ಭಾರತ ವಿದೇಶಗಳಿಗೆ ಲಸಿಕೆ ರಫ್ತು ನಿಲ್ಲಿಸಿದರೆ ಎನಾಗುತ್ತೆ ಗೊತ್ತಾ? ಇಲ್ಲಿದೇ ನೋಡಿ ಭಯಾನಕ ಸತ್ಯಲಸಿಕೆ ರಫ್ತು ನಿಷೇಧಿಸುವ ಭಾರತದ ನಿರ್ಧಾರವು ಅಸ್ಟ್ರಾಜೆನೆಕಾ ಲಸಿಕೆ (ಕೋವಿಶೀಲ್ಡ್) ಮತ್ತು ಮುಂಬರುವ ನೊವಾವಾಕ್ಸ್ ಸೇರಿದಂತೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ಉತ್ಪನ್ನಗಳ ಮೇಲೆ ಅವಲಂಬನೆಯಾಗಿರುವ 90 ದೇಶಗಳ ಮೇಲೆ ತೀವ್ರ ಪರಿಣಾಮ ಬೀಳಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಈ ಲಸಿಕೆಗಳ ಅಸಮರ್ಪಕ ಪೂರೈಕೆಯಾದಲ್ಲಿ ಆಫ್ರಿಕಾದ ಹಲವಾರು ದೇಶಗಳು ಕೋವಿಡ್‌ನ ಹೊಸ ತಳಿಗಳಿಗೆ ತುತ್ತಾಗುವ ಸಂಭವವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೊಂಡಿದೆ.91 ದೇಶಗಳು ಲಸಿಕೆಯ ಸರಬರಾಜು ಕೊರತೆಯಿಂದ ಪ್ರಭಾವಿತವಾಗಿವೆ, ಇವಾಗಲೂ ಲಸಿಕೆ ಪೂರೈಕೆಯಾಗದಿದ್ದರೆ ಲಸಿಕೆ ಡೋಸ್‌ ಅನ್ನು ಸರಿದೂಗಿಸಲು ಸಾಧ್ಯವಾಗುವುದಿಲ್ಲ” ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿಯಾದ ಡಾ.ಸೌಮ್ಯಾ ಸ್ವಾಮಿನಾಥನ್ ಅವರು ಹೇಳಿದ್ದಾರೆ.

ಇದನ್ನೂ ಓದಿ :  ಏನಿದು ಬಿಸಿಬಿಸಿ ಭೇಟಿ?

ಈ ರಾಷ್ಟ್ರಗಳು ವಿಶೇಷವಾಗಿ ಕೋವಿಡ್‌ನ ಹೊಸ ಹಾಗೂ ಕ್ಷಿಪ್ರವಾಗಿ ಹರಡುವ ತಳಿಗಳಿಗೆ ಗುರಿಯಾಗುತ್ತಿವೆ, ಇದರಲ್ಲಿ ಬಿ .1.617.2 ಒಂದು ಪ್ರಮುಖ ಕೋವಿಡ್ ತಳಿ ಎಂದು ಅವರು ಹೇಳಿದ್ದಾರೆ. “ಕೇವಲ ಬಿ .1.617.2 ಮಾತ್ರವಲ್ಲ, ಇತರ ರೂಪಾಂತರ ತಳಿಗಳು ಇತರ ದೇಶಗಳಲ್ಲಿ ಹೊರಹೊಮ್ಮುತ್ತವೆ ಮತ್ತು ಪ್ರಪಂಚದಾದ್ಯಂತ ಹರಡುವ ಸಂಭವವಿದೆ.. ಈ ರೂಪಾಂತರಗಳು ಬಹಳ ಬೇಗನೆ ಹರಡುವ ಕ್ಷಮತೆ ಹೊಂದಿವೆ. ಅವುಗಳನ್ನು ಗುರುತಿಸುವ ಮೊದಲೇ ಅವುಗಳು ಈಗಾಗಲೇ ಪ್ರಪಂಚದಾದ್ಯಂತ ಹರಡುತ್ತಿವೆ.