ವಿಡಿಯೋ ; ಇದು ಅರ್ನಬ್ ಗೋಸ್ವಾಮಿ ಅವರಿಗೆ ಭಾರತದಲ್ಲಿ ಇರುವ ಪ್ರೀತಿ! ಬಾಲಕನ ಮಾತುಗಳನ್ನು ಕೇಳಿ!ಟೈಮ್ಸ್ ನೌ ತೊರೆದು ರಿಪಬ್ಲಿಕ್ ಟಿವಿ ಆರಂಭಿಸಿರುವ ಪತ್ರಕರ್ತ ಅರ್ನಬ್ ಗೋಸ್ವಾಮಿ ‘ನೇಷನ್ ವಾಂಟ್ಸ್ ಟು ನೋ’ ಟ್ಯಾಗ್ ಲೈನ್ ಬಳಕೆ ಮಾಡಬಹುದು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ಟೈಮ್ಸ್ ನೌ ಸಂಸ್ಥೆಯ ಬೆನೆಟ್ ಕೋಲ್ಮನ್ ಮತ್ತು ಕಂಪನಿ ಲಿಮಿಟೆಡ್ ಸಂಸ್ಥೆ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಜಯಂತ್ ನಾಥ್ ನೇತೃತ್ವದ ಪೀಠ, ಅರ್ನಬ್ ಗೋಸ್ವಾಮಿ ಅವರು ನೇಷನ್ ವಾಂಟ್ಸ್ ಟು ನೋ’ ಟ್ಯಾಗ್ ಲೈನ್ ಅನ್ನು ಅವರ ಭಾಷಣ ಅಥವಾ ಪ್ರಸ್ತುತಿಯಲ್ಲಿ ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿದೆ. ಅಂತೆಯೇ NATION WANTS TO KNOW ಎಂಬ ಟ್ಯಾಗ್‌ಲೈನ್‌ಗೆ ಸಂಬಂಧಿಸಿದಂತೆ, ಈ ಹಂತದಲ್ಲಿ ದೂರುದಾರ (ಬೆನೆಟ್ ಕೋಲ್ಮನ್) ಪರವಾಗಿ ಯಾವುದೇ ಮಧ್ಯಂತರ ಆದೇಶವನ್ನು ರವಾನಿಸಲಾಗುವುದಿಲ್ಲ.

ಈ ಟ್ಯಾಗ್ ಲೈನ್ ಅನ್ನು ಅರ್ನಬ್ ಗೋಸ್ವಾಮಿ ಅಥವಾ ರಿಪಬ್ಲಿಕ್ ಟಿವಿ ಮಾಲೀಕತವ ಹೊಂದಿರುವ ಎಆರ್ ಜಿ ಔಟ್ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ತನ್ನ ಸರಕು/ಸೇವೆಗಳಿಗೆ ಸಂಬಂಧಿಸಿದಂತೆ ಟ್ರೇಡ್ಮಾರ್ಕ್ ಆಗಿ ‘ನೇಷನ್ ವಾಂಟ್ಸ್ ಟು ನೋ’ ಪದವನ್ನು ಬಳಸಲು ಬಯಸಿದರೆ, ಅವರು ಅಂತಹ ಬಳಕೆಗಾಗಿ ಜವಾಬ್ದಾರಿ ಹೊರಬೇಕಾಗುತ್ತದೆ. ಈ ಸಂಬಂಧ ನಿಯಮಿತವಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕಾಗುತ್ತದೆ ಎಂದೂ ಹೇಳಿದ್ದಾರೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800

ದೂರುದಾರ ಸಂಸ್ಥೆ ಟೈಮ್ಸ್ ನೌ ಮಾಲೀಕತ್ವ ಹೊಂದಿರುವ ಬೆನೆಟ್ ಕೋಲ್ಮನ್ ಮತ್ತು ಕಂಪನಿ ಲಿಮಿಟೆಡ್, ಈ ಹಿಂದೆ ಅರ್ನಬ್ ಗೋಸ್ವಾಮಿ ಪ್ರಸ್ತುತ ಪಡಿಸುತ್ತಿದ್ದ ನ್ಯೂಸ್ ಹವರ್ ಮತ್ತು ಆ ಕಾರ್ಯಕ್ರಮದಲ್ಲಿ ಅವರು ಬಳಕೆ ಮಾಡುತ್ತಿದ್ದ NATION WANTS TO KNOW ಟ್ಯಾಗ್ ಲೈನ್ ತಮ್ಮ ಟೈಮ್ಸ್ ನೌ ಸಂಸ್ಥೆಯ ಸ್ವತ್ತಾಗಿದ್ದು, ಇದರ ಬಳಕೆ ಮಾಡದಂತೆ ಎಆರ್ ಜಿ ಔಟ್ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಹಾಗೂ ಅರ್ನಬ್ ಗೋಸ್ವಾಮಿಗೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಅಲ್ಲದೆ ಈ ಅರ್ಜಿ ಸಂಬಂಧ ಇಂಜಕ್ಷನ್ ಆರ್ಡ್ ತಂದಿದ್ದ ಸಂಸ್ಥೆ ಎಆರ್ ಜಿ ಔಟ್ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಹಾಗೂ ಅರ್ನಬ್ ಗೋಸ್ವಾಮಿ ಟ್ಯಾಗ್ ಲೈನ್ ಬಳಕೆ ಮಾಡದಂತೆ ತಾತ್ಕಾಲಿಕ ತಡೆ ನೀಡಿತ್ತು. ಆದರೆ ಇದೀಗ ಪತ್ರಕರ್ತ ಅರ್ನಬ್ ಗೋಸ್ವಾಮಿ ತಮ್ಮ ನೆಚ್ಚಿನ ಮತ್ತು ಖ್ಯಾತಿಯ NATION WANTS TO KNOW ಪದ ಬಳಕೆಗೆ ಮುಕ್ತರಾಗಿದ್ದಾರೆ.

ಅರ್ನಬ್ ಗೋಸ್ವಾಮಿ ಅವರ ಪುಟ್ಟ ಅಭಿಮಾನಿಯೊಬ್ಬ ಅವರ ಬಗ್ಗೆ ಭಾವುಕನಾಗಿ ಮಾತನಾಡಿದ್ದಾನೆ. ಅದರ ವಿಡಿಯೋ ನೋಡಿ :

2006ರಲ್ಲಿ ಟೈಮ್ಸ್ ನೌ ಸಂಸ್ಥೆ ನ್ಯೂಸ್ ಹವರ್ ಕಾರ್ಯಕ್ರಮವನ್ನು ಆರಂಭಿಸಿತ್ತು. ಈ ಚರ್ಚಾ ಕಾರ್ಯಕ್ರಮದಲ್ಲಿ ಅರ್ನಬ್ ಗೋಸ್ವಾಮಿ ಬಳಕೆ ಮಾಡುತ್ತಿದ್ದ NATION WANTS TO KNOW ಎಂಬ ಟ್ಯಾಗ್‌ಲೈನ್‌ ವ್ಯಾಪಕ ಖ್ಯಾತಿ ಪಡೆದಿತ್ತು,. ಇದೇ ಟ್ಯಾಗ್ ಲೈನ್ ಸೋಷಿಯಲ್ ಮೀಡಿಯಾಗಳಲ್ಲಿ ಮೀಮ್ ಗಳಿಗೂ ಬಳಸಿಕೊಳ್ಳಲಾಗುತ್ತಿದೆ.