MUST WATCH: ಪಾಕ್ ನಿಂದ ಕದನ ವಿರಾಮ ಉಲ್ಲಂಘನೆ‌ ; ಏಳು ಮಂದಿ ಪಾಕ್ ಯೋಧರಿಗೆ ಗೇಟ್ ಪಾಸ್! ವೈರಲ್ ವೀಡಿಯೋ.ಶ್ರೀನಗರ: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ( ಎಲ್ ಒಸಿಯಲ್ಲಿ) ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನದ ವಿರುದ್ಧ ಪ್ರತಿ ದಾಳಿ ನಡೆಸಿದ ಭಾರತೀಯ ಸೇನಾಪಡೆ ಎರಡು- ಮೂರು ಪಾಕ್ ಸೇನೆಯ ಎಸ್ ಎಸ್ ಜಿ ಕಮಾಂಡೋ ಸೇರಿದಂತೆ 8 ಮಂದಿ ಸೈನಿಕರನ್ನು ಹತ್ಯೆ ಮಾಡಿದೆ. ನಿರಂತರವಾಗಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಿತ್ತು ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿದ್ದು, ಮಾಹಿತಿ ಪ್ರಕಾರ ಭಾರತೀಯ ಯೋಧರು ನಡೆಸಿದ ಪ್ರತಿದಾಳಿಗೆ ಪಾಕಿಸ್ತಾನ ಸೇನೆಯ 2, 3 ಸ್ಪೆಷಲ್ ಸರ್ವೀಸ್ ಗ್ರೂಪ್ ನ ಕಮಾಂಡೋಸ್ ಸೇರಿ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಭಾರತೀಯ ಯೋಧರ ಮೇಲಿನ ದಾಳಿ ಹಾಗೂ ನಾಗರಿಕರ ಮೇಲೆ ನಡೆಸಿದ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆಯ ದಾಳಿಗೆ ಹಲವಾರು ಪಾಕಿಸ್ತಾನಿ ಯೋಧರು ಗಾಯಗೊಂಡಿದ್ದು, ಪಾಕ್ ಸೇನೆಯ ಬಂಕರ್, ತೈಲಾಗಾರ ಹಾಗೂ ಸೇನೆಯ ಲಾಂಚ್ ಪ್ಯಾಡ್ ಅನ್ನು ಧ್ವಂಸಗೊಳಿಸಲಾಗಿದೆ.

ಪಾಕ್ ಸೇನೆಯ ಅಪಾರ ಪ್ರಮಾಣದ ಬಂಕರ್ ಗಳು, ಇಂಧನ ಡಂಪಿಂಗ್ ಮತ್ತು ಕಾರ್ಯಸ್ಥಳಗಳನ್ನು ಭಾರತೀಯ ಸೇನೆ ನಾಶಪಡಿಸಿದ್ದು, ಘಟನೆಯಲ್ಲಿ 10-12 ಪಾಕ್ ಯೋಧರು ಗಾಯಗೊಂಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಇದಕ್ಕೂ ಮುನ್ನ ನೆರೆಯ ರಾಷ್ಟ್ರದಿಂದ ಕದನ ವಿರಾಮ ಉಲ್ಲಂಘನೆ ಹಾಗೂ ಪಾಕ್ ಮೂಲದ ಉಗ್ರರ ಒಳನಸುಳುವಿಕೆ ತಡೆಯುವ ಪ್ರಯತ್ನದಲ್ಲಿ ಪ್ರತ್ಯೇಕ ಕಡೆಗಳಲ್ಲಿ ಭಾರತದ ಇಬ್ಬರು ಯೋಧರು ಹುತಾತ್ಮರಾದರು. ಉರಿ ವಲಯದಲ್ಲಿ ಇಬ್ಬರು ಹಾಗೂ ಗುರೆಜ್ ಸೆಕ್ಟರ್ ನಲ್ಲಿ ಒಬ್ಬರು ಹುತಾತ್ಮರಾಗಿರುವುದಾಗಿ ಸೇನಾ ಮೂಲಗಳು ಮಾಹಿತಿ ನೀಡಿವೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ http://www.uralsayurveda.in https://www.facebook.com/DrUrals/ +91 81053 71042 , 8310191364.