ಕೊರೋನಾ ಲಸಿಕೆ ; ನರೇಂದ್ರ ಮೋದಿ ಅವರಿಂದ ದಿಟ್ಟ ಹೆಜ್ಜೆ!ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಮ್ಸ್‌ನಲ್ಲಿ ಮೊದಲ ಕೊರೊನಾ ಡೋಸ್ ತೆಗೆದುಕೊಂಡೆ, ಕೊರೊನಾ ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಹಾಗೂ ವಿಜ್ಞಾನಿಗಳು ತ್ವರಿತ ಸಮಯದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಗಮನಾರ್ಹವಾಗಿದೆ.

ಭಾರತವನ್ನು ಕೊವಿಡ್ 19 ಮುಕ್ತಗೊಳಿಸೋಣ, ಅರ್ಹರಾದ ಎಲ್ಲರೂ ಕೊರೊನಾ ಲಸಿಕೆ ಪಡೆದುಕೊಳ್ಳಿ ಎಂದರು.ಇಂದಿನಿಂದ 60 ವರ್ಷ ಮೇಲ್ಪಟ್ಟವರು ಕೋವಿನ್ ಅಪ್ಲಿಕೇಷನ್‌ನಲ್ಲಿ ನೋಂದಣಿ ಮಾಡಬಹುದು. ಜತೆಗೆ ವಾಕ್ ಇನ್ ಮೂಲಕವೂ ನೋಂದಾಯಿಸಬಹುದು ಎಂದು ಹೇಳಲಾಗಿದೆ.

ಆರೋಗ್ಯ ಸೇತು ಆಪ್ ಮೂಲಕ ಕೂಡಾ ಕೊರೊನಾ ಲಸಿಕೆಗೆ ಹೆಸರು ನೊಂದಾಯಿಸಬಹುದು. ಕೊವಿನ್ ಆಪ್ ಮೂಲಕವೂ ಅಪಾಯಿಂಟ್ಮೆಂಟ್ ಪಡೆಯಬಹುದು.

Cowin.gov.in ವೆಬ್ ಪೋರ್ಟಲ್ ಮೂಲಕವೂ ನೋಂದಾಯಿಸಬಹುದು. ಕಂಪ್ಯೂಟರ್, ಸ್ಮಾರ್ಟ್ ಫೋನ್ ಇಲ್ಲದವರು ಕಾಮನ್ ಸರ್ವಿಸ್ ಸೆಂಟರ್ (Common Service Center) ಮೂಲಕವೂ ರೆಜಿಸ್ಟ್ರೇಶನ್ ಮಾಡಿಸಿಕೊಳ್ಳಬಹುದು. 6 ಲಕ್ಷ ಹಳ್ಳಿಗಳಲ್ಲಿ 2.5 ಲಕ್ಷ ಕಾಮನ್ ಸರ್ವಿಸ್ ಸೆಂಟರ್ ಸ್ಥಾಪಿಸಲಾಗಿದೆ.

ಮಾರ್ಚ್ 1ರಿಂದ ಆರಂಭವಾಗಲಿರುವ ಕೊರೊನಾ ಲಸಿಕೆ ಅಭಿಯಾನಕ್ಕೆ ಅರ್ಹರಾದ ಅಭ್ಯರ್ಥಿಗಳು ಸರ್ಕಾರದ ಕೋವಿನ್ ಅಪ್ಲಿಕೇಶನ್ ಮೂಲಕ ಲಸಿಕೆಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಒಟ್ಟು 10 ಸಾವಿರ ಸರ್ಕಾರಿ ಆಸ್ಪತ್ರೆ ಹಾಗೂ 20 ಸಾವಿರಕ್ಕೂ ಹೆಚ್ಚು ಖಾಸಗಿ ಕೇಂದ್ರಗಳಲ್ಲಿ ಮಾರ್ಚ್ 1ರಿಂದ ಕೊರೊನಾ ಲಸಿಕೆ ವಿತರಣೆ ಮಾಡಲಾಗುತ್ತದೆ. ಸರ್ಕಾರದಿಂದ ಈ ಲಸಿಕೆ ಉಚಿತವಾಗಿ ಸಿಗಲಿದೆ.

ಕೇಂದ್ರ ಲಸಿಕೆವಿತರಣೆಯ ಇಡೀ ಪ್ರಕ್ರಿಯೆ ನಿರ್ವಹಣೆ ಮತ್ತು ಕಣ್ಗಾವಲಿಗೆ ಕೋವಿನ್ ಎಂಬ ಆ್ಯಪ್ ಅಭಿವೃದ್ಧಿಪಡಿಸಿದೆ. ಕೋವಿನ್ ಅಪ್ಲಿಕೇಶನ್ ಮೂಲಕ ಜನತೆ ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಆದರೆ ಅಭ್ಯರ್ಥಿಗಳಿಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳಲ್ಲಿ ಯಾವುದಾದರೂ ಒಂದನ್ನ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನ ನೀಡಲಾಗಿಲ್ಲ. ಆದರೆ ಲಸಿಕೆ ದಿನಾಂಕ ಹಾಗೂ ಕೇಂದ್ರವನ್ನ ಆಯ್ಕೆ ಮಾಡಿಕೊಳ್ಳಬಹುದಾಗಿದೆ.