ಸಿದ್ದರಾಮಯ್ಯ ಯಾವ ನಾಯಿ? ಎಂದು ಜಾಡಿಸಿದ ಹೆಚ್ ವಿಶ್ವನಾಥ್; ಸಿದ್ದು ಪ್ರತಿಕ್ರಿಯೆ ಏನು?ಉಪಚುನಾವಣೆ ಹಿನ್ನೆಲೆಯಲ್ಲಿ ಅನೇಕ ಪಕ್ಷಾಂತರ ನಡೆದಿದೆ. ಅನೇಕ ಮುಖಂಡರು ಕಾರ್ಯಕರ್ತರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುವುದು ಸಾಮಾನ್ಯವಾಗಿದೆ. ಈ ಪಟ್ಟಿಯಲ್ಲಿ ಭಾರತೀಯ ಜನತಾ ಪಾರ್ಟಿ ಸೇರುವವರ ಸಂಖ್ಯೆ ಜಾಸ್ತಿ ಇದೆ. ಒಬ್ಬೊಬ್ಬರಾಗಿ ಬಿಜೆಪಿ ಪಕ್ಷ ಸೇರುವುದನ್ನು ನೋಡಿ ಕಂಗಾಲಾಗಿರುವ ಸಿದ್ದರಾಮಯ್ಯ ಬಿಜೆಪಿ ಸೇರಿರುವವರೆಲ್ಲರೂ ಉಪ ಚುನಾವಣೆ ಮುಗಿದ ನಂತರ ನಾಯಿಪಾಡಿಗೆ ಬರುತ್ತಾರೆ ಎಂದು ಟೀಕಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್ ವಿಶ್ವನಾಥ್ ಜೆಡಿಎಸ್‌ನಿಂದ ಬಂದಾಗ ಅವರು ಯಾವ ನಾಯಿಯಾಗಿದ್ದರು ತಿಳಿಸಲಿ. ಕಾಂಗ್ರೆಸ್‌ ಸೋಲಿನ ಹತಾಶೆಯಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.ಐದು ವರ್ಷ ಆಡಳಿತ ನಡೆಸಿದರೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 35 ಸಾವಿರ ವೋಟ್‌ಗಳ ಅಂತರದಿಂದ ಸೋತು ಬಾದಾಮಿಗೆ ಓಡಿ ಹೋಗಿದ್ದ ಸಿದ್ದರಾಮಯ್ಯ ಯಾವ ನಾಯಿ ಎಂಬುದನ್ನು ಮೊದಲು ಹೇಳಲಿ ಎಂದು ತಿರುಗೇಟು ನೀಡಿದರು.

ಯಾರದ್ದು ನಾಯಿಪಾಡಿಗೆ ಯಾರದ್ದು ಅರಸನ ಸಾಲು ಎಂಬುದು ಉಪಚುನಾವಣೆ ಮುಗಿದ ನಂತರವಷ್ಟೇ ಗೊತ್ತಾಗಬೇಕಿದೆ. ಅಲ್ಲಿಯವರೆಗೆ ಯಾರ ಟೀಕಾಪ್ರಹಾರವೂ ನಿಲ್ಲುವಂಥದ್ದಲ್ಲ