ಇಮ್ರಾನ್ ಖಾನ್ ವಿರುದ್ಧ ಸಿಡಿದ ರಕ್ಷಣಾ ಸಚಿವ! ; ರಾಹುಲ್ ಗೂ ಟಕ್ಕರ್ ನೀಡದ ರಾಜನಾಥ್ ಸಿಂಗ್!

ಪಟ್ನಾ: ಪಾಕ್‌ ಪ್ರಧಾನಿ ಗಿಲ್ಗಿಟ್‌- ಬಾಲ್ಟಿಸ್ಥಾನ್‌ಗೆ ಭೇಟಿಕೊಟ್ಟ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಇಮ್ರಾನ್‌ ಖಾನ್‌ ವಿರುದ್ಧ ಸಿಡಿದಿದ್ದಾರೆ. “ಪಾಕ್‌ ಗಿಲ್ಗಿಟ್‌- ಬಾಲ್ಟಿಸ್ಥಾನವನ್ನು ತನ್ನದೆನ್ನುವ ಮೊದಲೇ ಅದು ಭಾರತದ ಭಾಗವಾಗಿತ್ತು’ ಎಂದು ಹೇಳಿದ್ದಾರೆ. “ಪಾಕಿಸ್ಥಾನ ಈ ಪ್ರಾಂತ್ಯಗಳಿಗೆ ಈಗ ರಾಜ್ಯದ ಸ್ಥಾನಮಾನ ನೀಡಲು ಹೊರಟಿದೆ. ನಮ್ಮ ಸರಕಾರ ಬಹಳ ಹಿಂದೆಯೇ ಪಿಒಕೆ ಒಳಗೊಂಡಂತೆ ಗಿಲ್ಗಿಟ್‌- ಬಾಲ್ಟಿಸ್ಥಾನ ಭಾರತದ ಅವಿಭಾಜ್ಯ ಅಂಗವೆಂಬುದನ್ನು ಘಂಟಾಘೋಷವಾಗಿ ಹೇಳಿದೆ. ಪಾಕ್‌ ಈ ಪ್ರದೇಶಗಳನ್ನು ಅಕ್ರಮವಾಗಿ ಆಕ್ರಮಿಸಿ ಕೊಂಡಿದೆ’ ಎಂದು ಸಚಿವರು ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.  “ಭಾರತೀಯರು ಯಾರೂ ದೇಶವಿಭಜನೆ ಬಯಸಿರಲಿಲ್ಲ, ಆದರೆ ಅದು ಸಂಭವಿಸಿತ್ತು. ಅಂದು ಭಾರತದಿಂದ ಹೋದ ಹಿಂದೂ, ಸಿಕ್ಖ್, ಬೌದ್ಧರನ್ನು ಅವರು ಎಷ್ಟು ನಿಕೃಷ್ಟವಾಗಿ ಕಂಡಿದ್ದಾರೆ ಗೊತ್ತೇ? ಆದರೆ, ನಾವು ಅದೇ ಅಲ್ಪಸಂಖ್ಯಾಕರ ರಕ್ಷಣೆಗೆ ಕಾನೂನು ಜಾರಿಮಾಡಿದ್ದೇವೆ’ ಎನ್ನುವ ಮೂಲಕ ಸಿಎಎ ಕಾಯ್ದೆಯನ್ನು ಸಮರ್ಥಿಸಿಕೊಂಡರು.

“ಪೂರ್ವ ಲಡಾಖ್‌ನ ಎಲ್‌ಎಸಿಯಲ್ಲಿ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ. ಭಾರತದ ಭೂಪ್ರದೇಶದೊಳಗೆ ಚೀನ ಪ್ರವೇಶಿಸಿದೆ ಎನ್ನುವ ಆರೋ ಪಕ್ಕೆ ಯಾವುದೇ ಆಧಾರವಿಲ್ಲ’ ಎಂದು ಪರೋಕ್ಷವಾಗಿ ರಾಹುಲ್‌ಗಾಂಧಿಗೆ ಕುಟುಕಿದ್ದಾರೆ. “1962ರಿಂದ 2013ರ ವರೆಗೆ ಏನು ಸಂಭವಿಸಿತು ಎನ್ನುವ ಬಗ್ಗೆ ಈಗೇನೂ ಹೇಳುವುದಿಲ್ಲ. ನಮ್ಮ ಸೈನಿಕರು ಎಲ್‌ಎಸಿಯಲ್ಲಿ ದಿಟ್ಟ ಶೌರ್ಯ ಮೆರೆದಿದ್ದಾರೆ. ಹೊರಗಿನ ಶತ್ರುಗಳ್ಯಾರೂ ದೇಶದ ಭೂಭಾಗದೊಳಗೆ ನುಸುಳಲು ಸಾಧ್ಯವಿಲ್ಲ. ಬಿಕ್ಕಟ್ಟು ಶಮನಕ್ಕೆ ಯತ್ನಿಸುತ್ತಲೇ ಇದ್ದೇವೆ. ಯಾವಾಗ ಬಗೆಹರಿಯುತ್ತದೋ ತಿಳಿದಿಲ್ಲ’ ಎಂದು ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 2021ಕ್ಕೆ ಜರ್ಮನ್‌ ಯುದ್ಧನೌಕೆ ಗಸ್ತು ದಕ್ಷಿಣ ಚೀನ ಸಮುದ್ರದಲ್ಲಿ ಈಗಾಗಲೇ ಅಮೆರಿಕ ಪರಮಾಣು ಶಸ್ತ್ರಾಸ್ತ್ರ ಹೊತ್ತ ನೌಕೆಗಳು ಗಸ್ತು ತಿರುಗುತ್ತಿವೆ. ಈ ನಡುವೆ ಜರ್ಮನ್‌ ಯುದ್ಧನೌಕೆಗಳನ್ನೂ ಹಿಂದೂ ಮಹಾಸಾಗರ ವಲಯದಲ್ಲಿ ನಿಯೋಜಿಸುವುದಾಗಿ ರಕ್ಷಣಾ ಸಚಿವೆ ಆಯನ್ನೆಗ್ರೆಟ್‌ ಕ್ರ್ಯಾಂಪ್‌- ಕ್ಯಾರೆನ್‌ಬಾರ್‌ ಘೋಷಿಸಿದ್ದಾರೆ. “ಇಂಡೋ- ಪೆಸಿಫಿಕ್‌ನಲ್ಲಿನ ಚೀನದ ಬೆದರಿಕೆಗೆ ಉತ್ತರವಾಗಿ ಜರ್ಮನ್‌ ಯುದ್ಧನೌಕೆಗಳು 2021ರಲ್ಲಿ ಗಸ್ತು ಆರಂಭಿಸಲಿವೆ. ಇದಕ್ಕಾಗಿ ಮುಂದಿನವರ್ಷ ರಕ್ಷಣಾ ಬಜೆಟ್ಟನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ :  ಭಾರೀ ವಿವಾದಕ್ಕೀಡಾದ ಸಿದ್ದರಾಮಯ್ಯ ಲವ್ ಜಿಹಾದ್ ಬಗೆಗಿನ ಹೇಳಿಕೆ! ; ಕೆ.ಎಸ್.ಈಶ್ವರಪ್ಪ ರವರಿಂದ ಖಡಕ್ ತಿರುಗೇಟು!

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938