ಬಂಗಾಳದಲ್ಲಿ ಮಮತಾ ಘರ್‌ವಾಪಸಿ?ಬಂಗಾಳ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ತೊರೆದು ಬಿಜೆಪಿ ಸೇರಿದ್ದ ನಾಯಕರನೇಕರು ವಾಪಸು ಟಿಎಂಸಿ ಸೇರ್ಪಡೆಗೆ ಉತ್ಸುಕರಾಗಿದ್ದು, ಸಿಎಂ ಮಮತಾ ಬ್ಯಾನರ್ಜಿಯವರಲ್ಲಿ ಕ್ಷಮೆ ಕೋರಿ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂಬ ಸಂದೇಶ ರವಾನಿಸುತ್ತಿದ್ದಾರೆ. 2019 ರ ಲೋಕಸಭೆ ಚುನಾವಣೆಗೆ ಮುನ್ನವೇ ದೀದಿ ವಿರುದ್ಧ ಮುನಿಸಿಕೊಂಡು ಬಿಜೆಪಿ ಸೇರಿದ್ದ ಟಿಎಂಸಿಯ ನಾಯಕ, ಕೇಂದ್ರ ಮಾಜಿಸಚಿವ ಮುಕುಲ್ ರಾಯ್ ಕೂಡ ದೀದಿ ಪಕ್ಷಕ್ಕೆ ಸೇರಲು ಸಜ್ಜಾಗುತ್ತಿದ್ದಾರೆ ಎಂಬ ಚರ್ಚೆಗಳು ಜೋರಾಗಿವೆ.

ಇದಕ್ಕೆ ಇಂಬು ನೀಡುವಂತೆ ರಾಜ್ಯ ಬಿಜೆಪಿ ನಾಯಕರು ಕರೆದಿದ್ದ ಸಭೆಗೆ ಕೂಡ ರಾಯ್ ಗೈರಾಗಿದ್ದರು. ಈ ನಡುವೆ, ರಾಜ್ಯದ ಮಾಜಿ ಸಚಿವ ರಾಜೀವ್ ಬ್ಯಾನರ್ಜಿ, ಮುಖಂಡ ದೀಪೇಂದು ಬಿಸ್ವಾಸ್, ನಾಲ್ಕು ಬಾರಿ ಶಾಸಕರಾಗಿದ್ದ ಸೊನಾಲಿ ಗುಹಾ ಸೇರಿ ಹಲವರು ಬಿಜೆಪಿ ಜತೆಗಿನ ಸಂಬಂಧಕ್ಕೆ ಅಂತ್ಯ ಹಾಡಲು ಸಜ್ಜಾಗಿದ್ದು, ಫರ್‌ವಾಪಸಿಗೆ ಉತ್ಸುಕರಾಗಿದ್ದಾರೆ.

ಇದನ್ನೂ ಓದಿ :  ಏನಿದು ಬಿಸಿಬಿಸಿ ಭೇಟಿ?

ಆದರೆ ಮಮತಾ ಬ್ಯಾನರ್ಜಿ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಬಿಜೆಪಿಗೆ ಸೇರಿದ್ದವರನ್ನು ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳಲು ಯಾವುದೇ ತರಾತುರಿ ಇಲ್ಲ ಎಂದು ಮುಖಂಡ ಅಭಿಷೇಕ್‌ ಹೇಳಿದ್ದಾರೆ.