ಬ್ರೇಕಿಂಗ್ ನ್ಯೂಸ್ ; ಉಗ್ರರ ದಾಳಿಗೆ ಮೂವರು ಬಿಜೆಪಿ ಯುವ ಮುಖಂಡ ಸಾವು!ಕಾಶ್ಮೀರದಲ್ಲಿ ಉಗ್ರ ಅಟ್ಟಹಾಸ ಮುಂದುವರೆಯುತ್ತಲೇ ಇದೆ. ಪ್ರತಿದಿನ ಗುಂಡಿನ ಕಾಳಗ ನಡೆಯುತ್ತಲೇ ಇರುವ ಸ್ಥಿತಿಯಲ್ಲಿದೆ. ಜಮ್ಮು ಕಾಶ್ಮೀರದ ಕಣಿವೆ ಪ್ರದೇಶದಲ್ಲಿ ಉಗ್ರರ ದಾಳಿಯಿಂದಾಗಿ ಮೂವರು ಭಾರತಿಯ ಜನತಾ ಪಕ್ಷದ ಯುವ ಮುಖಂಡರು ಮೃತಪಟ್ಟಿದ್ದಾರೆ.

ಇಲ್ಲಿನ ಕುಲ್ಗಾಮ್ ಜಿಲ್ಲೆಯ ವೈಕೆ ಪೊರಾ ಬಳಿ ಕಾರಿನಲ್ಲಿ ಬರುತ್ತಿದ್ದ ಬಿಜೆಪಿ ನಾಯಕರಾದ ಫಿದಾ ಹುಸೇನ್ ಯಾಟೂ, ಉಮರ್ ರಷಿದ್ ಹಾಗೂ ರಮ್ಜಾನ್ ಹಜಮ್ ಎಂಬುವವರ ಮೇಲೆ ಭಯೋತ್ಪಾದಕರು ಗುಂಡಿನ ಮಳೆಗರೆದಿದ್ದಾರೆ.
ಈ ಮೂವರೂ ಬಿಜೆಪಿ ನಾಯಕರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕರು, ಮೂವರನ್ನೂ ಬಲಿ ಪಡೆದು ಸ್ಥಳದಿಂದ ಪರಾರಿಯಾಗಿದ್ದಾರೆ.ದಾಳಿಕೋರರನ್ನು ಬಂಧಿಸಲು ಈ ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ನಡೆಸಿದೆ. ಈ ನಡುವೆ ಕಾರ್ಯಕರ್ತರ ಮೇಲಿನ ದಾಳಿಯನ್ನು ಬಿಜೆಪಿ ಖಂಡಿಸಿದೆ.

ಇತ್ತೀಚೆಗೆ, ಕಾಶ್ಮೀರದಲ್ಲಿ ಆಡಳಿತ ಪಕ್ಷಕ್ಕೆ ಸಂಬಂಧಿಸಿದ ಹಲವಾರು ನಾಯಕರ ಮೇಲೆ ಹಲ್ಲೆ ನಡೆದಿದೆ.
ಜುಲೈನಲ್ಲಿ, ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನ ನಡೆದು ಬಿಜೆಪಿ ಮುಖಂಡ ಶೇಖ್ ವಸೀಮ್ ಬ್ಯಾರಿ ಮತ್ತು ಅವರ ಇಬ್ಬರು ಬೆಂಬಲಿಗರು ಸಾವನ್ನಪ್ಪಿದ್ದರು. ಬ್ಯಾರಿ ಈ ಹಿಂದೆ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು.

ಇನ್ನಾದರೂ ಕಾಶ್ಮೀರದಲ್ಲಿ ಆರ್ಟಿಕಲ್ 370 ಮರುಸ್ಥಾಪನೆ ಮಾಡಬೇಕು ಎನ್ನುವವರು ಇದರಿಂದ ಬುದ್ಧಿ ಕುಳಿತುಕೊಳ್ಳಬೇಕಾಗಿದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800