ಗಾಯಕ ವಿಜಯ್ ಪ್ರಕಾಶ್ ಇಂದು ಇಷ್ಟು ಎತ್ತರವಾಗಿ ಬೆಳೆದಿದ್ದಾರೆಂದರೆ ಅದಕ್ಕೇ ಅದೊಂದೇ ಘಟನೆ ಕಾರಣವಾಗಿತ್ತುಇವರು ಕಂಚಿನ ಕಂಠದ ಗಾಯಕ. ಮೈಸೂರಿನಲ್ಲಿ ಹುಟ್ಟಿ, ಮುಂಬೈನಲ್ಲಿ ಕೆಲಸಮಾಡಿ, ಅಮೆರಿಕದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಪಡೆದ ಗಾಯಕ. ಇವರೇ ವಿಜಯ್ ಪ್ರಕಾಶ್. ವಿಜಯ್ ಪ್ರಕಾಶ್ ರವರು ಫೆಬ್ರವರಿ 21, 1976 ರಲ್ಲಿ ಸಾಂಸ್ಕೃತಿಕ ನಗರಿ ಎಂದೇ ಹೆಸರಾದ ಮೈಸೂರಿನಲ್ಲಿ ಜನಿಸಿದರು. ತಂದೆ ಎಲ್. ರಾಮಶೇಷ, ತಾಯಿ ಲೋಪಮ್ಮ. ಇವರ ತಂದೆ ತಾಯಿ ಸಹ ಸಂಗೀತ ಪಂಡಿತರು.ವಿಜಯ್ ಪ್ರಕಾಶ್ ಕೆ ಚಿಕ್ಕ ವಯಸ್ಸಿನಿಂದಲೂ ಸಂಗೀತ ಎಂದರೆ ಪ್ರಾಣ.

ಇವರ ಚಿಕ್ಕ ವಯಸ್ಸಿನಲ್ಲಿ ಕನ್ನಡ ರಾಜ್ಯೋತ್ಸವದಲ್ಲಿ ಒಂದು ಹಾಡನ್ನು ಹಾಡಿ ಬಹುಮಾನವನ್ನು ಗೆದ್ದಿರುತ್ತಾರೆ. ಆಗ ವಿಜಯಪ್ರಕಾಶ್ ಗೆ ಲೋಟವನ್ನು ಉಡುಗೊರೆಯಾಗಿ ಕೊಡಲಾಗುತ್ತದೆ. ಅ ಆ ಲೋಟವನ್ನು ಇಂದು ಸಹ ವಿಜಯಪ್ರಕಾಶ್ ಅವರು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಇದೇ ಇವರು ಗೆದ್ದಂತಹ ಮೊದಲ ಬಹುಮಾನ. ಹೀಗೆ ಎಂಜಿನಿಯರಿಂಗ್ ಶಿಕ್ಷಣವನ್ನು ಸೇರಿದ ವಿಜಯಪ್ರಕಾಶ್, ಇದು ನನ್ನ ಕ್ಷೇತ್ರವಲ್ಲ, ಇದು ನನಗೆ ಸರಿ ಹೊಂದುವುದಿಲ್ಲ ಎಂದು ತಿಳಿದು, ಒಂದು ದೊಡ್ಡ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. ಅದೇನೆಂದರೆ ಅಪ್ಪ-ಅಮ್ಮನಿಗೂ ತಿಳಿಯದಹಾಗೆ ಮನೆಬಿಟ್ಟು ಹೊರಡುತ್ತಾರೆ. ಅವರು ಅವರ ತಂದೆ ತಾಯಿಗೆ ಒಂದು ಪತ್ರವನ್ನು ಬರೆದಿರುತ್ತಾರೆ. ನಾನು ಮನೆಯಿಂದ ಹೊರಗೆ ಹೋಗ್ತಾ ಇರೋದು ಯಾವುದೇ ಕೆಟ್ಟ ಉದ್ದೇಶಕ್ಕೆ ಅಲ್ಲ. ನನ್ನ ಲೈಫ್ ಸಂಗೀತ ಆಗಿದೆ. ಅದನ್ನು ನಾನು ಹುಡುಕಿಕೊಂಡು ಹೋಗ್ತಾಯಿದ್ದೀನಿ ಎಂದು ಬರೆದಿರುತ್ತಾರೆ.

ನಂತರ ಮುಂಬೈಗೆ ತೆರಳಿದ ಇವರು ರೈಲ್ವೆ ಸ್ಟೇಷನ್ ಅಲ್ಲಿ ಹಲವು ದಿನಗಳನ್ನು ಕಳೆಯುತ್ತಾರೆ. ನಂತರ ಹೇಗೋ ಮಾಡಿ ಸುರೇಶ ವಾಡ್ಕರ್ ಅವರ ಅಡ್ರೆಸ್ ಸನ್ನು ಪತ್ತೆ ಹಚ್ಚಿ ಕೊಂಡು ಅವರ ಬಳಿ ಹೋಗುತ್ತಾರೆ. ಅಲ್ಲಿ ವಿಜಯಪ್ರಕಾಶ್ ಅವರ ಹಾಡುಗಾರಿಕೆಯನ್ನು ಮೆಚ್ಚಿದ ಅವರು, ರಾಧಾಕೃಷ್ಣ ದೇವಾಲಯದಲ್ಲಿ ವಾಸಿಸಲು ಅವಕಾಶ ಮಾಡಿಕೊಡುತ್ತಾರೆ. ನಂತರ ಸುರೇಶ ವಾಡ್ಕರ್ ಅವರು ವಿಜಯಪ್ರಕಾಶ್ ಗೆ ಜಾಹೀರಾತುಗಳಲ್ಲಿ ಅವಕಾಶವನ್ನು ಕಲ್ಪಿಸಿ ಕೊಡುತ್ತಾರೆ. ಆಗ ಅವರಿಗೆ ನಿರ್ಮಾ ಜಾಹೀರಾತನ್ನು ಓದುವಂತೆ ಹೇಳಲಾಗುತ್ತದೆ. ನಂತರ ಇವರ ವಾಯ್ಸ್ ಅನ್ನು ರೆಕಾರ್ಡ್ ಮಾಡಲು ತಿಳಿಸಲಾಗುತ್ತದೆ. ಹೀಗೆ ಭಾರತದ ಎಲ್ಲಾ ಭಾಷೆಗಳ ಜಾಹೀರಾತುಗಳಿಗೆ ಅವರ ಧ್ವನಿಯನ್ನು ಬಳಸಿಕೊಳ್ಳಲಾಗುತ್ತದೆ.

ನಂತರ ಮಹತಿಯವರು ವಿಜಯಪ್ರಕಾಶ್ ಗೆ ಪರಿಚಯವಾಗುತ್ತಾರೆ. ಮಹತಿಯವರು ವಾಯ್ಸ್ ಓವರ್ ನಲ್ಲಿ ಆಗಾಗಲೇ ಸ್ಟಾರ್ ಆಗಿರುತ್ತಾರೆ. ಇಬ್ಬರೂ ಕೆಲವು ಹಾಡುಗಳನ್ನು ಒಟ್ಟಿಗೆ ಹಾಡುತ್ತಾರೆ. ನಂತರ ಮಹತಿಯನ್ನು ಲಂಚ್ ಗೆ ಕರೆದುಕೊಂಡು ಹೋಗಿ ಪ್ರಪೋಸ್ ಮಾಡುತ್ತಾರೆ.‌ ಮಹತಿಯವರ ತಂದೆಯ ಚಾಲೆಂಜನ್ನು ಸ್ವೀಕರಿಸಿದ ವಿಜಯಪ್ರಕಾಶ್ ನಾಲ್ಕು ವರ್ಷಗಳಲ್ಲಿ ಮುಂಬೈನಲ್ಲಿ ಒಂದು ಮನೆಯನ್ನು ಕರಿದಿಸಿ ಮನೆಯವರ ಒಪ್ಪಿಗೆಯ ಮೇರೆಗೆ ತಿರುಪತಿಯಲ್ಲಿ ಮದುವೆಯಾಗುತ್ತಾರೆ. ಇವರಿಗೆ ಕಾವ್ಯ ಎಂಬ ಮಗಳಿದ್ದಾಳೆ.

ನಂತರ ಅನೇಕ ಸಿನಿಮಾಗಳಲ್ಲಿ ಹಾಡನ್ನು ಹಾಡುತ್ತಾರೆ. ಹೀಗೆ ಅನೇಕ ಭಾಷೆಗಳಲ್ಲಿ ಹಾಡನ್ನು ಹಾಡುವ ಅವಕಾಶಗಳು ವಿಜಯಪ್ರಕಾಶ್ ಗೆ ಹುಡುಕಿಕೊಂಡು ಬರುತ್ತವೆ. ಹೀಗೆ ಎಂಟಕ್ಕೂ ಹೆಚ್ಚು ಭಾಷೆಗಳಲ್ಲಿ 550ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. 10,000ಕ್ಕೂ ಹೆಚ್ಚು ಕಂಠದಾನ ವನ್ನ ಹದಿನೆಂಟು ಭಾಷೆಗಳಲ್ಲಿ ಮಾಡಿದ್ದಾರೆ. 2013ರಲ್ಲಿ ವಿಜಯ್ ಪ್ರಕಾಶ್ ರವರು ಮ್ಯೂಸಿಕ್ ಕಂಪೋಸರ್ ಸಹ ಆಗುತ್ತಾರೆ. ಹೀಗೆ ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿಗಳು ವಿಜಯ್ ಅವರಿಗೆ ದೊರೆತಿವೆ.ಭಾಷೆ ಗೊತ್ತಿರದ, ಜನ ಗೊತ್ತಿಲ್ಲದ, ಊರಿಗೆ ಹೋಗಿ ಅಲ್ಲಿ ಅವಕಾಶಗಳನ್ನು ಹುಡುಕಿಕೊಂಡು ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಸತತವಾಗಿ ಪರಿಶ್ರಮ ಮತ್ತು ಶ್ರದ್ಧೆಯ ಮೂಲಕ ಬೆಳೆದು ಇಂದು ಕನ್ನಡದ ಹೆಮ್ಮೆಯ ಸಂಗೀತಗಾರರಾಗಿದ್ದಾರೇ ನಮ್ಮ ವಿಜಯ್ ಪ್ರಕಾಶ್ ರವರು.