ಸನಾತನ ಧರ್ಮಕ್ಕೆ ಮತಾಂತರಣಗೊಂಡ 40 ಮುಸ್ಲಿಂ ಕುಟುಂಬಗಳು! ಎಲ್ಲಿ? ಹೇಗೆ? ಏನು ಕಾರಣ? ಓದಿ!



40 ಕುಟುಂಬದ ಸುಮಾರು 250 ಮಂದಿ ಮುಸಲ್ಮಾನ ಧರ್ಮವನ್ನು ಬಿಟ್ಟು ಹಿಂದೂ ಧರ್ಮಕ್ಕೆ ಮತಾಂತರಗೊಮಡಿದ್ದಾರೆ. ಬಳಿಕ 80 ವರ್ಷ ಮಹಿಳೆಯ ಅಂತ್ಯ ಕ್ರಿಯೆಯನ್ನು ಹಿಂದೂ ಸಂಪ್ರದಾಯದನ್ವಯ ನೆರವೇರಿಸಿದ್ದಾರೆ. ಈ ಘಟನೆ ಹರ್ಯಾಣದ ಹಿಸಾರ್ ಜಿಲ್ಲೆಯಲ್ಲಿ ನಡೆದಿದೆ.

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಗ್ರಾಮಸ್ಥರೊಬ್ಬರು, ಮತಾಂತರಗೊಂಡ ಬಿಟ್ಮಾಡಾದ ಈ ಕುಟುಂಬಗಳು ದನೋಡಾ ಕಲನ್ ಹಳ್ಳಿಯಲ್ಲಿ ಸ್ವಾತಂತ್ರ್ಯಕ್ಕೂ ಮೊದಲೇ ಇದ್ದರು ಎಂದು ಹೇಳಿದ್ದಾರೆ. ಅಲ್ಲದೇ ಇವರೆಲ್ಲರೂ ಮುಸ್ಲಮಾನರಾಗಿದ್ದರೂ ಜೀವನ ಶೈಲಿ ಹಿಂದೂಗಳಂತಿತ್ತು. ಕವಲ ಮೃತರ ಅಂತ್ಯ ಸಂಸ್ಕಾರವಷ್ಟೇ ಮುಸ್ಲಿಂ ಸಂಪ್ರದಾಯದಂತೆ ನಡೆಯುತ್ತಿತ್ತು.

ಇನ್ನು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಶತ್ಬೀರ್ ಪ್ರತಿಕ್ರಿಯಿಸಿದ್ದು, ‘ತಾಯಿ ಫೀಲಿ ದೇವಿ ಶುಕ್ರವಾರ ಮೃತಪಟ್ಟಿದ್ದರು. ಹೀಗಿರುವಾಗ ಗ್ರಾಮದ ಮುಸಲ್ಮಾನ ಕುಟುಂಬಗಳು, ಅವರು ಹಿಂದೂಗಳಂತೆ ಜೀವನ ಸಾಗಿಸುತ್ತಿದ್ದರು. ಹೀಗಿರುವಾಗ ಅವರನ್ನು ಹಿಂದೂ ಎಂದದು ಘೋಷಿಸಿ, ಅವರ ಅಂತಿಮ ಕ್ರಿಯೆಯನ್ನೂ ಹಿಂದೂ ಸಂಪ್ರದಾಯದನ್ವಯವೇ ನೆರವೇರಿಸಬೇಕೆಂದಿದ್ದಾರೆ’ ಎಂದಿದ್ದಾರೆ.

ಇಷ್ಟೇ ಅಲ್ಲದೇ ತಾನು ದೂಮ್ ಜಾತಿಯವರಾಗಿದ್ದು, ನಮ್ಮ ಪೂರ್ವಜರು ಹಿಂದೂಗಳಾಗಿದ್ದರು. ಆದರೆ ಮೊಘಲ್ ದೊರೆ ಔರಂಗಜೇಬನ ಆಡಳಿತ ಅವಧಿಯಲ್ಲಿ ಒತ್ತಾಯ ಪೂರ್ವಕವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಇಡೀ ಗ್ರಾಮವೇ ಹಿಂದೂ ಹಬ್ಬಗಳನ್ನು ಆಚರಿಸುತ್ತದೆ, ಆದರೆ ಅಂತಿಮ ಕ್ರಿಯೆ ಮಾತ್ರ ಮುಸ್ಲಿಂ ಸಂಪ್ರದಾಯದಂತೆ ನೆರವೇರಿಸುತ್ತಿದ್ದರು ಎಂದಿದ್ದಾರೆ.

ಈ ಹಿಂದೆ ಏಪ್ರಿಲ್ 18 ರಂದು ಹರ್ಯಾಣದ ಜಿಂದ್ ಜಿಲ್ಲೆಯ 6 ಕುಟುಂಬದ 35 ಮಂದಿ ಸದಸ್ಯರು ಹಿಂದೂ ಧರ್ಮವನ್ನು ತಮ್ಮದಾಗಿಸಿಕೊಂಡಿದ್ದರು.