ದೇವೇಗೌಡರು ಶಿರಾ ಜನತೆಗೆ ನೀಡಿದ್ರು ಬಂಪರ್ ಆಫರ್ ; ಕಾಂಗ್ರೆಸ್ ಜಯಚಂದ್ರ ಗಲಿಬಿಲಿ!ಶಿರಾ ಉಪಚುನಾವಣೆಯಲ್ಲಿ ಎಲ್ಲಾ ಪಕ್ಷದ ಅಭ್ಯರ್ಥಿಗಳು ಮುಖಂಡರು ಬಿಸಿಲು ಮಳೆ ಎನ್ನದೇ ಬಿರುಸಿನ ಪ್ರಚಾರ ಮಾಡಿ ಪಟ್ಟ ಗಿಟ್ಟಿಸಿಕೊಳ್ಳುವ ಯೋಜನೆಯಲ್ಲಿದ್ದರೆ,ಜೆಡಿಎಸ್ ಪಕ್ಷದ ಹೆಚ್ ಡಿ ದೇವೇಗೌಡ ಮಾತ್ರ ಚುನಾವಣೆ ಸಮಯದಲ್ಲಿ ಬಿಗ್ ಸ್ಟೇಟ್ಮೆಂಟ್ ನೀಡಿದ್ದಾರೆ. ಶಿರಾ ಕ್ಷೇತ್ರದ ಅಭಿವೃದ್ಧಿಗಾಗಿ ಆ ಕ್ಷೇತ್ರವನ್ನೇ ದತ್ತು ತೆಗದುಕೊಳ್ತೇನೆ ಎಂದು ಹೇಳಿದ್ದಾರೆ.

ಶಿರಾದ ಬರಗೂರು ರಂಗಮಂದಿರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ತಮ್ಮ ಸಮಾಜ ಯಾರಿಗೂ ದ್ರೋಹ ಮಾಡಿಲ್ಲ. ಯಾರು ಉಳಿಮೆ ಮಾಡುತ್ತಾನೆಯೋ ಅವನೆಲ್ಲಾ ಒಕ್ಕಲಿಗನೇ. ಅದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಸುಮಾರು 30 ಜಾತಿಗಳು ಇವೆ. ನಾಯಕರಿಗಾಗಿ ಮೀಸಲಾತಿ ತಂದವರು ಯಾರು?. ಜೀವನದ ಕೊನೆಯ ಹೋರಾಟ ಇದು. ಯಾರಿಗೆ ತಾವು ದ್ರೋಹ ಮಾಡಿಲ್ಲ. ತಮ್ಮ ಅಹಂ ನಿಂದ ಯಾರನ್ನಾದರೂ ಮುರಿಯುತ್ತೇನೆ ಎನ್ನುವವರು ಕುರುಕ್ಷೇತ್ರ ನೆನಪು ಮಾಡಿಕೊಳ್ಳಬೇಕು ಎಂದು ಮಾರ್ಮಿಕವಾಗಿ ಹೇಳಿದರು.88 ವರ್ಷದ ದೇವೇಗೌಡ ಇಲ್ಲಿಗೆ ಬಂದು ನಿಂತಿರುವುದು ಪಕ್ಷದ ಉಳಿವಿಗಾಗಿ. ಕ್ಷೇತ್ರಕ್ಕೆ ಆಗಬೇಕಿರುವ ಕೆಲಸಕ್ಕಾಗಿ ಶಿರಾ ತಾಲೂಕನ್ನು ದತ್ತು ತೆಗೆದುಕೊಂಡಿದ್ದೇನೆ ಈಗಿರುವ ಯಾವ ಮಹಾತ್ಮರು ಹೇಮಾವತಿ ಯಿಂದ ನೀರು ತರಲು ಹೋರಾಟ ಮಾಡಿಲ್ಲ. ಈ ಭಗೀರಥ ನಾನೇ ತಂದಿದ್ದೇನೆ ಎನ್ನುತ್ತಾನಲ್ಲ. ಯಾರಪ್ಪ ಅವನು ಭಗೀರಥ? ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ದೇವೇಗೌಡರ ಈ ಹೇಳಿಕೆ ಉಳಿದ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಎಲ್ಲಿ ಶಿರಾ ಮತದಾರರು ದೇವೇಗೌಡರನ್ನು ಹಿಂಬಾಲಿಸಿ ನಮಗೆ ಕೈ ಕೊಡುತ್ತಾರೇನೋ ಎಂಬ ಚಿಂತೆ ಉಳಿದ ಪಕ್ಷಗಳಿಗೆ ಆಗಿದೆ.