ಪಟಾಕಿ ಮಾರುವವನ ಬಂಧನ ; ಮಗಳ ರೋದನೆಗೆ ಸ್ಪಂದಿಸಿ ತಕ್ಷಣ ದೀಪಾವಳಿ ಗಿಫ್ಟ್ ನೀಡಿದ ಯೋಗಿ ಆದಿತ್ಯನಾಥ್!ದೀಪಾವಳಿಯಂದು ಪಟಾಕಿ ಮಾರುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿತ್ತು. ಅಪ್ಪನನ್ನು ಬಂಧಿಸಬೇಡಿ ಎಂದು ಪೊಲೀಸ್ ಜೀಪಿಗೆ ತಲೆ ಚಚ್ಚಿಕೊಂಡಿದ್ದ ಬಾಲಕಿಯ ಮೇಲೆ ಸಿಎಂ ಯೋಗಿ ಆದಿತ್ಯನಾಥ್ ಅವರು ಶುಭಸುದ್ದಿ ನೀಡಿದ್ದಾರೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಬಂಧಿಸಿರುವ ವ್ಯಕ್ತಿಯನ್ನು ಬಿಡುಗಡೆಗೊಳಿಸಿ ಬಾಲಕಿಯ ರೋದನೆಗೆ ಪರಿಹಾರ ನೀಡಿದ್ದಾರೆ. ದೀಪಾವಳಿಯ ಪ್ರಯುಕ್ತ ವ್ಯಕ್ತಿ ಪಟಾಕಿ ಮಾಡುತ್ತಿದ್ದರು ಆದರೆ ಪೊಲೀಸರು ಬಂದು ಅವರನ್ನು ಬಂಧಿಸಿ ಎಳೆದೊಯ್ದಿದ್ದರು. ಅಪ್ಪನನ್ನು ಬಂಧಿಸಿದ್ದನ್ನು ವಿರೋಧಿಸಿ ಬಾಲಕಿ ಜೀಪ್ ಗೆ ತಲೆ ಚಚ್ಚಿಕೊಂಡಿದ್ದಳು. ಈ ಕರುಣಾಜನಕ ಘಟನೆಯನ್ನು ಗಮನಿಸಿದ ಯೋಗಿ ಆದಿತ್ಯನಾಥ್ ಆ ಬಾಲಕಿಯ ತಂದೆಯನ್ನು ಬಿಡುಗಡೆಗೊಳಿಸಿದ್ದಾರೆ.