ದ್ವಾರಕೀಶ್ ಎರಡನೇ ಮದುವೆಯಾಗಿದ್ದು ಯಾವ ಕಾರಣಕ್ಕೆ ಗೊತ್ತಾ?! ಇಲ್ಲಿದೆ ಮಾಹಿತಿಸ್ಯಾಂಡಲ್ ವುಡ್ ಕಂಡ ಮಹಾನ್ ಪ್ರತಿಭೆಗಳಲ್ಲಿ ದ್ವಾರಕೀಶ್ ಕೂಡ ಒಬ್ಬರು. ನಟನಾಗಿ ಆತ ನಕ್ಕು ಅಸಂಖ್ಯವಾದ ಹೃದಯಗಳನ್ನು ನಲಿಸಿದ್ದಾರೆ. ನಿರ್ಮಾಪಕನಾಗಿ ಆತನ ಸಾಹಸ, ಸೋಲು, ಗೆಲುವುಗಳು, ಸಾಧನೆಗಳೆಲ್ಲವೂ ಒಂದು ಸಾಮಾನ್ಯ ಜೀವ ಮಾಡುವಂತದ್ದಲ್ಲ.
ದ್ವಾರಕೀಶ್ ಜನಿಸಿದ್ದು ಆಗಸ್ಟ್ 19,1942ರಲ್ಲಿ. ಹುಟ್ಟಿದ ಊರು ಹುಣಸೂರು. ಮೈಸೂರಿನಲ್ಲಿ ಬನುಮಯ್ಯ, ಶಾರದಾ ವಿಲಾಸ್ ಶಾಲೆ, ಸಿಪಿಸಿ ಪಾಲಿಟೆಕ್ನಿಕ್ ಮುಂತಾದೆಡೆಗಳಲ್ಲಿ ವಿದ್ಯಾಭ್ಯಾಸ ನಡೆಸಿದ ದ್ವಾರಕೀಶ್ ಅವರ ಮನದಲ್ಲಿ ಯಾವಾಗಲೂ ಸಿನಿಮಾ ಕನಸು ತುಂಬಿ ತುಳುಕುತ್ತಿತ್ತು.

ಅವರ ಸೋದರಮಾವ ಹುಣಸೂರು ಕೃಷ್ಣಮೂರ್ತಿ ಅವರಿಗೆ ದುಂಬಾಲು ಬಿದ್ದಿದ್ದರು. ಸಿ.ವಿ. ಶಂಕರ್ ನಿರ್ದೇಶನದ ‘ವೀರಸಂಕಲ್ಪ’ದಲ್ಲಿ ದ್ವಾರಕೀಶ್ ಅವರಿಗೆ ಮೊದಲ ಅವಕಾಶ ಒಲಿಯುವಂತೆ ಮಾಡಿದರು. ದ್ವಾರಕೀಶ್ ತಮ್ಮ ನೆಗೆಟಿವ್ ಅಂಶಗಳನ್ನು ತಾವೇ ಅಣಕು ಮಾಡಿಕೊಳ್ಳುತ್ತಾ, ಅದನ್ನೇ ತನ್ನ ಪಾಸಿಟಿವ್ ಶಕ್ತಿಗಳನ್ನಾಗಿ ಮಾಡಿಕೊಂಡು ಮೇಲೆ ಬಂದವರು.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಅವರು ನಿರ್ಮಿಸಿದ ಒಟ್ಟು ಚಿತ್ರಗಳು 50. ಹೀಗೆ ಅಪಾರ ಕನಸುಗಳನ್ನು ಹೊತ್ತು ಬಂದಿದ್ದ ದ್ವಾರಕಾನಾಥ್ ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಹೆಸರು, ಹಣ, ಕೀರ್ತಿ ಎಲ್ಲವನ್ನೂ ಗಳಿಸಿದ್ದರು. ಆದರೆ ಬದುಕು ಹೇಗೆ ತಿರುವು ಪಡೆದುಕೊಳ್ಳುತ್ತದೆ ಎಂದು ಊಹಿಸುವುದು ಕಷ್ಟ. ಅದು ದ್ವಾರಕೀಶ್ ಅವರ ಜೀವನದಲ್ಲೂ ನಡೆದು ಹೋಗಿತ್ತು. ಸುಮಾರು ಹದಿನೆಂಟು ವರ್ಷಗಳ ಕಾಲ ಯಾವುದೇ ಸಿನಿಮಾ, ನಟನೆ ಇಲ್ಲದೆ ಎಲ್ಲವನ್ನೂ ಕಳೆದುಕೊಂಡು ಬಿಟ್ಟಿದ್ದರು.
ಅದು ದ್ವಾರಕೀಶ್ ಅವರ ಜೀವನದಲ್ಲೂ ನಡೆದು ಹೋಗಿತ್ತು. ಸುಮಾರು ಹದಿನೆಂಟು ವರ್ಷಗಳ ಕಾಲ ಯಾವುದೇ ಸಿನಿಮಾ, ನಟನೆ ಇಲ್ಲದೆ ಎಲ್ಲವನ್ನೂ ಕಳೆದುಕೊಂಡು ಬಿಟ್ಟಿದ್ದರು. ಭಾರೀ ನಷ್ಟದಿಂದಾಗಿ ಸಾಲ ತೀರಿಸಲು ಚೆನ್ನೈ, ಬೆಂಗಳೂರಿನಲ್ಲಿದ್ದ ಆಸ್ತಿಯನ್ನೆಲ್ಲಾ ಮಾರಾಟ ಮಾಡಿದ್ದರು. ಜತೆಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಆಗಿತ್ತು.

ಈ ನಡುವೆ ತಮಗೆ ನೆಮ್ಮದಿ ಬೇಕೆಂದು ಬಯಸಿದ್ದರು. ಆಗಲೇ ಇವರಿಗೆ ಮತ್ತೊಂದು ಹೆಣ್ಣಿನೊಂದಿಗೆ ಸಂಬಂಧ ಬೆಳೆ ಮದುವೆಯಾಗಿದ್ದು.
ಮೊದಲೇ ಮದುವೆಯಾಗಿ ಮೊದಲ ಪತ್ನಿಗೆ ಐದು ಮಕ್ಕಳಿದ್ದರೂ ದ್ವಾರಕೀಶ್, ಮತ್ತೊಂದು ಮದುವೆಯಾಗಿದ್ದು, ಇಡೀ ಸಿನಿ ರಂಗಕ್ಕೆ ಗೊತ್ತಿದ್ದ ವಿಚಾರ. ಯಾರ ಬಳಿಯೂ ಈ ಸಂಗತಿಯನ್ನು ಮುಚ್ಚಿಟ್ಟಿರಲಿಲ್ಲ ದ್ವಾರಕೀಶ್ ಅವರು. . ಒಬ್ಬರ ಹೆಸರು ಅಂಬುಜಾ ಮತ್ತೊಬ್ಬರ ಹೆಸರು ಶೈಲಜಾ. ದ್ವಾರಕೀಶ್ ಇಬ್ಬರೂ ಪತ್ನಿಯರೊಂದಿಗೆ ಒಂದೇ ಮನೆಯಲ್ಲಿ ಸುಖವಾಗಿ ವಾಸ ಮಾಡುತ್ತಿದ್ದಾರೆ.