ಮತ್ತೆ ಉದ್ಧಟತನ ಮೆರೆದ ಟ್ವಿಟ್ಟರ್! ಕೇಂದ್ರ ಸಚಿವರಟ್ವಿಟ್ಟರ್ ಖಾತೆ 1 ಗಂಟೆ ಲಾಕ್?ನವದೆಹಲಿ: ಕೇಂದ್ರ ಸರ್ಕಾರ ಮತ್ತು ಟ್ವಿಟ್ಟರ್ ನಡುವಿನ ಸಮರ ಮತ್ತಷ್ಟು ಹೆಚ್ಚಾಗಿದೆ.ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರ ಟ್ವಿಟ್ಟರ್ ಖಾತೆಯನ್ನು ಒಂದು ಗಂಟೆಗಳ ಕಾಲ ಇಂದು ತಡೆಹಿಡಿಯಲಾಗಿತ್ತು. ಅವರು ಕೂನಲ್ಲಿ ತಿಳಿಸಿ ತನಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

ಕಾಪಿರೈಟ್ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಖಾತೆಯನ್ನು ಲಾಕ್ ಮಾಡಲಾಗಿದೆ. ಆದರೆ ಇದು ಟ್ವಿಟ್ಟರ್ ನಿಯಮಕ್ಕೆ ವಿರುದ್ಧವಾಗಿದೆ. ಯಾವುದೇ ಖಾತೆಯನ್ನು ಲಾಕ್ ಮಾಡುವ ಮುನ್ನ ಬಳಕೆದರರಿಗೆ ನೋಟಿಸ್ ನೀಡಬೇಕಾಗುತ್ತದೆ ಆದರೆ ಟ್ವಿಟ್ಟರ್ ಈ ವಿಚಾರವನ್ನು ತಿಳಿಸದೇ ಲಾಕ್ ಮಾಡಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.