ಗೋಹತ್ಯೆ ನಿಷೇಧ ಆಗಬೇಕೆ? ನಿಮ್ಮ ಅಭಿಪ್ರಾಯ ಓಟ್ ಮೂಲಕ ತಿಳಿಸಿರಾಜ್ಯಾದ್ಯಂತ ಗೋಹತ್ಯೆ ನಿಷೇಧಿಸುವಂತೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿಂದೆ ನಡೆದ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಇದ್ದಾಗ ಇದ್ದ ಗೋ ಹತ್ಯಾ ನಿಷೇಧ ಕಾಯ್ದೆಯನ್ನು ಮತ್ತೆ ತರುವುದಾಗಿ ಘೋಷಿಸಿತ್ತು. ದೋಸ್ತಿ ಸರ್ಕಾರದ ಪತನದ ನಂತರ ಅಧಿಕಾರಕ್ಕೇರಿದ ಭಾರತೀಯ ಜನತಾ ಪಾರ್ಟಿಗೆ ಆರಂಭದಲ್ಲೇ ಸಾಕಷ್ಟು ಸವಾಲುಗಳು ಎದುರಾಗಿದ್ದವು. ಕೊರೋನದಿಂದ ತತ್ತರಿಸಿ ಹೋಗಿದ್ದ ರಾಜ್ಯ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣುತ್ತಿದ್ದಂತೆ ಗೋಹತ್ಯೆ ನಿಷೇಧಕ್ಕೆ ಎಲ್ಲೆಡೆ ಒತ್ತಾಯ ಕೇಳಿಬರುತ್ತಿದೆ.

ಸಾಮಾಜಿಕ ಹೋರಾಟಗಾರ, ಮುಸ್ಲಿಂ ಮುಖಂಡ ಮುಖ್ತಾರ್ ಅಬ್ಬಾಸ್ ಅಲಿ ನೇತೃತ್ವದ ತಂಡ ರಾಜ್ಯಾದ್ಯಂತ ಗೋಹತ್ಯೆ ನಿಷೇಧಿಸುವಂತೆ ಒತ್ತಾಯಿಸಿ ಬಿಜೆಪಿ ನಾಯಕರ ಪ್ರತಿಯೊಂದು ಪೋಸ್ಟ್ ಗಳಿಗೂ ‘ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನು ಯಾವಾಗ? ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚಾನಾ ಪರಮಾತ್ಮನು’ ಎಂದು ಕಮೆಂಟ್ ಮಾಡತೊಡಗಿದ್ದಾರೆ. ಮುಕ್ತಾರ್ ಅವರ ಹೋರಾಟಕ್ಕೆ ರಾಜ್ಯದ ಅನೇಕ ಹಿಂದೂ ಫೇಸ್ಬುಕ್ ಪೇಜ್ ಗಳು ಬೆಂಬಲ ಘೋಷಿಸಿ ಕೈ ಜೋಡಿಸಿವೆ. ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಟ್ರೆಂಡ್ ಸೃಷ್ಟಿಸಿದ ಅಭಿಯಾನಕ್ಕೆ ಪ್ರತಾಪ್ ಸಿಂಹ, ಚಕ್ರವರ್ತಿ ಸೂಲಿಬೆಲೆ, ನಳೀನ್ ಕುಮಾರ್ ಕಟೀಲ್ ಸೇರಿದಂತೆ ಅನೇಕ ಚಿಂತಕರು ರಾಜಕೀಯ ಮುಖಂಡರು ಸ್ಪಂದಿಸಿ ಮುಂದಿನ ಅಧಿವೇಶನದಲ್ಲಿ ಘೋಷಿಸುವುದಾಗಿ ಹೇಳಿದ್ದಾರೆ.

ಈಗ ರಾಜ್ಯಾದ್ಯಂತ ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಾಗಬೇಕಾ ಬೇಡವೇ ಎಂಬುದನ್ನು ನಾವು ನಿಮ್ಮ ಮುಂದಿಟ್ಟಿದ್ದು. ಬೇಗ ಈ ಲಿಂಕ್ ಕ್ಲಿಕ್ ಮಾಡಿ ಓಟ್ ಮಾಡಿ, ಈ ಲಿಂಕ್ ರಾಜ್ಯಾದ್ಯಂತ ಶೇರ್ ಮಾಡಿ ಓಟ್ ಮಾಡಿಸಿ