ನಿಯಮ ಮೀರಿ ಈದ್ ಮಿಲಾದ್ ನಮಾಜ್ ಗೆ ಹೊರಟ ಮುಸ್ಲಿಂ ಮುಖಂಡ; ಪೊಲೀಸರು ಸುಮ್ಮನೆ ಬಿಡ್ತಾರಾ?ಈದ್ ಮಿಲಾದ್ ಪ್ರಯುಕ್ತ ಎಲ್ಲಾ ಮುಸ್ಲಿಂ ಸಮುದಾಯದವರಿಗೆ ಕೋವಿಡ್ ಕಾರಣದಿಂದ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿ ಎಂದು ಹಲವಾರು ಮುಸ್ಲಿಂ ಸಂಘಟನೆಗಳು ಕರೆ ನೀಡಿದ್ದವು. ಆದರೆ ಈದ್ ಮಿಲಾದ್ ಪ್ರಯುಕ್ತ ನಮಾಜ್ ಗೆ ಹೊರಟಿದ್ದ ಫಾರುಖ್ ಅಬ್ದುಲ್ಲಾ ಅವರನ್ನು ಮನೆಯಿಂದ ಹೊರಗೆ ಬರದಂತೆ ಮಾಡಿದ್ದಾರೆ ಶ್ರೀನಗರ ಪೊಲೀಸರು.

ಡಾ ಫಾರೂಕ್ ಅಬ್ದುಲ್ಲಾ ಅವರ ನಿವಾಸವನ್ನು ಜಮ್ಮು-ಕಾಶ್ಮೀರ ಆಡಳಿತ ತಡೆದು ಅವರು ಹಸರತ್ಬಾಲ್ ದರ್ಗಾ ದಲ್ಲಿ ಪ್ರಾರ್ಥನೆ ಸಲ್ಲಿಸಲು ನಿವಾಸ ಬಿಟ್ಟು ಹೋಗದಂತೆ ಮಾಡಿದ್ದಾರೆ. ಮುಸ್ಲಿಮರ ಧಾರ್ಮಿಕ ಆಚರಣೆ ದಿನ ಪ್ರಾರ್ಥನೆ ಸಲ್ಲಿಸುವ ಮೂಲಭೂತ ಹಕ್ಕನ್ನು ಕಸಿದಿರುವ ಜಮ್ಮು-ಕಾಶ್ಮೀರ ಆಡಳಿತದ ಈ ಕ್ರಮವನ್ನು ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಟ್ವೀಟ್ ಮಾಡಿದೆ.ಲೋಕಸಭೆಯಲ್ಲಿ ಶ್ರೀನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಫಾರೂಕ್ ಅಬ್ದುಲ್ಲಾ ಇಂದು ಈದ್ ಮಿಲಾದ್ ಪ್ರಯುಕ್ತ ದಾಲ್ ಸರೋವರ ತೀರದಲ್ಲಿರುವ ದರ್ಗಾಕ್ಕೆ ಭೇಟಿ ನೀಡಬೇಕಾಗಿತ್ತು. ಆದರೆ ಫಾರೂಕ್ ಅಬ್ದುಲ್ಲಾಗೆ ಅದು ಸಾಧ್ಯವಾಗಲಿಲ್ಲ.

and

ಇದರ ಮಧ್ಯೆಯ ಮೆಹಬೂಬಾ ಮುಫ್ತಿ ಕಾಶ್ಮೀರದಲ್ಲಿ ತ್ರಿವರ್ಣಧ್ವಜ ಹಾರಲು ಬಿಡುವುದಿಲ್ಲ, ಆರ್ಟಿಕಲ್ 370 ಮರುಸ್ಥಾಪನೆ ಮಾಡಿಯೇ ಸಿದ್ಧ ಎಂದು ಹೇಳಿ ಭಾರತೀಯರ ಕೋಪಕ್ಕೆ ಗುರಿಯಾಗಿದ್ದಾರೆ. ಆರ್ಟಿಕಲ್ 370 ಮರುಸ್ಥಾಪನೆ ಆಗಬಾರದೆಂದು ಇಡೀ ಭಾರತ ದೇಶ ಒಕ್ಕೊರಲ ಕೂಗು ನೀಡಿದೆ