ಆರ್ ಆರ್ ನಗರ ಮತದಾನ ; ಎಲ್ಲರ ತಲೆತಿನ್ನುತ್ತಿದೆ ಮತದಾನ ಆದಮೇಲೆ ನಡೆದ ಈ ಘಟನೆ!ಆರ್ ಆರ್ ನಗರ ಉಪಚುನಾವಣೆಯ ಮತದಾನ ಶುರುವಾಗಿದೆ. ಮತದಾನ ಮಾಡಿದ ಮತದಾರರು ಶಾಹಿ ಹಚ್ಚಿದ ತಮ್ಮ ಮಧ್ಯದ ಬೆರಳನ್ನು ತೋರಿಸಿದ್ದಾರೆ. ಹಲವಾರು ಜನರು ಇದನ್ನು ನೋಡಿ ಮಧ್ಯದ ಬೆರಳಿಗೆ ಶಾಹಿ ಏಕೆ ಹಚ್ಚಿದ್ದಾರೆ ಎಂಬ ಗೊಂದಲದಲ್ಲಿದ್ದಾರೆ ಅದಕ್ಕೆ ಕಾರಣ ಇಲ್ಲಿದೆ.

ಇದಕ್ಕೆ ಕೆಲವೊಂದು ಕಾರಣಗಳು ಇವೆ. ಸಾರ್ವತ್ರಿಕ ಚುನಾವಣೆ ಅಥವಾ ಉಪಚುನಾವಣೆಯ ಕೆಲ ದಿನಗಳ ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆ ಅಥವಾ ಪರಿಷತ್ ಚುನಾವಣೆ ನಡೆದರೆ ಮತದಾನ ಮಾಡಿದ ಮತದಾರರಿಗೆ ಗುರುತಿನ ಶಾಯಿ ಹಾಕಲಾಗುತ್ತದೆ. ಇಲ್ಲೂ ಇದೇ ನಡೆದಿದೆ.ಕೆಲ ದಿನಗಳ ಹಿಂದೆಯಷ್ಟೇ ಅಂದರೆ ಅಕ್ಟೋಬರ್‌ 28 ರಂದು ವಿಧಾನಪರಿಷತ್ ಆಗ್ನೇಯ ಪದವೀಧರ, ಪಶ್ಚಿಮ ಪದವೀಧರ, ಈಶಾನ್ಯ ಶಿಕ್ಷಕರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಮತದಾನ ನಡೆದಿತ್ತು. ಈ ವೇಳೆ ಮತದಾರರಿಗೆ ಬಲಗೈಗೆ ಶಾಯಿ ಗುರುತು ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರ ಉಪಚುನಾವಣೆ ಹಾಗೂ ಶಿರಾ ಉಪಚುನಾವಣೆಯಲ್ಲಿ ಎಗಡೈ ಮಧ್ಯದ ಬೆರಳಿಗೆ ಶಾಯಿ ಹಾಕಲಾಗಿದೆ.

ಶಾಂತಿಯುತ ಮತದಾನ ಹಾಗೂ ಯಾವುದೇ ರೀತಿಯ ಅಕ್ರಮ ಈ ಚುನಾವಣೆಯಲ್ಲಿ ನಡೆಯಕೂಡದು ಅಷ್ಟೇ ಅಲ್ಲದೇ ಇದು ಸರ್ಕಾರದ ಭವಿಷ್ಯವಾಗಿರುವುದರಿಂದ ಈ ಚುನಾವಣೆಯಲ್ಲಿ ಮಧ್ಯದ ಬೆರಳಿಗೆ ಶಾಹಿ ಹಚ್ಚಲಾಗುತ್ತಿದೆ