ಇಡೀ ದೇಶ ಲವ್ ಜಿ-ಹಾದ್ ವಿರುದ್ಧ ಇದ್ದರೆ ಸಿದ್ದರಾಮಯ್ಯ ಮಾತ್ರ ಉಲ್ಟಾ ; ಸರ್ಕಾರ ಏನು ಮಾಡಲಿದೆ?ಲವ್ ಜಿ-ಹಾ-ದ್, ಭಾರತದಲ್ಲಿ ಲವ್ ಜಿಹಾ-ದ್ ಪ್ರಕರಣ ಜಾಸ್ತಿಯಾಗುತ್ತಿದೆ. ಇತ್ತೀಚೆಗೆ ಯುವತಿಯೊಬ್ಬಳನ್ನು ಲವ್ ಮಾಡದಿದ್ದಕ್ಕಾಗಿ ಮುಸ್ಲಿಂ ಯುವಕ ನಡುರಸ್ತೆಯಲ್ಲಿ ಆಕೆಯ ಪ್ರಾಣ ತೆಗೆದಿದ್ದಾನೆ. ಪ್ರತಾಪ್ ಸಿಂಹ, ಆರ್ ಅಶೋಕ್ ಮುಂತಾದವರು ಹಾಗೂ ಹಲವಾರು ದೇಶದ ಜನತೆ ಲವ್ ಜಿಹಾದ್ ವಿರುದ್ಧ ಕಾಯ್ದೆಗೆ ಒತ್ತಾಯ ಮಾಡಿದ್ದಾರೆ. ಆದರೆ ವಿರೋಧ ಪಕ್ಷದ ಸಿದ್ದರಾಮಯ್ಯ ಮಾತ್ರ ಲವ್ ಜಿಹಾ-ದ್ ಗೆ ಬೆಂಬಲ ನೀಡುವಂತಾ ಹೇಳಿಕೆ ನೀಡಿದ್ದಾರೆ.

ಮದುವೆ ಅನ್ನೋದು ವ್ಯಕ್ತಿಯ ವೈಯಕ್ತಿಕ ಹಕ್ಕು ಅದನ್ನು ಕಿತ್ತುಕೊಳ್ಳುವುದು ಅಪರಾಧವಾಗುತ್ತದೆ ಸರ್ಕಾರ ಲವ್ ಜಿ-ಹಾ-ದ್ ವಿರುದ್ಧ ಕಾಯ್ದೆ ತರುವ ಯೋಚನೆಯಲ್ಲಿದೆ ಇದಕ್ಕೆ ನಮ್ಮ ವಿರೋಧ ಇದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ವ್ಯಕ್ತಿಯಿಂದಲೂ ಯಾರೂ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಲವ್ ಜಿ-ಹಾ-ದ್ ನಿಷೇಧ ಕಾಯ್ದೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿದ್ದು, ಇದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಶಾಲೆ ಪುನರಾರಂಭಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ಕೊರೋನಾದಿಂದ ರಾಜ್ಯ ಮುಕ್ತಗೊಳ್ಳುವವರೆಗೂ ರಾಜ್ಯ ಸರ್ಕಾರ ಶಾಲೆಗಳನ್ನು ಪುನರಾರಂಭಿಸಬಾರದು ಎಂಬುದು ನನ್ನ ಅಭಿಪ್ರಾಯವಾಗಿದೆ. ತರಾತುರಿಯಲ್ಲಿ ಸರ್ಕಾರ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ತಿಳಿಸಿದ್ದಾರೆ. ಬಳಿಕ ಉಪಚುನಾವಣೆಕ ಕುರಿತು ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿಗಳಾದ ರಾಜರಾಜೇಶ್ವರಿ ನಗರ ಅಭ್ಯರ್ಥಿ ಕುಸುಮಾ ಹಾಗೂ ಶಿರಾ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರು ಗೆಲುವು ಸಾಧಿಸಲಿದ್ದಾರೆ.

ಈ ಹಿಂದಿನ ಚುನಾವಣೆಯಲ್ಲಿ ಪಿತೂರಿಗಳನ್ನು ನಡೆಸಿದ್ದ ಕಾರಣಕ್ಕೆ ಜಯಚಂದ್ರ ಅವರು ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಚುನಾವಣಾ ಪ್ರಚಾರದ ವೇಳೆ ಜನರು ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಹೋಲಿಕೆ ಮಾಡಿದ್ದರು. ಉಪ ಚುನಾವಣೆ ಜನರ ನಾಡಿಮಿಡಿತದ ಕುರಿತು ಮಾಹಿತಿ ನೀಡಲಿದೆ ಎಂದು ಹೇಳಿದ್ದಾರೆ.