ಬಾಬಾ ಕಾ ಡಾಭಾ ನಂತರ ಬೆಂಗ್ಳೂರಲ್ಲಿ ವೈರಲ್ ಆದ ಇನ್ನೋರ್ವ ವೃದ್ದ ವ್ಯಾಪಾರಿ, ಸಹಾಯ ಮಾಡೋರು ಇಲ್ಲಿ ಕ್ಲಿಕ್ಕಿಸಿ!ಬೆಂಗಳೂರು: ದೆಹಲಿಯ ಬಾಬಾ ಕಾ ಡಾಭಾ ವೃದ್ಧರ ಸಂಕಷ್ಟದ ಕುರಿತು ಸುದ್ದಿ ವೈರಲ್ ಆದ ಬೆನ್ನಲ್ಲೇ ಇದೀಗ ಬೆಂಗಳೂರಿನ ಸಸಿ ಮಾರುವ ವೃದ್ಧನ ವಿಡಿಯೋ ಸಖತ್ ವೈರಲ್ ಆಗಿದ್ದು, ಸಹಾಯ ಮಾಡುವಂತೆ ಬಾಲಿವುಡ್ ಸ್ಟಾರ್‍ ಗಳು ಸಹ ಮನವಿ ಮಾಡಿದ್ದಾರೆ. ಬೆಂಗಳೂರಿನ ಜೆಪಿ ನಗರದ ಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್ ಬಳಿ ಸಸಿ ಮಾರುವ ರೇವಣಸಿದ್ದಪ್ಪ ಅವರಿಗೆ ಸಹಾಯ ಮಾಡುವಂತೆ ಟ್ವೀಟ್ ವೈರಲ್ ಆಗಿದೆ. ಅಲ್ಲದೆ ಇದಕ್ಕೆ ಬಾಲಿವುಡ್ ನಟರು ಪ್ರತಿಕ್ರಿಯಿಸಿದ್ದು, ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ರೇವಣಸಿದ್ದಪ್ಪ ಅವರು ಸುಡುವ ಬಿಸಿಲಿನಲ್ಲಿ ಸಿಗ್ನಲ್ ಪಕ್ಕ ಕುಳಿತುಕೊಂಡು 10 ರಿಂದ 30 ರೂಪಾಯಿಗೆ ಸಸಿ ಮಾರುತ್ತಿದ್ದಾರೆ. ಈ ವೃದ್ಧನ ಬಗ್ಗೆ ಐ ಆಮ್ ಶುಭಮ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಇವರಿಗೆ ಸಹಾಯ ಮಾಡಿ ಎಂದು ನಟರಾದ ಸೋನು ಸೂದ್, ಮಾಧವನ್, ಕಾಂಚನಾ ಗುಪ್ತ ಮತ್ತು ಪ್ರವೀಣ್ ಕಸ್ವನ್ ಗೆ ಟ್ಯಾಗ್ ಮಾಡಲಾಗಿದೆ. ಇದನ್ನು ಕಂಡ ಹಲವರು ರೀಟ್ವೀಟ್ ಮಾಡಿದ್ದು, ಪೋಸ್ಟ್ ವೈರಲ್ ಆಗಿದೆ. ಪೋಸ್ಟ್ ನೋಡಿದ ಬಾಲಿವುಡ್ ನಟ ರಣದೀಪ್ ಹೂಡಾ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಣದೀಪ್ ಹೂಡಾ, ಹೇ ಬೆಂಗಳೂರು ಸ್ವಲ್ಪ ಪ್ರೀತಿಯನ್ನು ತೋರಿಸುವುದನ್ನು ಮಾಡಿ, ಇವರು ವುಲಾರ್ ಫ್ಯಾಷನ್ ಫ್ಯಾಕ್ಟರಿ, ಜೆಪಿ ನಗರ, ಸಾರಕ್ಕಿ ಸಿಗ್ನಲ್, ಕನಕಪುರ ರಸ್ತೆ, ಬೆಂಗಳೂರು. ಈ ವಿಳಾಸದಲ್ಲಿ ಕುಳಿತಿರುತ್ತಾರೆ ಎಂದು ಮನವಿ ಮಾಡಿದ್ದಾರೆ. ಸುಡುವ ಬಿಸಿಲಿನಲ್ಲಿ ಕೊಡೆ ಹಿಡಿದು ವ್ಯಾಪಾರ ಮಾಡುವ ಈ ವೃದ್ಧನ ಕಥೆ ಪರಿಸ್ಥಿತಿ ಎಂತಹವರಿಗೂ ಮನಮಿಡಿಯುತ್ತದೆ. ರಸ್ತೆ ಪಕ್ಕ ಕೊಡೆ ಹಿಡಿದುಕಂಡು ಸಸಿಗಳನ್ನು ಮಾರುತ್ತಿದ್ದಾರೆ. ಆದರೆ ಗ್ರಾಹಕರು ಬಾರದ ಹಿನ್ನೆಲೆ ಬೇಸರಗೊಂಡಿದ್ದಾರೆ. ಸಸಿಗಳನ್ನು ಯಾರು ತೆಗೆದುಕೊಳ್ಳದ್ದಕ್ಕೆ ವೃದ್ಧನಿಗೆ ತುಂಬಾ ನೋವುಂಟಾಗಿದೆ. ಇದನ್ನು ಮನಗಂಡ ಸೈನಿಕರೊಬ್ಬರು ಟ್ವೀಟ್ ಮಾಡಿ, ಬಾಲಿವುಡ್ ನಟರಿಗೆ ಟ್ಯಾಗ್ ಮಾಡಿದ್ದಾರೆ. ವೃದ್ಧನಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740202800