ಕಾಂಗ್ರೆಸ್ ಅಂದು ಮಾಡಿದ ಕೆಲಸಕ್ಕೆ ಉಗಿದ ಪ್ರಕಾಶ್ ಜಾವಡೇಕರ್ ; ಕ್ಷಮೆ ಕೇಳುತ್ತಾ ಕಾಂಗ್ರೆಸ್!?ಪಾಕಿಸ್ತಾನ ಪುಲ್ವಾಮಾ ದಾಳಿಯನ್ನು ನಾನೇ ಮಾಡಿಸಿದ್ದು ಎಂದು ಒಪ್ಪಿಕೊಂಡು ವಿಶ್ವದ ಎದುರು ಬೆತ್ತಲಾಗಿದೆ. ಆದರೆ ಅಂದು ಇದರಲ್ಲಿ ಪಾಕ್ ಪರ ಮಾತನಾಡಿ ಈ ದಾಳಿ ಒಂದು ಪಿತೂರಿ ಎಂದು ಟೀಕಿಸಿತ್ತು. ಈಗ ಕಾಂಗ್ರೆಸ್ ತಾನು ಮಾಡಿದ ತಪ್ಪಿಗೆ ದೇಶದ ಕ್ಷಮೆ ಕೇಳುತ್ತದೆಯೇ ಎಂದು ಪ್ರಕಾಶ್ ಜಾವಡೇಕರ್ ಜಾಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಪುಲ್ವಾಮಾ ದಾಳಿಯಲ್ಲಿ ಪಿತೂರಿಯ ಅನುಮಾನ ಹೊರಹಾಕಿದ್ದ ಕಾಂಗ್ರೆಸ್, ಈಗಲೂ ಮೌನದಿಂದ ಇರುವುದು ನಾಚಿಕೆಗೇಡಿನ ಸಂಗತಿ ಎಂದು ಹರಿಹಾಯ್ದಿದ್ದಾರೆ.ಇಡೀ ದೇಶ ಪುಲ್ವಾಮಾ ದಾಳಿಯಿಂದ ನಲುಗಿತ್ತು. ಒಗ್ಗಟ್ಟಿನಿಂದ ಒಂದೇ ಧ್ವನಿಯಲ್ಲಿ ದಾಳಿಯನ್ನು ಖಂಡಿಸಿತ್ತು. ಆದರೆ ಕಾಂಗ್ರೆಸ್ ಮಾತ್ರ ಇದರಲ್ಲಿ ಪಿತೂರಿಯ ಅನುಮಾನ ಮೂಡುತ್ತಿದೆ ಎಂದು ಹೇಳಿ ದೇಶದ ಏಕತೆಯನ್ನು ಮುರಿಯಲು ಪ್ರಯತ್ನಿಸಿತ್ತು ಎಂದು ಜಾವಡೇಕರ್ ಕಿಡಿಕಾರಿದ್ದಾರೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಕಾಂಗ್ರೆಸ್ ಇದೊಂದೇ ವಿಷಯದಲ್ಲಿ ಅಲ್ಲ,ನಮ್ಮ ಸೇನೆ ಉರಿ ಸರ್ಜಿಕಲ್ ಸ್ಟ್ರೈಕ್ ಮಾಡಿದಾಗಲೂ ಅನುಮಾನ ವ್ಯಕ್ತಪಡಿಸಿತ್ತು. ಸೇನೆ ಮೇಲೆ ನಂಬಿಕೆ ಇಲ್ಲದೇ ನೀವು ಪಾಕಿಸ್ತಾನಕ್ಕೆ ಹೋಗಿ ದಾಳಿ ನಡೆಸಿದ ಸಾಕ್ಷ್ಯ ನೀಡಿ ಎಂದು ಹೇಳಿತ್ತು.