ಮೊಬೈಲ್ ಕಳ್ಳನನ್ನು ಒಂಟಿಯಾಗಿ ಎದುರಿಸಿದ ಬಾಲಕಿಗೆ ಸಿಕ್ತು ಭರ್ಜರಿ ಗಿಫ್ಟ್!ಪಂಜಾಬ್: ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದ ಖದೀಮರ ವಿರುದ್ಧ ನಡುರಸ್ತೆಯಲ್ಲೇ ಹೋರಾಡಿ ಕಳ್ಳನೊಬ್ಬನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದ 15ರ ಬಾಲಕಿಯ ಸಹಾಸಕ್ಕೆ ದೇಶದಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರ ಬೆನ್ನಲ್ಲೇ ಆಕೆಯ ಧೈರ್ಯಕ್ಕೆ ಶೌರ್ಯ ಪ್ರಶಸ್ತಿ ಲಭಿಸುವ ಸಾಧ್ಯತೆಯೂ ದಟ್ಟವಾಗಿದೆ. ಈ ನಡುವೆ ಆಕೆಗೆ ಬಂಬರ್ ಬಹುಮಾನವೂ ಸಿಕ್ಕಿದೆ.

ಪಂಜಾಬ್‌ನ ಜಲಂಧರ್-ಕಪುರ್ಥಾಲಾ ರಸ್ತೆ ಬಳಿಯ ದೀನ್ ದಯಾಳ್ ಉಪಾಧ್ಯಾಯ ನಗರದಲ್ಲಿ ಆ.30ರಂದು ಕುಸುಮ್ ಕುಮಾರ್ ಎಂಬ ಹದಿನೈದು ವರ್ಷದ ಬಾಲಕಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದಳು. ಈ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಬಾಲಕಿ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ಆಕೆ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದರೂ ಧೈರ್ಯದಿಂದ ಹೋರಾಡಿ ಕಳ್ಳನೊಬ್ಬನನ್ನು ಹಿಡಿಯುವಲ್ಲಿ ಬಾಲಕಿ ಯಶಸ್ವಿಯಾದಳು. ಕುಸುಮ್ಳ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಶೌರ್ಯ ಪ್ರಶಸ್ತಿಗೆ ಬಾಲಕಿಯ ಹೆಸರು ಕಳುಹಿಸುವುದಾಗಿ ಪೊಲೀಸ್ ಆಯುಕ್ತ ಗುರ್‌ಪ್ರೀತ್ ಸಿಂಗ್ ಭುಲ್ಲರ್ ತಿಳಿಸಿದ್ದಾರೆ.

ಇದನ್ನೂ ಓದಿ :  ಬ್ರೇಕಿಂಗ್ ನ್ಯೂಸ್ : ಮಧ್ಯಪ್ರದೇಶದ ಬಿಜೆಪಿ ಸಂಸದ ನಿಧನ!