ಬಿಜೆಪಿ ಪಕ್ಷವನ್ನು ನೆಲಕ್ಕುರುಳಿಸುತ್ತೇನೆ ಎಂದ ಹೇಳುವಾಗಲೇ ವೇದಿಕೆಯಿಂದ ಧೊಪ್ಪೆಂದು ಬಿದ್ದ ಕಾಂಗ್ರೆಸ್ ಅಭ್ಯರ್ಥಿ! ವಿಡಿಯೋ ಎಲ್ಲೆಡೆ ವೈರಲ್ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ರಂಗು ಬಂದಿದೆ. ಅಭ್ಯರ್ಥಿಗಳು ಭಾರಿ ಪ್ರಚಾರುಕಾರ್ಯಗಳಲ್ಲಿ ತೊಡಗಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೊಬ್ಬರು ಯಡವಟ್ಟು ಮಾಡಿಕೊಂಡಿದ್ದಾರೆ.

ಬಿಹಾರದ ದರ್ಭಂಗಾದ ಜಾಲೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಶ್ಕುರ್ ಅಹಮ್ಮದ್ ಉಸ್ಮಾನಿ ತಮ್ಮ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದಾಗ ವೇದಿಕೆ ಕುಸಿದು ಬಿದ್ದ ಘಟನೆ ನಡೆದಿದೆ.ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಮಶ್ಕುರ್ ಅಹಮ್ಮದ್ ಉಸ್ಮಾನಿ, ಪ್ರಜಾಪ್ರಭುತ್ವದಲ್ಲಿ ಯಾರನ್ನು ಯಾವಾಗ ಬೀಳಿಸಬೇಕು ಎಂಬುದು ಜನರಿಗೆ ಗೊತ್ತು ಎನ್ನುತ್ತಿದ್ದಂತೇ ವೇದಿಕೆ ಕುಸಿದು ಬಿದ್ದಿದೆ. ಆದರೆ ವೇದಿಕೆ ಕುಸಿದು ಬಿದ್ದದ್ದರಿಂದ ಯಾರಿಗೂ ಯಾವುದೇ ಅಪಾಯ ಆಗಿಲ್ಲ.

ಭೂತಾನ್ ದೇಶದಲ್ಲಿ ಜಿಡಿಪಿ ಇಲ್ಲ! ಮತ್ತೇನನ್ನು ಅಳೆಯೋದು ಗೊತ್ತಾ?

ಈ ಭೂತನ್ ರಾಷ್ಟ್ರ ಹಲವು ಕಾರಣಗಳಿಂದಾಗಿ ಜಗತ್ತಿನ ಸಂತೋಷಭರಿತ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಅಲ್ಲಿನ ಜನರ ಜೀವನ ಮಟ್ಟ, ಆರ್ಥಿಕ ಸುಧಾರಣೆಯ ಜೊತೆಗೆ ಅವರ ಸಂತೋಷ ಮಟ್ಟವನ್ನು ಅಳೆದು ಕೊಡುವ ಜಗತ್ತಿನ ಏಕೈಕ ರಾಷ್ಟ್ರ ಎಂದರೆ ಅದು ಭೂತಾನ್. ಇದು ದಕ್ಷಿಣ ಏಷ್ಯಾದ ಪುಟ್ಟ ರಾಷ್ಟ್ರ. ಭಾರತದ ಪಕ್ಕದಲ್ಲಿದೆ. ಬೌದ್ಧರು ಇರುವ ಈ ರಾಷ್ಟ್ರದಲ್ಲಿ ಪ್ರಸಕ್ತ ಜನಸಂಖ್ಯೆ ಸುಮಾರು 7 ಲಕ್ಷದ 7೦ ಸಾವಿರ. ಜಿಎನ್ಎಚ್ ಅನ್ನು ಪರಿಚಯಿಸಿದ ಹಾಗೂ ಜಾರಿಗೊಳಿಸಿದ ಏಕೈಕ ರಾಷ್ಟ್ರ ವಿದು. GNH ಅಂದ್ರೆ Gross National Happiness.

ದೇಶದ ಜನತೆಯ ಸಂತೋಷ ಮಟ್ಟವನ್ನು ಸಾಧಿಸಲು ಹಾತೊರೆಯುವ ಈ ಸಣ್ಣ ರಾಷ್ಟ್ರ ಜಗತ್ತಿಗೆ ಮಾದರಿಯಾಗಿದೆ. ಇದು ಮೊದಲಿನಿಂದಲೂ ಸ್ವತಂತ್ರ ರಾಷ್ಟ್ರ. 17ನೇ ಶತಮಾನದಲ್ಲಿ ಏಕೀಕರಣಗೊಂಡ ಈ ರಾಷ್ಟ್ರ ಕ್ರಿಸ್ತಪೂರ್ವ 2000 ದಿಂದಲೇ ಚರಿತ್ರೆಯಲ್ಲಿ ಗುರುತಿಸಿಕೊಂಡಿದೆ.

ನಿಸರ್ಗದ ಮಡಿಲಲ್ಲಿ ಅದಕ್ಕೆ ತೊಂದರೆ ಕೊಡದೆ ಮಲಗುವ ಈ ಪರಿಸರ ಪ್ರೇಮ ಅವರನ್ನು ಸಂತೋಷದಿಂದ ಇರಿಸಿದೆ. ಭೂತಾನ್ ರಾಷ್ಟ್ರ ತನ್ನ ಸಂವಿಧಾನದಲ್ಲಿ ಜನರ ಜೀವನ ಮಟ್ಟದ ಸುಧಾರಣೆಯ ಜೊತೆಗೆ ಅವರ ಸಂತೋಷ ಮಟ್ಟದ ಸುಧಾರಣೆಯ ಅಂಶವನ್ನು ಸಹ ಸೇರಿಸಿದೆ. ತಮ್ಮ ಕಾನೂನು ಅಥವಾ ಆಳ್ವಿಕೆಯಲ್ಲಿ ಜನರು ಸಂತೋಷದಿಂದ ಇದ್ದಾರೆ ಅಥವಾ ಇಲ್ಲವೇ ಎಂಬುದನ್ನು ಸರ್ವೆ ಮುಖಾಂತರ ತಿಳಿಯುತ್ತದೆ. ಇದರ ಕೊರತೆ ಕಂಡುಬಂದಲ್ಲಿ ಅವರ ಸಂತೋಷ ಮಟ್ಟವನ್ನು ಸುಧಾರಿಸುವಂತಹ ಸಭೆಗಳನ್ನು ಏರ್ಪಡಿಸಿ ಅದರ ಪ್ರಕಾರವೇ ಕಾರ್ಯನಿರ್ವಹಿಸುತ್ತದೆ. ಅಲ್ಲಿನ ಜನ ಸದಾ ಮಂದಸ್ಮಿತರು ಪ್ರೀತಿ ವಿಶ್ವಾಸವನ್ನು ತುಂಬಿಕೊಂಡವರು.