ಕಾಂಗ್ರೆಸ್ ರಾಜಕೀಯ ಭವಿಷ್ಯಕ್ಕೆ ದೊಡ್ಡ ತಿರುವು ನೀಡಿದೆ ಕಪಿಲ್ ಸಿಬಲ್ ಈಗ ನೀಡಿರುವ ಹೇಳಿಕೆ!ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನಿಂದ ಸಂಪೂರ್ಣ ರಾಜಕೀಯ ಭವಿಷ್ಯವೇ ಕರಾಳವಾದಂತಿದೆ ಕಾಂಗ್ರೆಸ್ ಗೆ. ಕಾಂಗ್ರೆಸ್ ಪಕ್ಷದ ಈಗಿನ ಪರಿಸ್ಥಿತಿಯ ಬಗ್ಗೆ ಕಾಂಗ್ರೆಸ್ ನ ಕಪಿಲ್ ಸಿಬಲ್ ಬೇಸರದ ವಿಷಯ ಹೊರಹಾಕಿದ್ದಾರೆ.

ಸಂದರ್ಶನ ಒಂದರಲ್ಲಿ ಅವರು ‘ಬಿಹಾರ ವಿಧಾನಸಭೆ ಹಾಗೂ ಇತರೆ ರಾಜ್ಯಗಳ ಉಪಚುನಾವಣೆಯಲ್ಲಿ ನಮ್ಮ ಇತ್ತೀಚಿನ ಸಾಧನೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಭಿಪ್ರಾಯಗಳನ್ನು ನಾವು ಇನ್ನೂ ಕೇಳಬೇಕಾಗಿಲ್ಲ. ಬಹುಶಃ ಎಲ್ಲವೂ ಚೆನ್ನಾಗಿವೆ ಮತ್ತು ಅದು ಎಂದಿನಂತೆ ವ್ಯವಹಾರವಾಗಿರಬೇಕು ಎಂದು ಅವರು ಭಾವಿಸಿದ್ದಾರೆ. ಆದರೆ ಆತ್ಮಾವಲೋಕನದ ಸಮಯ ಮುಗಿದಿದೆ. ಪಕ್ಷದ ಪುನರುಜ್ಜೀವನಕ್ಕಾಗಿ ಅನುಭವಿ ಮನಸ್ಸು, ಅನುಭವಿ ಕೈಗಳು ಹಾಗೂ ರಾಜಕೀಯದ ವಾಸ್ತವಾಂಶವನ್ನು ಅರಿತವರ ಅಗತ್ಯವಿದೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಸಂವಹನ ಕ್ರಾಂತಿಯ ನಂತರದಲ್ಲಿ ದೇಶದಲ್ಲಿ ನಡೆಯುವ ಚುನಾವಣೆಗಳ ರೂಪುರೇಷೆ ಬದಲಾಗಿದೆ. ಚುನಾವಣೆಗಳು ಅಧ್ಯಕ್ಷೀಯ ಮಾದರಿಯಾಗಿ ಪರಿವರ್ತನೆಯಾಗಿದೆ. ಹಾಗಾಗಿ ಇಂದು ನಾವು ಕಾಂಗ್ರೆಸ್ ಕುಸಿಯುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು”ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.