ನಿತ್ಯಾನಂದನ ಬಗ್ಗೆ ಕೆಟ್ಟದಾಗಿ ಮಾತನಾಡುವ ಹಿಂದುಗಳು ಇದನ್ನು ಮೊದಲು ಓದಿ, ಅಮೇಲೆ ನಿಮ್ಮಭಿಪ್ರಾಯ ತಿಳಿಸಿಕರ್ನಾಟಕದಲ್ಲಿ ಸದ್ಯಕ್ಕೆ ಎಲ್ಲರಿಗಿಂತ, ಎಲ್ಲದಕ್ಕಿಂತ ಹೆಚ್ಚಾಗಿ ಸುದ್ದಿ ಮಾಡುತ್ತಿರುವುದು ದೇವಮಾನವ ನಿತ್ಯಾನಂದ. ದೂರದ ದಕ್ಷಿಣ ಅಮೇರಿಕ ಖಂಡದ ಬಳಿ ಇರುವ ಒಂದು ದೀಪವನ್ನು ಖರೀದಿಸಿ, ಆ ದ್ವೀಪಕ್ಕೆ ಕೈಲಾಸ ದೇಶ ಹೆಸರಿಟ್ಟಿದ್ದಾನೆ. ಇದಕ್ಕೆ ಮಾನ್ಯತೆ ನೀಡಬೇಕೆಂದು ವಿಶ್ವಸಂಸ್ಥೆಗೆ ಮನವಿ ಮಾಡಲು ಸಿದ್ದನಾಗಿದ್ದಾನೆ. ತನ್ನ ಕೈಲಾಸ ವೆಬ್ಸೈಟ್ನಲ್ಲಿ ತನ್ನ ವಿಷನ್ ಮಿಷನ್ ಎರಡನ್ನು ಬರೆದುಕೊಂಡಿದ್ದಾನೆ. ಈತನ ಪ್ರಕಾರ ಕೈಲಾಸ ದೇಶ ಪುರಾತನ ಶೈವ ಸಂಪ್ರದಾಯಗಳ ತಳಹದಿಯ ಮೇಲೆ ನಿರ್ಮಾಣವಾಗಲಿದೆ ಅಂತೆ. ಇದು ಪ್ರಪಂಚದಲ್ಲಿ ಹಿಂದು ದೇಶವಾಗಿ ಗುರುತಿಸಿಕೊಳ್ಳಲ್ಲಿದ್ದು, ಹಿಂದುಗಳಲ್ಲಿ ಯಾವುದೇ ದೇಶದಲ್ಲಿ ತೊಂದರೆಯಾದರೂ ಕೂಡ ಅವರು ಇಲ್ಲಿ ಬಂದು ನೆಲೆಸಬಹುದು ಎಂದು ತಿಳಿಸಿದ್ದಾರೆ.ವಿದ್ಯೆ, ಆರೋಗ್ಯ, ಜೀವನಶೈಲಿಯನ್ನು ಸುಧಾರಿಸುವುದು ತನ್ನ ದೇಶದ ಮೂಲ ಉದ್ದೇಶ ಎಂದು ತಿಳಿಸಿದ್ದಾನೆ.

ಇವರು ಮೂಲತಃ ತಮಿಳುನಾಡಿನ ತಿರುವಣ್ಣಾಮಲೈನವರು. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಧ್ಯಾನ ಪೀಠವನ್ನು ಸ್ಥಾಪಿಸಿದ. ಈತ ಸನಾತನ ಧರ್ಮವನ್ನು ಸಮುದ್ರ ದಾಟಿಸಿ ದೇಶ ವಿದೇಶದಲ್ಲಿ ಹರಡಲು ಶುರುಮಾಡಿದ. ಅದರಲ್ಲೂ ಶೈವ ಮತವನ್ನು ವಿಸ್ತರಿಸುವ ಮಹತ್ಕಾರ್ಯಕ್ಕೆ ಕೈಹಾಕಿದ್ದ. ಅಮೆರಿಕದಲ್ಲಿ ಸಾಕಷ್ಟು ಚರ್ಚುಗಳನ್ನು ಅಮೆರಿಕದ ಭಕ್ತರ ಕೈಯಲ್ಲಿ ಖರೀದಿಸಿ ಅವುಗಳನ್ನು ದೇವಾಲಯಗಳಾಗಿ ಪರಿವರ್ತಿಸಿದ. ಲಕ್ಷಾಂತರ ವಿದೇಶಿಯರು ನಿತ್ಯಾನಂದನ ಅನುಯಾಯಿಗಳಾದರು. ಆತನ ಬಳಿ ಯೋಗವನ್ನು ಕಲಿಯಲು ಶುರು ಮಾಡಿದರು. ವೇದ -ಉಪನಿಷತ್ತುಗಳನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿ ಜನರಿಗೆ ತಿಳಿಸುತ್ತಿದ್ದನು.

ಒಂದು ಕಡೆ ಕ್ರೈಸ್ತ ಮಿಷನರಿಗಳು ಇನ್ನೊಂದು ಕಡೆ ಸ್ವಧರ್ಮೀಯ ಧಾರ್ಮಿಕ ಗುರುಗಳು. ಇಬ್ಬರು ನಿತ್ಯನ ಮೇಲೆ ಬಿಳೋದಕ್ಕೆ ಶುರುಮಾಡಿದರು. ಅಲ್ಲಿಯೂ ಸಹ ನಿತ್ಯಾನಂದ ಇಂಟರ್ನ್ಯಾಷನಲ್ ಫಿಗರ್ ಆಗೋದ. ಇತನಿಗೆ ಇವತ್ತಿಗೂ ಸಹ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಭಕ್ತರಿದ್ದಾರೆ. ಸೌತ್ ಅಮೆರಿಕ ನಿತ್ಯಾನಂದನ ತವರಾಗಿದೆ. ಈಗಾಗಲೇ ತನ್ನ ದೇಶದ ಬಾವುಟವನ್ನು ಸಿದ್ಧಪಡಿಸಿದ್ದಾನೆ. ತನ್ನ ಸಚಿವ ಸಂಪುಟವನ್ನು ಸಹ ರಚಿಸಿಕೊಂಡು ಬಿಟ್ಟಿದ್ದಾನೆ. ಶಿವನ ವೇಷಧರಿಸಿ ಕುಳಿತುಕೊಂಡಿರುವ ನಿತ್ಯಾನಂದ ಹಾಗೂ ನಂದಿ ಧ್ವಜದಲ್ಲಿ ರಾರಾಜಿಸುತ್ತಿದ್ದಾರೆ. ಚಿನ್ನದ ಬಣ್ಣ ಹಾಗೂ ಕೆಂಪು ಬಣ್ಣದ ಪಾಸ್ಪೋರ್ಟ್ಗಳು ಜನರನ್ನು ಆಕರ್ಷಿಸುತ್ತಿವೆ. ದೇಶಕ್ಕೆ ಕಾಣಿಕೆಯನ್ನು ಕೊಡಿ ಹಾಗೂ ಇಲ್ಲಿನ ಪೌರತ್ವವನ್ನು ಪಡೆದುಕೊಳ್ಳಿ ಎಂದು ಹೇಳುತ್ತಿದ್ದಾನೆ. ಅಲ್ಲದೇ ಯಾವುದೇ ದೇಶದಲ್ಲಿ ಹಿಂದುಗಳಿಗೆ ತೊಂದರೆಯಾದರೂ ಕೈಲಾಸಕ್ಕೆ ಬರವಂತೆ ಆಹ್ವಾನಿಸಿದ್ದಾನೆ. ಅಲ್ಲದೇ ಈಗ ರಿಸರ್ವ್ ಬ್ಯಾಂಕ್ ಆಫ್ ಕೈಲಾಸದದ ಅಡಿಯಲ್ಲಿ ಕರೆನ್ಸಿ ನೋಟ್ ಕೂಡ ಬಿಡುಗಡೆ ಮಾಡಿದ್ದಾನೆ.