ಮತ್ತೆ ಬಿಜೆಪಿ ಜೊತೆ ಸಮ್ಮಿಶ್ರವಾಗುತ್ತಾ ಶಿವಸೇನಾ?ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಸೇರಿದ್ರೆ ಲಾಭದಾಯಕ ಎಂದು ಸಿಎಂ ಉದ್ಧವ್ ಠಾಕ್ರೆ ಅವರಿಗೆ ಅವರದೇ ಪಕ್ಷದ ಶಾಸಕ ಪತ್ರ ಬರೆದಿದ್ದಾರೆ.

ಥಾಣೆಯ ಶಾಸಕ ಪ್ರತಾಪ್ ಸರ್ ನಾಯ್ಕ್ ಪತ್ರದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಮಹಾ ಅಘಾಡಿ ಮುಖ್ಯ ಉದ್ದೇಶ ಎನ್‍ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ವಿಸ್ತರಣೆಯ ಉದ್ದೇಶವಾಗಿದೆ. ಹಾಗಾಗಿ ಪಿಎಂ ಮೋದಿ ಅವರೊಂದಿಗೆ ಎನ್‍ಡಿಎ ಮೈತ್ರಿಕೂಟಕ್ಕೆ ಹಿಂದಿರುಗುವುದು ಲಾಭದಾಯಕವಾಗಿರಲಿದೆ. ಥಾಣೆ ನಗರಸಭೆ ಚುನಾವಣೆಯ ಬಗ್ಗೆಯೂ ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಾಗಾಗಿ ಬಿಜೆಪಿ ಚುನಾವಣೆ ಎದುರಿಸೋದು ಉತ್ತಮ ಎಂದು ಸಲಹೆ ನೀಡಿದ್ದಾರೆ.

ಪ್ರತಾಪ್ ಸರ್ ನಾಯಕ್ ಮತ್ತು ಅವರ ಕುಟುಂಬದ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪ್ರಕರಣ ಸಂಬಂಧ ಬಿಜೆಪಿ ಶಾಸಕರ ವಿರುದ್ಧ ಪ್ರತಿಭಟನೆ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಆರಂಭಿಸಿದೆ. ಕಳೆದ ನೂರು ದಿನಗಳಿಂದ ಶಾಸಕರು ಅಜ್ಞಾತ ಸ್ಥಳದಲ್ಲಿದ್ದಾರೆ ಎನ್ನಲಾಗಿದೆ.