ಪಾಕಿಸ್ತಾನದಲ್ಲಿ ಮತ್ತೊಮ್ಮೆ ರಾರಾಜಿಸಿದ ಅಭಿನಂದನ್ ವರ್ಧಮಾನ್ ; ಪೋಸ್ಟರ್ ನಲ್ಲಿ ಏನಿದೆ ಗೊತ್ತೆ?ಪಾಕಿಸ್ತಾನದ ಪಾರ್ಲಿಮೆಂಟ್ ನಲ್ಲಿ ಎರಡು ದಿನದ ಹಿಂದೆ ಎಂಪಿ ಒಬ್ಬರು ಅಭಿನಂದನ್ ವರ್ಧಮಾನ್ ಅವರನ್ನು ಬಂಧಿಸಿದ್ದ ಸಮಯದಲ್ಲಿ ಪಾಕ್ ಸೇನಾ ಮುಖ್ಯಸ್ಥರಿಗೆ ಭಾರೀ ನಡುಕ ಶುರುವಾಗಿತ್ತು. ಅಭಿನಂದನ್ ಅವರನ್ನೂ ನೋಡಲು ಬಂದಾಗ ಅವರ ಕೈ ಕಾಲುಗಳು ನಡುಗುತ್ತಿತ್ತು. ಮುಖದಲ್ಲಿ ಬೆವರು ಇಳಿಯುತ್ತಿತ್ತು. ನಮ್ಮ ಉಳಿವಿಗಾದರು ಅಭಿನಂದನ್ ಅವರನ್ನು ಭಾರತಕ್ಕೆ ಒಪ್ಪಿಸಬೇಕು ಇಲ್ಲವಾದರೆ ಭಾರತ ನಮ್ಮನ್ನು ನಾಶ ಮಾಡುತ್ತದೆ ಎಂದು ಹೇಳಿದ್ದರು. ಇದಾದ ಬಳಿಕ ಪಾಕಿಸ್ತಾನ ಹಲವಾರು ಕಡೆ ಅಭಿನಂದನ್ ವರ್ಧಮಾನ್ ಅವರ ಪೋಸ್ಟರ್ ಗಳು ಭಾರೀ ಕಾಣುತ್ತಿದೆ.

ಲಾಹೋರ್​ನ ಗಲ್ಲಿ ಗಲ್ಲಿಯಲ್ಲೂ ಪ್ರಧಾನಿ ಮೋದಿ, ಅಭಿನಂದನ್ ಅವರ ಪೋಸ್ಟರ್​ಗಳು ರಾರಾಜಿಸುತ್ತಿವೆ. ಆದರೆ ಇದು ಮೋದಿ ಹಾಗೂ ಅಭಿನಂದನ್​​ರನ್ನ ಹೊಗಳಿ ಅಥವಾ ಭಾರತವನ್ನ ಬೆಂಬಲಿಸಿ ಹಾಕಿರುವ ಬ್ಯಾನರ್, ಪೋಸ್ಟರ್​​ಗಳಲ್ಲ. ಬದಲಾಗಿ ಸರ್ದಾರ್ ಅಯಾಜ್ ಸಾಧಿಕ್​ರನ್ನ ವಿರೋಧಿಸಿ ಹಾಕಲಾಗಿರುವ ಪೋಸ್ಟರ್​ಗಳು.ಪಾಕಿಸ್ತಾನದ ಇನ್ನೊಂದು ಮುಖವನ್ನ ಬಿಚ್ಚಿಟ್ಟ ಸರ್ದಾರ್ ಅಯಾಜ್ ಸಾಧಿಕ್ ವಿರುದ್ಧ ಪಾಕಿಸ್ತಾನದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗ್ತಿದೆ. ಅದೇ ಕಾರಣಕ್ಕೆ ಸರ್ದಾರ್ ಅಯಾಜ್ ಸಾಧಿಕ್​ರನ್ನ ಅವಮಾನಿಸಿ, ಮೂದಲಿಸಿ ಮೋದಿ ಹಾಗೂ ಅಭಿನಂದನ್ ಜೊತೆಗಿನ ಫೋಟೋವನ್ನ ಹಾಕುತ್ತಿದ್ದಾರೆ. ಪಾಕ್ ವಶಕ್ಕೆ ಪಡೆದ ದಿನದಿಂದ ಅಭಿನಂದನ್ ಅವರ ಮೀಸೆ ತುಂಬಾನೇ ಫೇಮಸ್ ಆಗಿದೆ. ಅಂತೆಯೇ ಸರ್ದಾರ್ ಅಯಾಜ್ ಸಾಧಿಕ್​​ಗೆ ಅಭಿನಂದನ್​ ಅವರ ಮೀಸೆಯನ್ನ ಬಿಡಿಸಿ ಪೋಸ್ಟರ್ ಗಳು ಅಂಟಿಸಿದ್ದಾರೆ. ಅಲ್ಲದೇ ಪೋಸ್ಟರ್​​ನಲ್ಲಿ ಅವರ ವಿರುದ್ಧ ಮೋಸಗಾರ, ಮೀರ್ ಸಾಧಿಕ್, ಮೋದಿಯ ಸ್ನೇಹಿತ, ದೇಶದ್ರೋಹಿ ಅಂತೆಲ್ಲಾ ಬರೆದಿದ್ದಾರೆ.

ಪಾಕಿಸ್ತಾನ ಎಲ್ಲ ಕಡೆಯಿಂದಲೂ ತನ್ನ ಮಾನ ಮರ್ಯಾದೆಯನ್ನು ಕಳೆದುಕೊಳ್ಳುತ್ತಲೇ ಬಂದಿದೆ. ತನ್ನ ಕುತಂತ್ರಿ ಬುದ್ಧಿಯನ್ನು ಬಿಡುವ ಲಕ್ಷಣಗಳೇ ಕಾಣುತ್ತಿಲ್ಲ. ಭ-ಯೋ-ತ್ಪಾ_ದನೆ ವಿರುದ್ಧ ಸಮರ ಸಾರಿದ ಫ್ರಾನ್ಸ್ ಅಧ್ಯಕ್ಷರ ವಿರುದ್ಧ ಕಿ-ಡಿ-ಕಾರಿ ವಿಶ್ವದ ಎದುರು ತನ್ನ ಕುತಂತ್ರಿ ಬುದ್ಧಿಯನ್ನು ತೋರಿಸಿದೆ.