ಉಪರಾಷ್ಟ್ರಪತಿಗಳ ಟ್ಟೀಟರ್ ನೀಲಿಟಿಕ್ ತೆಗೆದುಹಾಕಿ, ಟ್ಟೀಟರ್ ಉದ್ಧಟತನ ಮೆರೆದಿದೆ.ಸಾಮಾಜಿಕ ಜಾಲತಾಣದಲ್ಲಿ ಪ್ರಭಾವಿ ಜನರು ವ್ಯಾಪಕವಾಗಿ ಬಳಸುವುದು ಟ್ವಿಟರ್. ಉಪರಾಷ್ಟ್ರಪತಿಗಳಾದ ವೆಂಕಯ್ಯ ನಾಯ್ಡು ಅವರು ಅಧಿಕೃತವಾಗಿ ಬಳಸುತ್ತಿದ ಟ್ವಿಟ್ಟರ್ ಖಾತೆಯನ್ನು ಪರಿಶೀಲಿಸದೆ ವಿನಾಕಾರಣ ಬ್ಲೂ ಟಿಕ್ ತೆಗೆದು ಹಾಕಿ ಟ್ವೀಟರ್ ಉದ್ದಟತನ ಮೆರೆದಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಖಾತೆಯ ಬ್ಲೂ ಟಿಕ್ ತೆಗೆದು ಹಾಕಿದ ಬಗ್ಗೆ ಬಿಜೆಪಿ ಮುಖಂಡ ಸುರೇಶ್ ನಖ್ಯಾ ಅವರು ಅಸಮಾಧಾನ ಹೊರಹಾಕಿದಾರೆ, ಪರಿಶೀಲನೆ ನಡೆಸದೇ, ಯಾವುದೇ ಕಾರಣವಿಲ್ಲದೇ ಉಪರಾಷ್ಟ್ರಪತಿಗಳ ಅಧಿಕೃತ ಟ್ವಿಟರ್ ಖಾತೆಯಿಂದ ಏಕೆ ನೀಲಿ ಟಿಕ್ ತೆಗೆದು ಹಾಕಲಾಗಿದೆ ಎಂದು ತೀವ್ರವಾಗಿ ಪ್ರಶ್ನಿಸಿದ್ದಾರೆ. ಇದು ಭಾರತದ ಸಂವಿಧಾನದ ಮೇಲಿನ ಆಕ್ರಮಣವಾಗಿದೆ ಎಂದು ಕಿಡಿಕಾರಿದ್ದಾರೆ, ಬಳಕೆದಾರರು ಸಕ್ರಿಯವಾಗಿಲ್ಲ ಎಂದರೆ ಪರಿಶೀಲಿಸದೆ ನೀಲಿ ಟಿಕ್ ತೆಗೆದು ಹಾಕುವುದು ಸರಿಯೇ.? ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ :  ಏನಿದು ಬಿಸಿಬಿಸಿ ಭೇಟಿ?

ಇದಷ್ಟೇ ಅಲ್ಲದೇ ರಾಷ್ಟ್ರೀಯ ಸ್ವಯಂಸೇವಾ ಸಂಘದ ಹಲವು ಪ್ರಮುಖರ ಟ್ಟೀಟ್ ರ ಖಾತೆಯಲ್ಲಿದ್ದ ನೀಲಿ ಟಿಕ್ ಅನ್ನು ತೆಗೆದುಹಾಕಲಾಗಿದೆ. ಬಳಕೆದಾರ ಸಕ್ರೀಯವಿಲ್ಲದಂತಹ ಸಂದರ್ಭಗಳಲ್ಲಿ ನೀಲಿ ಟಿಕ್ ತೆಗೆದು ಹಾಕಲಾಗುತ್ತದೆ. ಟ್ವಿಟರ್‌ ಸೇವಾ ನಿಯಮಗಳಿಗೆ ಅನುಗುಣವಾಗಿ ಯಾರಾದರೂ ತಮ್ಮ ಹ್ಯಾಂಡಲ್ ಹೆಸರನ್ನು ಬದಲಾಯಿಸಿದರೆ ಅಥವಾ ಯಾರೊಬ್ಬರ ಖಾತೆ ನಿಷ್ಕ್ರಿಯವಾಗಿದ್ದರೆ, ಅಪೂರ್ಣವಾಗಿದ್ದರೆ, ಬಳಕೆದಾರರು ಪರಿಶೀಲಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರೆ ಅಂತಹ ಕ್ರಮವನ್ನು ಕೈಗೊಳ್ಳಲಾಗುತ್ತದೆ.

ಟ್ವಿಟರ್‌ ಮಾನದಂಡಗಳನ್ನು ಪೂರೈಸದ ಅಥವಾ ಉಲ್ಲಂಘಿಸಿದ ಕಾರಣಕ್ಕೆ ನೀಲಿ ಟಿಕ್ ತೆಗೆಯಲಾಗುತ್ತದೆ. ಇತ್ತೀಚೆಗೆ ಸರ್ಕಾರದ ಹೊಸ ಮಾರ್ಗಸೂಚಿ ಕಾರಣಕ್ಕೆ ಟ್ವಿಟರ್‌ ಮತ್ತು ಸರ್ಕಾರದ ನಡುವೆ ವಗ್ವಾದ ಉಂಟಾಗಿದೆ. ಹೊಸ ಮಾರ್ಗಸೂಚಿಗಳಿಗೆ ಟ್ವಿಟರ್‌ ಇನ್ನೂ ಅನುಮೋದನೆ ನೀಡಿಲ್ಲ.