18 ವರ್ಷಗಳ ಬಳಿಕ ಬಂಡೀಪುರ ಪಕ್ಷಿಧಾಮದ ಗಣತಿ ಮಾಡುತ್ತಿರುವ ಕಾರಣ:ಚಾಮರಾಜನಗರ: ಕರ್ನಾಟಕ ಅರಣ್ಯ ಇಲಾಖೆ 18 ವರ್ಷಗಳ ಸುದೀರ್ಘ ಅವಧಿಯ ನಂತರ ಫೆಬ್ರವರಿ 5 ರಿಂದ 7 ರವರೆಗೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಪಕ್ಷಿ ಗಣತಿಯನ್ನು ಕೈಗೊಳ್ಳಲಿದೆ.

ಮೂರು ದಿನಗಳ ಪಕ್ಷಿ ಗಣತಿಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಇಲಾಖೆ ಮಾಡಿದೆ. ಗಣತಿಯಲ್ಲಿ 300 ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದು, ಬಂಡಿಪುರದ 13 ವಿವಿಧ ಶ್ರೇಣಿಗಳ ನೌಕರರು, ಸ್ವಯಂಸೇವಕರು ಮತ್ತು ಪೊನ್ನಂಪೇಟೆಯ 20 ವಿದ್ಯಾರ್ಥಿಗಳು ಇದರಲ್ಲಿ ಸೇರಿದ್ದಾರೆ.

ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಎಸ್.ಆರ್. ನಟೇಶ್ ಮಾತನಾಡಿ “ಚಳಿಗಾಲದಲ್ಲಿ ಉತ್ತರ ಭಾರತದಿಂದ ಹೆಚ್ಚಿನ ಸಂಖ್ಯೆಯ ಪಕ್ಷಿಗಳು ದಕ್ಷಿಣ ಭಾಗಗಳಿಗೆ ವಲಸೆ ಬರುತ್ತವೆ, ಕಬಿನಿ ಹಿನ್ನೀರು ಮತ್ತು ಬಂಡೀಪುರ ಕಾಡುಗಳು ಹೆಚ್ಚಿನ ಸಂಖ್ಯೆಯ ಪಕ್ಷಿಗಳನ್ನು ಆಕರ್ಷಿಸುತ್ತವೆ. ಈ ಸಮಯದಲ್ಲಿ ಪಕ್ಷಿಗಳನ್ನು ಅಧ್ಯಯನ ಮಾಡಲು ಸಮೀಕ್ಷೆ ನಡೆಸಲಾಗುತ್ತಿದೆ ಮೂರು ದಿನಗಳ ಗಣತಿಯಲ್ಲಿ ಭಾಗವಹಿಸುವವರು ಬೇಟೆಯ ವಿರೋಧಿ ಶಿಬಿರ(anti-poaching camps)ಗಳಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ. “


ಪಕ್ಷಿ ವೀಕ್ಷಕರು 150 ಕ್ಕೂ ಹೆಚ್ಚು ವೈವಿದ್ಯಮಯ ಪಕ್ಷಿಗಳನ್ನು ಬಂಡೀಪುರ ಮೀಸಲು ಪ್ರದೇಶದಲ್ಲಿ ಗುರುತಿಸಬಹುದು. ಅವುಗಳಲ್ಲಿ ಪೆಲಿಕಾನ್, ಕೊಕ್ಕರೆಮ್ ಬುಲ್ ಬುಲ್, ನೀರಿನ ಕಾಗೆಗಳು ಸೇರಿದೆ. ಗಣತಿಯು ವಿವಿಧ ಪಕ್ಷಿಗಳ ಮಾಹಿತಿ ಮತ್ತು ಸ್ಥಳೀಯ ಮತ್ತು ವಲಸೆ ಹಕ್ಕಿಗಳ ವಿವರಗಳನ್ನು ಪಡೆಯುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ :  ಬಿಜೆಪಿ ಸೇರಿ ದೀದೀಗೆ ಶಾಕ್ ಕೊಟ್ಟ ಪ್ರಸಿದ್ಧ ನಟಿ!