ರಾಮ್ ಪ್ರಸಾದ ಅವರ ಈ ಘಟನೆ ಮೈ ಜುಮ್ಮ ಎನಿಸುತ್ತದೆ. ನೋಡಿಜನ್ಮದಾತರನ್ನೂ ತೊರೆದು ಜನ್ಮಭೂಮಿಗಾಗಿ ಪರಿಪತಪಿಸಿದ ಬ್ರಿಟಿಷರ ವಿರುದ್ಧ ಉಗ್ರವಾಗಿ ಹೋರಾಡುವುದು ತನ್ನ ಆದ್ಯ ಕರ್ತವ್ಯವೆಂದು ಭಾವಿಸಿ ನೇಣು ಕುಣಿಕೆಯನ್ನು ನಗುನಗುತ್ತಲೇ ಕೊರಳಿಗೇರಿಸಿ ಕೊಂಡ ಅಪ್ರತಿಮ ಕ್ರಾಂತಿಕಾರಿ ರಾಮ್ ಪ್ರಸಾದ್ ಬಿಸ್ಮಿಲ್‌ ಜನ್ಮದಿನದಂದು ಆ ಪುರುಷ ಸಿಂಹನನ್ನು‌ ನೆನೆಯೋಣ.

ನಾವೆಲ್ಲರೂ ಚಂದ್ರ ಶೇಖರ್ ಅಜಾದರ ಹೆಸರನ್ನು ಕೇಳಿದ್ದೇವೆ ಆದರೆ ಅಜಾದ್ ರ ಗುರು ರಾಮ್ ಪ್ರಸಾದ್ ಬಿಸ್ಮಿಲ್ ರ ಕುರಿತು ನಾವು ಕೇಳಿಲ್ಲ. ಅಜಾದ್ ರನ್ನು ಶ್ರೇಷ್ಠ ಕ್ರಾಂತಿಕಾರಿಯಾಗಿ ರೂಪಿಸಿದವರು ರಾಮ್ ಪ್ರಸಾದ್ ಬಿಸ್ಮಿಲ್
ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ ದೇಖನಾ ಹೈ ಜೋರ ಕಿತನಾ ಬಾಜೂ ಯೆ ಕಾತಿಲ್ ಮೆ ಹೈ ಶಿರವನರ್ಪಿಸುವ ಬಯಕೆ ಎನ್ನ ಮನದೊಳಿಹುದಿಂದು, ವೈರಿ ತೋಳ್ಬಲವ ಪರೀಕ್ಷಿಸಬೇಕೆಂದು ಎಂಬ ಅರ್ಥ ಬರುವ ಈ ಕ್ರಾಂತಿಕಾರಿ ಕವಿತೆ ಸ್ವಾತಂತ್ರ್ಯ ಪೂರ್ವದಲ್ಲಿ ಬಹುತೇಕ ಸ್ವಾತಂತ್ರ್ಯ ಹೋರಾಟಗಾರರ ಕ್ರಾಂತಿಯನ್ನು ಬಡಿದೆಚ್ಚರಿಸಿದ ಸಾಲುಗಳು. ಭಗತ್ ಸಿಂಗ್, ರಾಜಗುರು ಮತ್ತು ಸುಖ್ ದೇವ್ ಅವರುಗಳು ಜೈಲಿನಲ್ಲಿ ಮರಣದಂಡನೆಗೆ ಗುರಿಯಾಗಿದ್ದಾಗ ಬಹಳ ಇಷ್ಟ ಪಟ್ಟು ಹಾಡುತ್ತಿದ್ದದ್ದೇ ಇದೇ ಹಾಡು. ಇಂತಹ ಬೆಂಕಿಯಂಥ ಸಾಲುಗಳ ಕವಿತೆಯನ್ನು ರಚಿಸಿ ಬ್ರಿಟಿಷರ ಎದೆ ನಡುಗಿಸಿದವರೇ, ಶ್ರೀ ರಾಮ್ ಪ್ರಸಾದ್ ಬಿಸ್ಮಿಲ್.
1925ರ ಅಗಸ್ಟ್ ತಿಂಗಳಿನಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್‍ ನೇತೃತ್ವದಲ್ಲಿ ಒಂದು ತಂಡ ಕಾಕೋರಿ ಎಂಬಲ್ಲಿ ರೈಲೊಂದನ್ನು ತಡೆದು ಅದರಲ್ಲಿ ಬ್ರಿಟಿಷರು ಸಾಗಿಸುತ್ತಿದ್ದ ಹಣವನ್ನು ವಶಪಡಿಸಿಕೊಂಡು ಪರಾರಿಯಾದರು. ಇದರ ಸಂಪೂರ್ಣ ಯೋಜನೆ ರಾಮ್ ಪ್ರಸಾದ್ ಬಿಸ್ಮಿಲ್ ದ್ದಾಗಿತ್ತು.

ಇದನ್ನೂ ಓದಿ :  ಏನಿದು ಬಿಸಿಬಿಸಿ ಭೇಟಿ?

ಆದರೆ ಕೆಲವರು ಪೊಲೀಸರಿಗೆ ಸುಳಿವು ನೀಡಿದ ಪರಿಣಾಮವಾಗಿ ಪೊಲೀಸರು ಕ್ರಾಂತಿಕಾರಿಗಳ ವಸತಿ ತಾಣಗಳ ಮೇಲೆ ಹಠಾತ್ ದಾಳಿ ನಡೆಸಿದ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಪಾಖ್ ಉಲ್ಲಾಖಾನ್ ಸೇರಿದಂತೆ ಹಲವರನ್ನು ದಸ್ತಗಿರಿ ಮಾಡಿ ಜೈಲಿಗೆ ತಳ್ಳಿದರು. ಈ ಸಂದರ್ಭದಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್ ಗೆ ಪೊಲೀಸರಿಂದ ಕ್ರಾಂತಿಕಾರಿಗಳ ಕುರಿತು ಮಾಹಿತಿ ಪಡೆಯಲು ಚಿತ್ರಹಿಂಸೆ ನೀಡಿದರು, ನಾನಾ ಬಗೆಯ ಆಮಿಷ ತೋರಿಸಿದರಲ್ಲದೆ ಬಾಯಿ ಬಿಡದೇ ಹೋದರೆ ನಿನ್ನನ್ನು ನೇಣಿಗೇರಿಸುತ್ತೇವೆ ಎಂದೂ ಬೆದರಿಸಿದರು. ಆದರೆ ಇದ್ಯಾವುದಕ್ಕೂ ರಾಮ್ ಪ್ರಸಾದ್ ಬಿಸ್ಮಿಲ್ ಸೊಪ್ಪು ಹಾಕಲಿಲ್ಲ.
ಕೊನೆಗೆ ಕಾಕೋರಿ ರೈಲು ದರೋಡೆ ಪ್ರಕರಣದ ವಿಚಾರಣೆ ನಡೆದು ನ್ಯಾಯಾಲಯವು ರಾಮ್ ಪ್ರಸಾದ್ ಬಿಸ್ಮಿಲ್, ರಾಜೇಂದ್ರನಾಥ್ ಲಾಹಿತಿ, ರೋಶನ್ ಸಿಂಗ್ ಮತ್ತು ಅಶ್ಪಾಖ್ ಉಲ್ಲಾಖಾನ್‍ ರಿಗೆ ಮರಣದಂಡನೆ ವಿಧಿಸಿದರೆ ಇತರ ಹತ್ತು ಜನರಿಗೆ 12 ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಿತು.
ರಾಮಪ್ರಸಾದ್ ಬಿಸ್ಮಿಲ್ ಅಮರ್ ರಹೇ