗುತ್ತಿದೆ ಮತ್ತು ಈ ಶಹರದಲ್ಲಿ ಭದ್ರತೆ ಇಲ್ಲ ಎಂದು ಕಂಗನಾ ಆರೋಪಿಸಿದ್ದರು. ಈ ವಿಷಯವಾಗಿ ಸಿಟ್ಟಾಗಿದ್ದ ಶಿವಸೇನೆ ಮುಖಂಡ ಸಂಜಯ್ ರಾವತ್, ಅಷ್ಟೊಂದು ಭಯವಿದ್ದರೆ ಮುಂಬೈಗೆ ಬರಬೇಡಿ ಎಂದಿದ್ದರು. ಅದಾದ ಮೇಲೆ ಕಂಗನಾ, ಮುಂಬೈಯಲ್ಲಿರುವ ತಮ್ಮ ಕಚೇರಿಯನ್ನು ಅತಿಕ್ರಮವಾಗಿ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು, ಇಂದು ಅನಧಿಕೃತವಾಗಿ ಕಟ್ಟಿದ್ದ ಭಾಗಗಳನ್ನು ಒಡೆದು ಹಾಕಿದ್ದರು. ಕೃಪೆ : ವಿಜಯವಾಣಿ

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800