ಶ್ರಿಯಾ ಚರಣ್ ಅವರ ಒಂದು ವಿಡಿಯೋ ಅವರ ಜೀವನಕ್ಕೆ ತಿರುವು ನೀಡಿತು!ಶ್ರೀಯ ಸರನ್ ಅವರ ನಟನೆಯಂತೂ ನೋಡಿರುತ್ತೀವಿ, ಆದರೆ ಅವರ ಮನೋ ಇಚ್ಛೆ ನಟಿ ಯಾಗುವುದಲ್ಲ . ಬದಲಿಗೆ ಅವರಿಗೆ ಬಹಳ ದೊಡ್ಡ ನೃತ್ಯಗಾರ್ತಿ ಆಗಬೇಕೆಂಬ ಹಂಬಲ ವಿತ್ತು ಆದರೆ ವಿಧಿಯ ಕೈವಾಡ ಸಿನಿಮಾರಂಗಕ್ಕೆ ಬರುವಂತಾಯಿತು. ಇವರ ಪಯಣ ಹೇಗಿತ್ತು ನೋಡೋಣ. ಇವರು 1982 ಸೆಪ್ಟೆಂಬರ್ 11 ರಂದು ಜನಿಸಿದರು ಇವರ ತಂದೆ ಬಿಎಚ್ಇಎಲ್ ನಲ್ಲಿ ಕೆಲಸ ಮಾಡುತ್ತಿದ್ದರು ಹಾಗೂ ತಾಯಿ ಕೆಮಿಸ್ಟ್ರಿ ಟೀಚರ್ ಆಗಿ ರಾಣಿಪುರ್ ನಲ್ಲಿ ಇದ್ದರು. ಇವರು ತಮ್ಮ ಹೆಚ್ಚಿನ ದಿನಗಳನ್ನು ಹರಿದ್ವಾರದಲ್ಲಿ ಕಳೆದಿದ್ದರು. ಶ್ರೀಯ ಸರನ್ ಓದಿದ್ದು ಬ್ಯಾಚುಲರ್ ಆಫ್ ಆರ್ಟ್ಸ್ ಡಿಗ್ರಿ ಅದಾದ ಮೇಲೆ ಆಕೆ ನೃತ್ಯಗಾರ್ತಿ ಆಗಲು ತಯಾರಿ ನಡೆಸಿದರು. ಕಥಕ್ ಮತ್ತು ರಾಜಸ್ಥಾನಿ ಫೋಕ್ ನೃತ್ಯವನ್ನು ಇವರು ಕಲಿತಿದ್ದಾರೆ, ಇವರ ಗುರುಗಳು ಶೋವನ್ ನಾರಾಯಣ್ ಇವರು ಕಥಕ್ ನೃತ್ಯಗಾರರಲ್ಲಿ ಬಹಳ ಹೆಸರುವಾಸಿ.

ಇವರ ಜೀವನದ ಉದ್ದೇಶ ನೃತ್ಯದಿಂದ ಸಿನೆಮಾ ರಂಗಕ್ಕೆ ಬದಲಾಗುವಂತೆ ಮಾಡಿದ್ದು ಇವರ ಒಂದು LSR ವೀಡಿಯೋ, ಇವರು ಮಾಡಿದ ವೀಡಿಯೋವನ್ನು ನೋಡಿದ ರಾಮೋಜಿ ಫಿಲ್ಮ್ ರವರು ತಮ್ಮ ಇಶ್ತ್ಮ್ ಸಿನೆಮಾದಲ್ಲಿ ಮುಖ್ಯ ಪಾತ್ರವನ್ನು ಮಾಡಲು ಶ್ರೀಯಾ ಸರನ್ ಅವರಿಗೆ ಒಂದು ಆಫರ್ ನೀಡುತ್ತಾರೆ. ಇದನ್ನು ಒಪ್ಪಿ ಅಭಿನಯಿಸಿದ ಮೇಲೆ ಅದೇ ತಂಡದವರ 4 ಸಿನೆಮಾಗಳ ಕಾಂಟ್ರಾಕ್ಟ್ ಗಳಿಗೆ ಸಹಿ ಹಾಕಿದ್ದರು, ಈ ಎಲ್ಲಾ ಸಿನೆಮಾಗಳಿಂದ ಅವರ ನಟನೆಗ ಎಲ್ಲೆಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಗತೊಡಗಿತು. ಇದರಿಂದಾಗಿ ಹಿಂದೆ ಸಿನೆಮಾಗಳಲ್ಲಿ ಕೂಡಾ ಅವಕಾಶಗಳು ಸಿಗತೊಡಗಿದವು. ಇದಿಷ್ಟೇ ಅಲ್ಲದೆ ಕನ್ನಡ ಹಾಗೂ ತೆಲುಗು ಸಿನೆಮಾಗಳಲ್ಲಿ ಕೂಡಾ ನಟನೆ ಮಾಡಿದರು, ತೆಲುಗುವಿನ ಸಿನೆಮಾ ನಟನೆ ಮಾಡಿದ್ದರಿಂದ IIFA ನಲ್ಲಿ ಕಾಣಿಸಿಕೊಳ್ಳುವ ಅವಕಾಶ ಕೂಡಾ ದೊರಕಿತು.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಶೀಯಾ ಸರನ್ ಅವರಿಗೆ ಅವರ ಒಳ್ಳಯ ನಟನೆಯ ಕಾರಣದಿಂದಾಗಿ ಒಂದು ದೊಡ್ಡ ಸಿನೆಮಾ ಮಾಡಲು ಅವಕಾಶ ಸಿಕ್ಕಿತು ಅದೇ ದಿ ಬಾಸ್ ಈ ಸಿನೆಮಾದಿಂದ ಅವರ ಪ್ರಸಿದ್ದಿ ಬಹಳ ಹೆಚ್ಚಿತು, ಅವರ ಯಶಸ್ಸಿನ ಹಾದಿಯಲ್ಲಿ ಹಾಲಿವುಡ್ ನಲ್ಲಿಯೂ ಕೂಡಾ ಕಾಲ್ ರ‍್ಲ್ ಸೆಂಟರ್ ನ ಉದ್ಯೋಗಿಯ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೆ ಪಾಂಡ್ಸ್, ಫೈರ್ ಎಂಡ್ ಲವ್ಲೀ ಯಂತಹವುಗಳ ಬ್ರಾಂಡ್ ಕೂಡಾ ಆಗಿದ್ದರು. ಹೀಗೆ ಯಶಸ್ಸಿನ ಹಾದಿ ಹಿಡಿದಿದ್ದರೂ ಕೂಡಾ ಅವರ ನಡವಳಿಕೆಯಲ್ಲಿ ಯಾವ ಬದಲಾವಣೆಗಳನ್ನೂ ಮಾಡಿಕೊಳ್ಳದೆ ಎಲ್ಲರೊಂದಿಗೂ ಸ್ನೇಹದಿಂದ ಇರುತ್ತಿದ್ದ ಇವರು ಎಲ್ಲರ ಮನಸ್ಸಿನಲ್ಲಿ ಮನೆಮಾಡಿ ಬಿಟ್ಟಿದ್ದಾರೆ. ಯಾವುದೇ ಇಂಡಸ್ಟಿçಯಲ್ಲಿಯೂ ಹೆಚ್ಚು ಕಮ್ಮಿ ಎಂಬ ತಾರತಮ್ಯ ಮಾಡದೆ ಎಲ್ಲವೂ ಭಾರತೀಯ ಸಿನೆಮಾಗಳು ಎಂಬ ಸಮಾನ ದೃಷ್ಟಿ ಇಂದ ನೋಡುತ್ತಿದ್ದರು. ಹೀಗೆ ನೃತ್ಯಗಾರ್ತಿಯಾಗಲು ಹೊರಟ ಶ್ರೀಯಾ ಸರನ್ ನಟಿಯಾಗಿಯೂ ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದಾರೆ.