ಉಪಚುನಾವಣೆ ಸಂದರ್ಭ ; ಸಿದ್ದರಾಮಯ್ಯ ಅವರ ಹೆಸರನ್ನೇ ಬದಲಿಸಿಬಿಟ್ಟರು ಶ್ರೀರಾಮುಲು!ಆರ್ ಆರ್ ನಗರ ಉಪಚುನಾವಣ ಸಂದರ್ಭದಲ್ಲಿ ಒಬ್ಬರ ಮೇಲೊಬ್ಬರು ಟೀಕಾ ಪ್ರಹಾರ ಮಾಡುತ್ತಲೇ ಇದ್ದಾರೆ. ಸಿದ್ದರಾಮಯ್ಯ ಅವರು ಮುನಿರತ್ನ ಬಿಜೆಪಿ ಸೇರಿದ್ದಕ್ಕೆ “ಮುನಿರತ್ನ ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿ ಮುನಿರತ್ನ ಬಿಜೆಪಿ ಸೇರಿದ್ದಾರೆ” ಎಂದು ಟೀಕಿಸಿದ್ದರು.

ಇದಕ್ಕೆ ಖಡಕ್ ಆಗಿ ಟಾಂಗ್ ನೀಡಿರುವ ಶ್ರೀರಾಮುಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಆರ್‌ ಆರ್‌ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು ಬೆನ್ನಿಗೆ ಚೂರಿ ಹಾಕಿದ್ದು ನಮ್ಮ ಶಾಸಕರಲ್ಲ ಬದಲಾಗಿ ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ನೀವು ಕಾಂಗ್ರೆಸ್ಗೆ ಸೇರ್ಪಡೆಯಾದವರು ಸಿದ್ದರಾಮಯ್ಯ. ಈ ಕಾರಣಕ್ಕಾಗಿ ನಿಮ್ಮನ್ನು ಸಿದ್ದರಾಮಯ್ಯ ಎನ್ನುವ ಬದಲು ಚೂರಿ ರಾಮಯ್ಯ ಎನ್ನಬೇಕಾ? ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ :  ಇಂದ್ರಜಿತ್ ಲಂಕೇಶ್ ಅವರ ಮಕ್ಕಳು ಮತ್ತು ಮನೆಯವರು ಹೇಗಿದ್ದಾರೆ? ಫೋಟೋ ನೋಡಿ

ಸಿದ್ದರಾಮಯ್ಯನವರೇ ಚೂರಿ ಹಾಕಿದ್ದು ಮುನಿರತ್ನ ಅಲ್ಲ,ನೀವು. ಜೆಡಿಎಸ್ ಪಕ್ಷದಲ್ಲಿದಾದ ಬೇಕಾದ ಅಧಿಕಾರ ಅನುಭವಿಸಿ ನಂತರ ದೇವೇಗೌಡರಿಗೆ ಮೋಸ ಮಾಡಿ ಕಾಂಗ್ರೆಸ್ ಸೇರಿದವರು ನೀವು ನಿಮ್ಮ ಚೂರಿ ರಾಮಯ್ಯ ಎಂದು ಕರೆಯಬೇಕಲ್ಲವೇ? ಎಂದು ಕೇಳಿದರು