ಕೊರೊನಾ ಲಸಿಕಾ ಉತ್ಪದನಾ ಕಂಪನಿಯಿಂದ ಮಹತ್ವದ ಮಾಹಿತಿ ಬಹಿರಂಗಕೊರೊನಾ ಸೋಂಕಿನ ವ್ಯಾಪ್ತಿ ಹೆಚ್ಚಾಗುತ್ತಲೇ ಇದೆ. ಲಾಕ್ಡೌನ್ ಪ್ರಭಾವದಿಂದಾಗಿ ಸ್ವಲ್ಪ ಹಿಡಿತಕ್ಕೆ ಬಂದಿದೆ. ಹಲವೆಡೆ ಲಸಿಕೆ ಅಲಭ್ಯತೆ ಹೆಚ್ಚಾಗಿ ಜನಸಾಮಾನ್ಯರು ಲಸಿಕೆಗಾಗಿ ಪರದಾಡುತ್ತಿದ್ದಾರೆ. ಇನ್ನೂ ಎಷ್ಟೊ ನಗರಗಳಲ್ಲಿ 18-45 ವರ್ಷದೊಳಗಿನ ವಯಸ್ಕರಿಗೆ ಲಸಿಕೆ ಲಭ್ಯವಿಲ್ಲ. ಇದೇ ಸಮಯದಲ್ಲಿ ಲಸಿಕಾ ಉತ್ಪದನಾ ಕಂಪನಿಯಾದ ಸೀರಮ್ ಇನ್‌ಸ್ಟಿಟ್ಯೂಟ್ ಮಾಹಿತಿಯನ್ನು ಬಹಿರಂಗ ಪಡಿಸಿದೆ.

ಮುಂದಿನ ತಿಂಗಳನಲ್ಲಿ ಕೊರೊನಾವೈರಸ್ ವಿರುದ್ಧದ ಲಸಿಕೆ ಕೋವಿಶೀಲ್ಡ್‌ನ ಸುಮಾರು 90 ರಿಂದ 100 ಮಿಲಿಯನ್ ಡೋಸ್‌ಗಳನ್ನು ತಯಾರಿಸಿ, ಪೂರೈಸಲಾಗುವುದು ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಮೂಲಗಳಿಂದ ತಿಳಿದುಬಂದಿದೆ.

ಈ ಸಾಂಕ್ರಾಮಿಕ ರೋಗದಿಂದಾಗಿ ಉಂಟಾದ ವಿವಿಧ ಅಡೆತಡೆಗಳ ಮಧ್ಯದಲ್ಲಿಯೂ ಸಹ ತನ್ನ ನೌಕರರು ದಿನದ 24 ಗಂಟೆಗಳಲ್ಲೂ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಇತ್ತೀಚೆಗೆ ಬರೆದ ಪತ್ರದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ತಿಳಿಸಿದೆ.

ಇದನ್ನೂ ಓದಿ :  ಏನಿದು ಬಿಸಿಬಿಸಿ ಭೇಟಿ?

“ಮೇ ತಿಂಗಳಲ್ಲಿ ನಮ್ಮ ಉತ್ಪಾದನಾ ಸಾಮರ್ಥ್ಯ 6.5 ಕೋಟಿ ಡೋಸೇಜ್‌ ಇದ್ದು, ಮೇ ತಿಂಗಳಿಗೆ ಹೋಲಿಸಿದರೆ ಜೂನ್ ತಿಂಗಳಲ್ಲಿ ನಮ್ಮ ಕೋವಿಶೀಲ್ಡ್ ಲಸಿಕೆಯ 9 ರಿಂದ 10 ಕೋಟಿ ಡೋಸ್‌ಗಳ ಉತ್ಪಾದನೆಯಾಗಲಿದೆ ಎಂದು ತಿಳಿಸಿದ್ದಾರೆ” ಎಂದು ಸೀರಮ್‌ನ ವಕ್ತಾರರಾದ ಪ್ರಕಾಶ್ ಕುಮಾರ್ ಸಿಂಗ್ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್-19 ಲಸಿಕೆ ಉತ್ಪಾದನೆಯಲ್ಲಿ ಭಾರತವನ್ನು ಸದೃಢತೆಯ ದೃಷ್ಚಿಯಿಂದ ‘ಆತ್ಮನಿರ್ಭರ’ವನ್ನಾಗಿ ಮಾಡಲು ಹಾಗೂ ಲಸಿಕೆಗಳನ್ನು ದೇಶದ ಎಲ್ಲ ನಾಗರಿಕರಿಗೂ ಲಭ್ಯವಾಗುವಂತೆ ಮಾಡುತ್ತಿರುನ ಪ್ರಯತ್ನಗಳಲ್ಲಿ, ಅತ್ಯಮೂಲ್ಯವಾದ ಮಾರ್ಗದರ್ಶನ ಮತ್ತು ಸತತ ಬೆಂಬಲಕ್ಕಾಗಿ ಅವರು ಪತ್ರದಲ್ಲಿ ಅಮಿತ್ ಶಾ ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.