ನೀಚ ಹೇಳಿಕೆ ನೀಡಿದ ಮುಲ್ಲಪಲ್ಲೀ ; ಜಾಲತಾಣದಲ್ಲಿ ಶುರುವಾಯಿತು ಅಭಿಯಾನ! ಹಿಗ್ಗಾಮುಗ್ಗ ಉಗಿದ ನೆಟ್ಟಿಗರು!ದೇಶದಲ್ಲಿ ಅತ್ಯಾಚಾರ ಆರೋಪಗಳು ಜಾಸ್ತಿಯಾಗಿದೆ. ಹತ್ರಾಸ್ ಅ’-ತ್ಯಾ’-ಚಾ-‘ರ’ ಪ್ರಕರಣ ಇಡಿ ದೇಶವನ್ನೇ ದಂಗು ಬಡಿಸಿತ್ತು! ಇಂಥ ನೀಚ ಕೆಲಸ ಮಾಡುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ದೇಶಾದ್ಯಂತ ಕೇಳಿಬರುತ್ತದೆ. ಆದರೆ ಕಾಂಗ್ರೆಸ್ ನ ಕೇರಳ ಘಟಕದ ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್ ಮಾತ್ರ ಕೀಳಾಗಿ ಮಾತನಾಡಿದ್ದಾರೆ.

ಹೌದು,ರಾಜ್ಯ ವಿಧಾನಸಭೆ ಬಳಿಕ ಮಾತನಾಡಿದ ಅವರು “ಆತ್ಮಗೌರವ ಇರುವ ಮಹಿಳೆಯರು ಅ-”ತ್ಯಾ-‘ಚಾ’-ರಕ್ಕೊಳಗಾದರೆ ತಕ್ಷಣ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಥವಾ ತಮ್ಮ ಮೇಲೆ ಅಂಥ ದೌರ್ಜನ್ಯಗಳು ಇನ್ನು ಮುಂದೆ ನಡೆಯದಂತೆ ಎಚ್ಚರವಹಿಸಬೇಕು. ಆದರೆ ಒಂದು ಮಹಿಳೆ ಬಂದು ನನ್ನ ಮೇಲೆ ನಿರಂತರ ಅ’-ತ್ಯಾ’-ಚಾ’-ರ ಆಯಿತು ಎಂದು ಹೇಳಿದರೆ ನಂಬಲು ಅಸಾಧ್ಯ” ಎಂದು ಹೇಳಿಕೆ ನೀಡಿದರು.

ಸದ್ಯ ಈ ಹೇಳಿಕೆಯು ಭಾರಿ ಚರ್ಚೆಗೆ ಗ್ರಾಸವಾಗಿದೆ. ಜಾಲತಾಣದಲ್ಲಿ ನೆಟ್ಟಿಗರು ಕಾಂಗ್ರೆಸ್ ಕಲಿಸುವ ಸಂಪ್ರದಾಯವೇ ಇದು, ನಾಚಿಕೆಯಾಗಬೇಕು ಇವನ ಜನ್ಮಕ್ಕೆ ಎಂದೆಲ್ಲಾ ಹೇಳಿ ಜಾಡಿಸಿದ್ದಾರೆ. ಇನ್ನೂ ಹಲವರು ಈತ ತಕ್ಷಣ ತನ್ನ ನೀಡಿದ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.